ತುಮಕೂರು:ಕೆಎಸ್ಆರ್​ಟಿಸಿ ಬಸ್ ಆಕ್ಸೆಲ್ ಬ್ಲೇಡ್ ತುಂಡಾಗಿ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಕಲ್ಲುಕೋಟೆ ಬಳಿ ನಡೆದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.
ಶಿರಾ ನಗರದಿಂದ ಪಟ್ಟನಾಯಕನಹಳ್ಳಿ ಕಡೆಗೆ 40 ಹೆಚ್ಚು ಪ್ರಯಾಣಿಕರನ್ನು ಹೊತ್ತು ಕೆಎಸ್​ಆರ್​ಟಿಸಿ ಬಸ್​ ಸಾಗುತ್ತಿತ್ತು. ಈ ವೇಳೆ ಬಸ್ಸಿನ ಆಕ್ಸೆಲ್ ಬ್ಲೇಡ್ ಕಟ್ಟಾಗಿ ಸೇತುವೆಗೆ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಸ್ವಲ್ಪ ಮುಂದೆ ಸಾಗಿದ್ದರೆ ಸುಮಾರು 20 ಅಡಿ ಆಳದ ಸೇತುವೆಯಿಂದ ಕೆಳಗೆ ಬಿದ್ದು ಭಾರಿ ಪ್ರಾಣಹಾನಿಯಾಗುವ ಸಂಭವವಿತ್ತು. ಆದರೆ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಸೇತುವೆಗೆ ಡಿಕ್ಕಿ ಹೊಡೆದು ಅದು ಹಾಗೇ ನಿಂತಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಗಾಯಾಳುಗಳನ್ನ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಸ್ಸುಗಳ ನಡುವೆ ಡಿಕ್ಕಿ: ಎಂಟು ಮಂದಿ ಸ್ಥಳದಲ್ಲೇ ಸಾವು- ಮೂವರ ಸ್ಥಿತಿ ಚಿಂತಾಜನಕ

ಪುಷ್ಪಾ ಸಿನಿಮಾ ನೋಡಿ ಪ್ರೇರೇಪಣೆ: ರಾಜ್ಯದ ಯುವಕರು ಬಾಯಿಬಿಟ್ಟ ಸತ್ಯ ಕೇಳಿ ಪೊಲೀಸರೂ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eight =
Remember me
