ತುಮಕೂರು:ಪರಿಶಿಷ್ಟ ಜಾತಿಯವಳನ್ನು ಮದುವೆಯಾದರೆ ಸರ್ಕಾರದಿಂದ ಸೌಲಭ್ಯ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಮದುವೆಯಾಗಿ ನಂತರ ಚಿತ್ರಹಿಂಸೆ ಕೊಡುತ್ತಿದ್ದ ಗಂಡನ ಕಿರುಕುಳ ತಾಳದೇ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ.
ಗೌರಮ್ಮಾ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ದಂಪತಿ ನಡುವೆ ಜಗಳವಾಗಿದ್ದರಿಂದ ನೇಣು ಬಿಗಿದುಕೊಂಡು ಗೌರಮ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೌರಮ್ಮ ತುಮಕೂರು ಹೊರವಲಯದ ಮಂಚಗೊಂಡನಹಳ್ಳಿಯ ನಿವಾಸಿ. ಇವರ ವಿವಾಹ ಒಂದು ವರ್ಷದ ಹಿಂದೆಯಷ್ಟೇ ಅನುಪನಹಳ್ಳಿಯ ನಿವಾಸಿ ರವಿತೇಜ ಎಂಬಾತನ ಜತೆ ನಡೆದಿತ್ತು. ಗೌರಮ್ಮಾ ಅವರಿಗೆ ತಂದೆ-ತಾಯಿ ಇರಲಿಲ್ಲ, ಚಿಕ್ಕಮ್ಮನೇ ಸಾಕಿ, ಮದುವೆ ಮಾಡಿಕೊಟ್ಟಿದ್ದರು.
ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್‌‌ವೊಂದರಲ್ಲಿ ಕೆಲಸ ಮಾಡ್ತಿದ್ದಂತಹ ರವಿತೇಜ ಗೌರಮ್ಮಾ ಪರಿಶಿಷ್ಟ ಜಾತಿ ಎಂದು ಮದುವೆಯಾಗಿದ್ದ. ಸರ್ಕಾರದಿಂದ ಸಿಗುವ ಮೂರು ಲಕ್ಷ ರೂಪಾಯಿಯನ್ನೂ ಪಡೆದುಕೊಂಡಿದ್ದ. ಆದರೆ ಜಾತಿಯ ಹೆಸರಿನಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಗೌರಮ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (ದಿಗ್ವಿಜಯ ನ್ಯೂಸ್​)
ಹೆಣ್ಣುಮಗುವೆಂದು ಅಪ್ಪ ಬಿಟ್ಟುಹೋದ… ಪೊಲೀಸರ ಕೈಗೆ ಸಿಕ್ಕಿಬಿದ್ದ ಫಸ್ಟ್​ ರ‍್ಯಾಂಕ್ ರಚನಾ ಬಿಚ್ಚಿಟ್ಟ ನೋವಿನ ಕಥೆ!

55ರ ವರ- 18ರ ವಧು: ‘ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ’ ಎಂದು ಹಾಡುತ್ತಲೇ ಲವ್​ಗೆ ಬಿದ್ದ ಜೋಡಿಯ ಕಥೆ ಇದು…

ಅಮೃತ್​ ಚಿಕಿತ್ಸೆಯಿಂದ ಖ್ಯಾತಿ ಪಡೆದ ಟೆಂಪಲ್​ ಆಫ್​ ಸಕ್ಸಸ್​​ನ ರಘುನಾಥ್​ ಗುರೂಜಿ ವಿಧಿವಶ- ನಾಳೆ ಅಂತ್ಯಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
