ಬೆಂಗಳೂರು:ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಉತ್ತರ ಪ್ರದೇಶ ಮತ್ತು ಅಸ್ಸಾಂ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರಿ ಉದ್ಯೋಗ, ಸಬ್ಸಿಡಿ ಸೌಲಭ್ಯ ಸೇರಿದಂತೆ ಇತರ ಸೌಕರ್ಯಗಳನ್ನು ಪಡೆಯುವುದಿದ್ದರೆ ಗರಿಷ್ಠ ಎರಡು ಮಕ್ಕಳು ಇರಬೇಕು. ಅದಕ್ಕಿಂತ ಹೆಚ್ಚಿಗೆ ಮಕ್ಕಳು ಇದ್ದರೆ ಸೌಲಭ್ಯ ಸಿಗುವುದಿಲ್ಲ ಎಂಬ ಕರಡು ನೀತಿಯನ್ನು ಈ ಸರ್ಕಾರಗಳು ಪ್ರಕಟಿಸಿವೆ.
ಇದು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಬಾಂಬ್​ ಸಿಡಿಸಿದ್ದಾರೆ. ಕರ್ನಾಟಕದಲ್ಲಿಯೂ ಇದೇ ರೀತಿಯ ಕಾನೂನನ್ನು ತರಬೇಕು ಎಂದು ಟ್ವೀಟ್​ ಮಾಡಿದ್ದಾರೆ. ಕರ್ನಾಟಕವು ತನ್ನ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸಕಾಲ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯಾ ಸ್ಫೋಟಸಂಭವಿಸಿದರೆ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಇದೇನಾದರೂ ಜಾರಿಗೊಂಡರೆ ಕರ್ನಾಟಕದಲ್ಲಿಯೂ ಎರಡು ಮಕ್ಕಳ ನೀತಿ ಜಾರಿಯಾಗಲಿದೆ. ಆದರೆ ಸದ್ಯ ಈ ಕುರಿತ ವಿವಾದಕ್ಕೆ ತೆರೆ ಎಳೆದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಂತಹ ಯಾವುದೇ ಪ್ರಸ್ತಾಪ ಸದ್ಯ ಇಲ್ಲ. ಈ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ ಎಂದಿದ್ದಾರೆ.
It is high time Karnataka brings in a new population policy on the lines of Assam and Uttar Pradesh to control its growing population.
With the limited natural resources available, it will be difficult to meet the needs of every citizen if there is a population explosion.
— C T Ravi 🇮🇳 ಸಿ ಟಿ ರವಿ (@CTRavi_BJP)July 13, 2021

ಇದು ಹಿಂದೂ-ಮುಸ್ಲಿಂ ದುರಂತ ಲವ್​ ಸ್ಟೋರಿ: ಹಸೆಮಣೆ ಏರಲು ಸಿದ್ಧವಾದವರಿಗೆ ಕೊಳ್ಳಿ ಇಟ್ಟ ‘ಲವ್​ ಜಿಹಾದ್​’

VIDEO: ಗೆಳೆಯನ ಜತೆಗೆ ಆಮೀರ್​ಖಾನ್​ ಪುತ್ರಿ ಕಳೆದ ಮೋಜಿನ ಕ್ಷಣಗಳ ವಿಡಿಯೋ ವೈರಲ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 5 =
Remember me
