ನನ್ನ ತಂದೆಗೆ ಎರಡು ಮದುವೆ ಆಗಿದೆ. ನಮ್ಮ ತಾಯಿಗೆ ಗೊತ್ತಿಲ್ಲದೆಯೇ 11 ವರ್ಷಗಳ ಹಿಂದೆ ಅನೈತಿಕ ಸಂಬಂಧ ಮುಖಾಂತರ ಇಬ್ಬರು ಮಕ್ಕಳ ಜನನವಾಗಿದೆ. ಅವರ ಮಕ್ಕಳ ಶಾಲಾ ದಾಖಲಾತಿಯಲ್ಲಿ ನಮ್ಮ ತಂದೆಯ ಹೆಸರು ಇದೆ. ನಮ್ಮ ತಂದೆಯವರು, ನಮ್ಮನ್ನು ನಮ್ಮ ತಾಯಿ ಮನೆಯಲ್ಲಿ ಕಳುಹಿಸಿ 28 ವರ್ಷಗಳು ಆಗಿವೆ. ನಮ್ಮ ತಾಯಿ ಕೇಸ್ ಹಾಕಿ ಪೊಟಗಿ ಹಣ 6000ರೂ ಪಡೆಯುತ್ತಿದ್ದಾರೆ. ಆರ್ಡರ್ ಕಾಪಿಯಲ್ಲಿ ಮೊದಲ ಹೆಂಡತಿ ಯಾರು ಎಂದು ನಮೂದಿಸಿಲ್ಲ ಅಥವಾ ನಿರ್ಧಾರ ತೆಗೆದುಕೊಂಡಿಲ್ಲ‌.ನಮ್ಮ ತಂದೆಯ ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ನನಗಿಂತ ಮೊದಲೇ ಹುಟ್ಟಿದ ನಮ್ಮ ತಂದೆಯ ಅನೈತಿಕ ಸಂಬಂಧ ಮುಖಾಂತರ ಹುಟ್ಟಿದ ಮಗು ನನಗಿಂತ 12ವರ್ಷ ದೊಡ್ಡವನಿಗೆ ಆಸ್ತಿ ವರ್ಗಾಯಿಸಿದ್ದಾರೆ ಮತ್ತು ನಾನು 2016ರಲ್ಲಿ O.S ಕೇಸ್ ದಾಖಲು ಮಾಡಿದ್ದೇನೆ. ಈಗ ನಮ್ಮ ತಾಯಿ ಎರಡನೇ ಹೆಂಡತಿ ಅಂದರೆ ನಮಗೆ ಅವರ ಆಸ್ತಿಯಲ್ಲಿ ಪಾಲು  ಸಿಗುತ್ತದೆಯೇ ತಿಳಿಸಿ.
ಉತ್ತರ:ನಿಮ್ಮ ತಂದೆ ಬದುಕಿದ್ದಾರೆಯೇ ತೀರಿಕೊಂಡಿದ್ದಾರೆಯೇ ಎನ್ನುವುದನ್ನು ನೀವು ತಿಳಿಸಿಲ್ಲ. ನಿಮ್ಮ ತಂದೆ ಬದುಕಿರುವಾಗ ಅವರ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ನಿಮ್ಮ ತಂದೆಯ ಎರಡನೇ ಹೆಂಡತಿಯ ಮಕ್ಕಳಿಗೆ ಪಾಲು ಕೇಳುವ ಹಕ್ಕು ಬರುವುದಿಲ್ಲ. (ಈ ಕುರಿತಾದ ಅರ್ಜಿಯ ವಿಚಾರಣೆಯೊಂದು ಸುಪ್ರೀಂಕೋರ್ಟ್​ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ).
ನಿಮ್ಮ ತಂದೆ ತೀರಿಕೊಂಡಿದ್ದರೆ ಅವರ ಎರಡನೆಯ ಹೆಂಡತಿಯ ಮಕ್ಕಳು ಪಾಲು ಕೇಳಬಹುದು. ಮೊದಲನೆಯ ಪತ್ನಿ ಇರುವಾಗ ಎರಡನೇ ಮದುವೆ ಆಗಿದ್ದರೆ, ಎರಡನೇ ಪತ್ನಿಗೆ ಮೃತರ ಆಸ್ತಿಯಲ್ಲಿ ಭಾಗ ಬರುವುದಿಲ್ಲ. ಎರಡನೇ ಹೆಂಡತಿಯ ಮಕ್ಕಳಿಗೆ, ಮೃತರ ಸ್ವಯಾರ್ಜಿತ ಆಸ್ತಿಯಲ್ಲಿ ಸಮಪಾಲು ಇರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮೃತರಿಗೆ ಒಂದು ಭಾಗ ತೆಗೆದು, ಆ ಭಾಗದಲ್ಲಿ ಮೃತರ ಒಂದು ಮತ್ತು ಎರಡನೆಯ ಹೆಂಡತಿಯ ಮಕ್ಕಳ ಮತ್ತು ಮೃತರ ಮೊದಲ ಹೆಂಡತಿಯ ಪಾಲಿಗೆ ಸಮವಾಗಿ , ಮೃತರ ಭಾಗ ಹಂಚಿಕೆ ಆಗುತ್ತದೆ.
ನಿಮ್ಮ ಪ್ರಕರಣದಲ್ಲಿ ಯಾರು ಮೊದಲನೆಯ ಹೆಂಡತಿ ಎನ್ನುವುದು ತೀರ್ಮಾನವಾಗಬೇಕಾಗುತ್ತದೆ. ಪತ್ನಿ ಎನ್ನುವುದು ತೀರ್ಮಾನವಾಗಲು ವಿವಾಹವನ್ನು ಕಾನೂನಿನಲ್ಲಿ ತಿಳಿಸಿರುವಂತೆಯೇ ಸಾಬೀತು ಪಡಿಸಬೇಕು.
ಹಿಜಾಬ್​ ಮಧ್ಯೆ ಬಂದ ಪಗಡಿ, ತಿಲಕ! ಸುಪ್ರೀಂ​ನಲ್ಲಿ ಭರ್ಜರಿ ವಾದ- ಪ್ರತಿವಾದ; ಕೋರ್ಟ್​ ಹೇಳಿದ್ದೇನು?

ಸ್ಕೈಡೈವಿಂಗ್ ಮಾಡುವಾಗ ದುರಂತ: ಖ್ಯಾತ ಟಿಕ್​ಟಾಕ್​ ಸ್ಟಾರ್​ ತಾನ್ಯಾ ಪರ್ದಾಜಿ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
