ಬೆಂಗಳೂರು:ನೋಡೋದಕ್ಕೆ ಇವರು ವೆಲ್​ ಎಜುಕೇಟೆಡ್. ಯುವತಿ ಜೀನ್ಸ್​ ಪ್ಯಾಂಟ್​ ಧರಿಸಿ ಹೈಟೆಕ್​ ಸ್ಟೈಲ್​ನಲ್ಲಿದ್ದರೆ, ಯುವಕನೂ ನೋಡಲು ಸಿರಿವಂತನ ಹಾಗೆ ಕಾಣಿಸ್ತಾನೆ. ಆದರೆ ಮಾಡೋ ಕೆಲ್ಸ ಮಾತ್ರ ಎಂಥದ್ದು ನೋಡಿ…
ಐಷಾರಾಮಿ ಕಾರಿನಲ್ಲಿ ಬರೋ ಇವ್ರು ಮಾಡಿರೋ ಕೆಲಸ, ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ನೋಡಿದರೆ ಹುಬ್ಬೇರಿಸೋದು ಗ್ಯಾರೆಂಟಿ!
ಒಬ್ಬಳು ಲೇಡಿ, ಇನ್ನೊಬ್ಬ ಪುರುಷ. ದುಬಾರಿ ಐ-ಟ್ವೆಂಟಿ ಕಾರಿನಲ್ಲಿ ಇವರಿಬ್ಬರ ಪಯಣ. ರಾತ್ರಿ ವೇಳೆ ಇದೇ ಕಾರಿನಲ್ಲಿ ಇವರ ಕಾರ್ಯಾಚರಣೆ ಶುರು. ಮನೆಗಳ ಮುಂದೆ ಇಟ್ಟಿರೋ ಗಿಡಗಳ ಪಾಟ್​ಗಳು ಇವರ ಟಾರ್ಗೆಟ್​. ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿಯುವ ಇವರಿಬ್ಬರೂ ಒಂದೆಡೆ ಕಾರು ನಿಲ್ಲಿಸುತ್ತಾರೆ. ಕಾರಿನಿಂದ ಇಳಿಯುವ ಕಳ್ಳಿ ಕಾರು ಒರೆಸುವಂತೆ ನಾಟಕ ಮಾಡುತ್ತಾಳೆ. ಯಾರೇ ನೋಡಿದರೂ ಯಾವುದೇ ಸಂದೇಹ ಬರುವುದಿಲ್ಲ. ಅವಳ ಸ್ಟೈಲ್​ ನೋಡಿದ್ರೂ, ಇವು ಆಕೆಯದ್ದೇ ಕಾರು ಎಂದುಕೊಳ್ಳುವ ಕಾರಣ, ಸಂದೇಹ ಪಡುವ ಅಗತ್ಯವೇ ಬೀಳುವುದಿಲ್ಲ. ಕಾರು ಒರೆಸುವಂತೆ ನಾಟಕ ಮಾಡುತ್ತಾ ಈಕೆ ಯಾರಾದರೂ ಬರುತ್ತಾರೆಯೋ ಗಮನಿಸುತ್ತಾಳೆ. ಅದೇ ಕಾರಿನಲ್ಲಿರೋ ಕಳ್ಳ ಮನೆಯ ಎದುರಿಗೆ ಇರುವ ಪಾಟ್​ಗಳನ್ನು ಕದ್ದುಕೊಂಡು ಕಾರಿನ ಹಿಂಭಾಗದಲ್ಲಿ ತುಂಬಿಸಿಕೊಳ್ಳುತ್ತಾನೆ!
ಬೆಂಗಳೂರಿನ ಕೆ.ಆರ್​ ರಸ್ತೆ ಬಳಿಯ ಸ್ಟುಡಿಯೋ ಮುಂದಿದ್ದ ಸಿಸಿಟಿವಿಯಲ್ಲಿ ಈ ಇಬ್ಬರು ಕಳ್ಳರ ದೃಶ್ಯ ಸೆರೆಯಾಗಿದೆ. ಮನೆಯ ಎದುರಿಗೆ ಇರುವ ಪಾಟ್​ಗಳು ಕಳುವಾಗಿವೆ ಎಂದು ಪೊಲೀಸ್​ ಠಾಣೆಯಲ್ಲಿ ಯಾರೂ ಕಂಪ್ಲೇಂಟ್​ ಕೊಡಲ್ಲ ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತು. ದೊಡ್ಡ ದೊಡ್ಡ ಬಂಗಲೆಯಲ್ಲಿ ಇರುವವರು ಚಿಕ್ಕ ಪಾಟ್ ಕಳುವಾದ ಬಗ್ಗೆ ದೂರು ದಾಖಲಿಸಲು ಮುಜುಗರ ಪಟ್ಟುಕೊಳ್ಳುತ್ತಾರೆ ಎನ್ನುವುದೇ ಈ ಕಳ್ಳ-ಕಳ್ಳಿಗೆ ಪ್ಲಸ್​ ಪಾಯಿಂಟ್​!
ಸಿಸಿಟಿವಿ ದೃಶ್ಯ ಆಧರಿಸಿ ಸದ್ಯ ಪೊಲೀಸರು ಈ ಖದೀಮರ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಕೂಡ ಒಬ್ಬ ಯುವತಿ ಇದೇ ರೀತಿ ಪಾಟ್​ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ಯುವತಿ ಈಕೆ ಹೌದೋ, ಅಲ್ಲವೋ ಎಂಬ ಬಗ್ಗೆಯೂ ಇನ್ನಷ್ಟೇ ತಿಳಿಯಬೇಕಿದೆ.(ದಿಗ್ವಿಜಯ ನ್ಯೂಸ್​)
ಇಲ್ಲಿದೆ ನೋಡಿ ವಿಡಿಯೋ:
ಐಷಾರಾಮಿ ಕಾರಿನಲ್ಲಿ ಬಂದು ಮನೆಗಳ ಮುಂದೆ ಇಟ್ಟಿರೋ ಗಿಡಗಳ ಪಾಟ್​ಗಳನ್ನು ಕದಿಯುತ್ತಿರೋ ಬೆಂಗಳೂರಿನ ಕಳ್ಳ-ಕಳ್ಳಿ ದೃಶ್ಯ ಸಿಸಿವಿಟಿಯಲ್ಲಿ ಸೆರೆpic.twitter.com/WaHejjt3iF— Vijayavani (@VVani4U)September 19, 2022
ಐಷಾರಾಮಿ ಕಾರಿನಲ್ಲಿ ಬಂದು ಮನೆಗಳ ಮುಂದೆ ಇಟ್ಟಿರೋ ಗಿಡಗಳ ಪಾಟ್​ಗಳನ್ನು ಕದಿಯುತ್ತಿರೋ ಬೆಂಗಳೂರಿನ ಕಳ್ಳ-ಕಳ್ಳಿ ದೃಶ್ಯ ಸಿಸಿವಿಟಿಯಲ್ಲಿ ಸೆರೆpic.twitter.com/WaHejjt3iF
ಮೂಡಬಿದಿರೆ ಟು ಮುರಾದಾಬಾದ್​: 45 ಗಂಟೆಗಳಲ್ಲಿ 2700 ಕಿ.ಮೀ ಪ್ರಯಾಣ- ಆಂಬುಲೆನ್ಸ್​ ಚಾಲಕರಿಗೆ ಹ್ಯಾಟ್ಸ್​ಆಫ್​!
ಕಾಮುಕರ ಮನೆಗಳ ಮೇಲೆ ಬುಲ್ಡೋಜರ್​ ಪ್ರಹಾರ! ಗ್ಯಾಂಗ್​ ರೇಪಿಸ್ಟ್​ಗಳಿಗೆ ಹೀಗೊಂದು ಪಾಠ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven + 12 =
Remember me
