ಉಡುಪಿ:ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ಮಹಿಳೆಯೊಬ್ಬರ ನಿಯಂತ್ರಣ ತಪ್ಪಿದ್ದರಿಂದ ಕಾರು ಕಂದಕಕ್ಕೆ ಉರುಳಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ರಭಸಕ್ಕೆ ರಸ್ತೆ ಬದಿಯಲ್ಲಿ ನಿಂತಿದ್ದ ಐದು ಬೈಕ್​ಗಳು ನಜ್ಜುಗುಜ್ಜಾಗಿವೆ.
ಚಾಲಕಿಯು ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದರು. ಈ ಸಮಯದಲ್ಲಿ ಅವರು ಚಾಲನೆ ಮಾಡುತ್ತಿದ್ದ ಕಾರು ಲಕ್ಷ್ಮೀಂದ್ರ ನಗರದ ನಿಯಂತ್ರಣ ತಪ್ಪಿಬಿಟ್ಟಿದೆ. ಪಕ್ಕದಲ್ಲಿಯೇ ಇದ್ದ ಕಂದಕಕ್ಕೆ ಕಾರು ಹೋಗಿದೆ. ಅದೃಷ್ಟವಶಾತ್​ ಅವರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದಕ್ಕೆ ಕಾರಣ, ಕಂದಕದಲ್ಲಿದ್ದ ಮರ. ಕೆಳಭಾಗದಲ್ಲಿ ಮರವಿತ್ತು. ಈ ಹಿನ್ನೆಲೆಯಲ್ಲಿ ಅವರ ಕಾರು ಕಂದಕಕ್ಕೆ ಉರುಳಿದರೂ ಮರ ಅಡ್ಡ ಬಂದಿದ್ದರಿಂದ ಚಾಲಕಿಯ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.
ಆದರೆ ಕಾರು ಕಂದಕಕ್ಕೆ ಉರುಳುತ್ತಿದ್ದ ರಭಸದಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಐದು ಬೈಕ್​ಗಳು ಕೂಡ ಕಾರಿಗೆ ಡ್ಯಾಷ್​ ಹೊಡೆದು ಕಂದಕಕ್ಕೆ ಬಿದ್ದುಬಿಟ್ಟಿವೆ. ಇವೆಲ್ಲವೂ ನ್ಯೂ ಮಣಿಪಾಲ್ ಬಜಾರ್​ನ ಸೆಕೆಂಡ್ ಹ್ಯಾಂಡ್ ವಾಹನಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಮಣಿಪಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸರ್‌… ನಿಮ್ಮ ಫಿಲ್ಮ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಕಳಿಸಲಾಗ್ತಿದೆ… ಪ್ರಸಿದ್ಧ ಡೈರೆಕ್ಟರ್‌ಗೆ ₹66 ಸಾವಿರ ಟೋಪಿ!

ಪೆಟ್ರೋಲ್‌ ಬೆಲೆ ಏರಿತು ಅಂತ ಬೈಯೋದೇಕೆ? ಎಲ್ಲದಕ್ಕೂ ಸೊಲ್ಯೂಷನ್‌ ಇದೆ ಎಂದವ ಮಾಡಿದ ಈ ಪ್ಲ್ಯಾನ್‌ ಈಗ ಸಕತ್‌ ವೈರಲ್‌!

ಬಾಗಲಕೋಟೆ ಬಳಿ ಭೀಕರ ಅಪಘಾತ: ಮದುವೆಗೆ ಹೋದವರು ಬೆಂಕಿಯಲ್ಲಿ ದಹನವಾದರು

ವಿಚ್ಛೇದನದ ಆದೇಶದ ವಿರುದ್ಧ ಅಪೀಲ್‌ ಹೋಗದಿದ್ರೆ ವರ್ಷಗಳ ನಂತರ ಜೀವನಾಂಶದಿಂದ ತಪ್ಪಿಸಿಕೊಳ್ಳಬಹುದಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − 12 =
Remember me
