ಭಾರತೀಯ ಸೇನೆಯಲ್ಲಿವಿವಿಧ ಹುದ್ದೆಗಳ ನೇಮಕಾತಿಗಾಗಿ ರ‍್ಯಾಲಿ ನಡೆಸುತ್ತಿದ್ದು, ಪಾಲ್ಗೊಳ್ಳಲು ಇಚ್ಛಿಸುವರು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ.
ಯಾವ ಜಿಲ್ಲೆಗಳ ಯುವಕರಿಗೆ ಅವಕಾಶ?ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ* ಸೋಲ್ಜರ್ ಜನರಲ್ ಡ್ಯೂಟಿ* ಸೋಲ್ಜರ್ ಟೆಕ್ನಿಕಲ್* ಸೋಲ್ಜರ್ ಟ್ರೇಡ್ಸ್‍ಮನ್ (ಚೆಫ್ ವಾಷರ್‍ಮನ್) (ಎಸ್ಸೆಸ್ಸೆಲ್ಸಿ)* ಸೋಲ್ಜರ್ ಟ್ರೇಡ್ಸ್‍ಮನ್ (ಮೆಸ್ ಕೀಪರ್, ಹೌಸ್ ಕೀಪರ್) (8ನೇ ತರಗತಿ)* ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್, ಇನ್ವೆಂಟರಿ ಮ್ಯಾನೇಜ್‍ಮೆಂಟ್* ಸೋಲ್ಜರ್ ಟೆಕ್ನಿಕಲ್- ನರ್ಸಿಂಗ್ ಅಸಿಸ್ಟೆಂಟ್, ನರ್ಸಿಂಗ್ ಅಸಿಸ್ಟೆಂಟ್ ವೆಟರ್ನರಿ
ವಿದ್ಯಾರ್ಹತೆಸೋಲ್ಜರ್ ಜನರಲ್ ಡ್ಯೂಟಿಗೆ 10ನೇ ತರಗತಿ ಪಾಸಾಗಿದ್ದು, ಕನಿಷ್ಠ ಶೇ.45 ಅಂಕ ಪಡೆದಿರಬೇಕು. ಟೆಕ್ನಿಕಲ್ ಹಾಗೂ ಟೆಕ್ ನರ್ಸಿಂಗ್ ಹುದ್ದೆಗಳಿಗೆ 12ನೇ ತರಗತಿಯಲ್ಲಿ ವಿಜ್ಞಾನ ವ್ಯಾಸಂಗ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಕ್ಲರ್ಕ್, ಸ್ಟೋರ್ ಕೀಪರ್ ಮೊದಲಾದ ಹುದ್ದೆಗಳಿಗೆ 12ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳ ಪ್ರಮಾಣಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ.
ವಯೋಮಿತಿ:ಎಲ್ಲ ಹುದ್ದೆಗಳಿಗೂ ಕನಿಷ್ಠ 17 ವರ್ಷ ಆರು ತಿಂಗಳು, ಸೋಲ್ಜರ್ ಜನರಲ್ ಹುದ್ದೆಗೆ ಗರಿಷ್ಠ 21 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 23 ವರ್ಷ ವಯೋಮಿತಿ ನಿಗದಿಯಾಗಿದೆ.
ರ್ಯಾಲಿ ದಿನಾಂಕ:ಮೇ 7 ರಿಂದ 12ರ ವರೆಗೆ ಕೋಲಾರದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ನಡೆಯಲಿದೆ.
ದೈಹಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಎತ್ತರ 162-166 ಸೆಂ. ಮೀಟರ್ ಇರಬೇಕು. ಎದೆಯ ಸುತ್ತಳತೆ 77 ಸೆಂ. ಮೀಟರ್ ಇರಬೇಕು. ಎದೆಯುಬ್ಬಿಸಿದಾಗ 5 ಸೆಂ. ಮೀ ಹೆಚ್ಚಾಗಬೇಕು.
ಆಯ್ಕೆ ಪ್ರಕ್ರಿಯೆ:1.6 ಕಿ.ಮೀ ಓಟವನ್ನು 5 ನಿಮಿಷ 30 ಸೆಕೆಂಡ್‍ಗಳಲ್ಲಿ ಪೂರೈಸಬೇಕು. ಟೆಕ್ನಿಕಲ್ ಹುದ್ದೆಗಳಿಗೆ 5 ನಿಮಿಷ 45 ಸೆಕೆಂಡ್‍ಗಳು. ಇದಲ್ಲದೇ, ಪುಲ್‍ಅಪ್ಸ್ ಹಾಗೂ ಉದ್ದ ಜಿಗಿತದಲ್ಲಿ ಅರ್ಹತೆ ಪಡೆಯಬೇಕು. ಇದಾದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ಲಿಖಿತ ಪರೀಕ್ಷೆ ಇರುತ್ತದೆ.
ರ‍್ಯಾಲಿ ವೇಳೆ ತರಬೇಕಾದ ದಾಖಲೆಗಳುರ‍್ಯಾಲಿ ವೇಳೆ ಅಭ್ಯರ್ಥಿಗಳು ಕೆಲ ಪ್ರಮಾಣ ಪತ್ರಗಳನ್ನು ತರಬೇಕಿದ್ದು, ಅದರ ವಿವರ ಇಂತಿದೆ: ಪ್ರವೇಶ ಪತ್ರ, 20 ಫೋಟೋಗಳು (3 ತಿಂಗಳಿಗಿಂತ ಹಳೆಯದಾಗಿರಬಾರದು), ಶೈಕ್ಷಣಿಕ ದಾಖಲೆಗಳ ಪ್ರಮಾಣ ಪತ್ರ, ನಿವಾಸಿ ಪ್ರಮಾಣ ಪತ್ರ ( ತಹಸೀಲ್ದಾರ್ ಕಚೇರಿಯಿಂದ ಪಡೆದ), ಜಾತಿ ಪ್ರಮಾಣ ಪತ್ರ, ಕೊನೆಯ ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಿಂದ ನಡವಳಿಕೆ ಪ್ರಮಾಣ ಪತ್ರ, ಎನ್‍ಸಿಸಿ ಹಾಗೂ ಕ್ರೀಡಾಪಟುಗಳು ಎರಡು ವರ್ಷಕ್ಕಿಂತ ಹಳೆಯದ್ದಲ್ಲದ ಸಾಧನೆಯ ಪ್ರಮಾಣ ಪತ್ರ, ಅವಿವಾಹಿತ ಪ್ರಮಾಣಪತ್ರ, ಸಂಬಂಧದ ಪ್ರಮಾಣ ಪತ್ರಗಳನ್ನು ತರಬೇಕು.
ನೋಂದಣಿಗೆ ಕೊನೇ ದಿನ: 26.4.2021ಅಧಿಸೂಚನೆಗೆ:https://bit.ly/2OGGjkbಮಾಹಿತಿಗೆ:http://www.joinindianarmy.nic.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ವಿವಿಧ ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿದೆ 25 ಹುದ್ದೆಗಳು- 45 ವರ್ಷಗಳವರೆಗೂ ಇದೆ ಅವಕಾಶ

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಿಪ್ಲೋಮಾ ಪದವೀಧರರಿಗೆ ಟೆಲಿಕಾಂನಲ್ಲಿ ಉದ್ಯೋಗಾವಕಾಶ- ಇಂದೇ ಕೊನೆ ದಿನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + eighteen =
Remember me
