ಬಾಗಲಕೋಟೆ:ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಇದ್ದ ಊಹಾಪೋಹಗಳಿಗೆ ಎಂದೋ ತೆರೆ ಬಿದ್ದು, ಬಸವರಾಜ ಬೊಮ್ಮಾಯಿ ಅವರು ಆ ಸ್ಥಾನವನ್ನು ಏರಿದ್ದರೂ ಇನ್ನೂ ಹಲವು ಆಕಾಂಕ್ಷಿಗಳು ಈ ಖುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ.
ತಮ್ಮ ಆಸೆಯನ್ನು ಬಹಿರಂಗಗೊಳಿಸಿದ ಸಚಿವ ಉಮೇಶ್​ ಕತ್ತಿ, ತಮ್ಮೆಲ್ಲರ ಆಸೆ ಈಡೇರಿದ್ರೆ ಬರುವಂತಹ ಕೆಲವೇ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗುವೆ ಎಂದರು. ಇದೇ ಅವಧಿಯಲ್ಲಾ ಎಂದು ಕೇಳಿದ ಪ್ರಶ್ನೆಗೆ, ಮತ್ತೆ ಏನು ಹೇಳಬೇಕ್ರಿ…? ಜೀವಂತ ಇದ್ರೆ ಇದೇ ಅವಧಿಯಲ್ಲಿ ಸಿಎಂ, ಸತ್ತರೆ ಮುಂದಿನ ಅವಧಿಯಲ್ಲಿ, ಒಟ್ನಲ್ಲಿ ಆಗೋದು ಗ್ಯಾರೆಂಟಿ ಎಂದರು. ನಾನೂ ಹಿರಿಯನಿದ್ದೇನೆ. ಸಾಕಷ್ಟು ರಾಜಕೀಯ ಅನುಭವಗಳಿವೆ ಎಂದರು.
ಬಾಗಲಕೋಟೆ ಉಸ್ತುವಾರಿ ಸಚಿವ ಆಗಿರುವ ಉಮೇಶ್​ ಕತ್ತಿ ಬಾಗಲಕೋಟೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಬಳಿಕ ಅವರು ಮಾತನಾಡುತ್ತಿದ್ದರು. ಇನ್ನೂ ಎರಡು ವರ್ಷ ಇದ್ಯಲ್ಲ, ಆ ಅವಧಿಯಲ್ಲಿ ನಾನು ಬದುಕಿದ್ದರೆ ಸಿಎಂ ಆಗೋದು ಗ್ಯಾರೆಂಟಿ ಎಂದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಇದ್ದಾಗ ಸ್ವಾತಂತ್ರ್ಯೋತ್ಸವ ಸುವರ್ಣ ಮಹೋತ್ಸವದ ಧ್ವಜಾರೋಹಣಮಾಡಿದ್ದೆ. ಈಗ ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಅಮೃತ ಮಹೋತ್ಸವದ ಧ್ವಜಾರೋಹಣ ಮಾಡುತ್ತಿದ್ದೇನೆ ಎಂದರು.
ಇದೇ ವೇಳೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ವಿಚಾರವಾಗಿಯೂ ಮಾತನಾಡಿದ ಸಚಿವರು, ಈ ಬಗ್ಗೆ ಜನರ ಮುಂದೆ ಚರ್ಚೆಯಾಗಬೇಕು. ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರು ಇಡುವ ಬಗ್ಗೆ ಜನ ತೀರ್ಮಾನಿಸಲಿ. ಜನರು ಹೇಗೆ ಹೇಳುತ್ತಾರೆ ಹಾಗೆ ಮಾಡುವುದು ಉತ್ತಮ ಎಂದರು.
ಬದುಕಿರುವಾಗಲೇ ಸೋನಿಯಾ ಗಾಂಧಿಯನ್ನು ‘ಹುತಾತ್ಮ’ ಎಂದು ಕೊಂಡಾಡಿದ ಡಿ.ಕೆ.ಶಿವಕುಮಾರ್​!

ಮದುವೆಯಾಗೋ ಭರವಸೆ ಕೊಟ್ಟರೆ ಮಾತ್ರ ಯುವತಿಯರು ದೈಹಿಕ ಸಂಪರ್ಕ ಬೆಳೆಸ್ತಾರೆ ಎಂದ ಹೈಕೋರ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
