ಬೆಂಗಳೂರು:ಹವಾಮಾನ ವೈಪರಿತ್ಯಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೂನ್‌ನಲ್ಲಿ ಮುಂಗಾರು ಮಳೆ ಕ್ಷೀಣಿಸಿದರೆ ಜುಲೈನಲ್ಲಿ ಸುರಿಯಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ ವಾಡಿಕೆಗಿಂತ ಅಧಿಕವಾಗಿ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ 4 ವರ್ಷಗಳಿಂದ ಮಳೆ ಬೀಳುವ ಅವಧಿಯಲ್ಲಿ ಗಣನೀಯ ವ್ಯತ್ಯಾಸಯಾಗುತ್ತಿರುವುದು ಕಂಡುಬಂದಿದೆ. ಇದರಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.
ಮಲೆನಾಡು ಜಿಲ್ಲೆಗಳಲ್ಲಿ 2018ರ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೆ, 2019ರಿಂದ 2022ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ ಕಳೆದ 4 ವರ್ಷಗಳಿಂದ ಜೂನ್‌ನಲ್ಲಿ ಮಳೆ ಕುಂಠಿತವಾಗುತ್ತಿದೆ. ಅದೇರೀತಿ, ದಕ್ಷಿಣ ಒಳನಾಡಿನಲ್ಲಿ 2017ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದರೆ, 2018ರಿಂದ 2022ರ ಜೂನ್‌ನಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲಿ 2017, 2019, 2020 ಮತ್ತು 2021ರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೆ 2018 ಮತ್ತು 2022ರ ಜೂನ್‌ನಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಕಳೆದ 5 ವರ್ಷಗಳಿಂದ ಜೂನ್ ಅವಧಿಯಲ್ಲೇ ರಾಜ್ಯಾದ್ಯಂತ ಮಳೆ ಕುಂಠಿತವಾಗಿದೆ. ಈ ಕ್ರಮದಿಂದ ಮಳೆಗಾಲ ಅವಧಿಯು ಜೂನ್‌ನಿಂದ ಜುಲೈಗೆ ಬದಲಾಗಿದೆ.
ಗಂಟೆಯಲ್ಲೇ 100 ಮಿಮೀ ಮಳೆ:ತಿಂಗಳಲ್ಲಿ ಬೀಳಬೇಕಿದ್ದ ಮಳೆ ಪ್ರಮಾಣ ವಾರದಲ್ಲೇ, ವಾರದಲ್ಲೇ ಬೀಳಬೇಕಿದ್ದ ಮಳೆ ಪ್ರಮಾಣ ಒಂದು ದಿನದಲ್ಲೇ ಹಾಗೂ ದಿನದಲ್ಲಿ ಬೀಳುವ ಮಳೆ ಪ್ರಮಾಣ ಒಂದು ಗಂಟೆಯಲ್ಲಿ ಸುರಿಯುತ್ತಿದೆ. ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ಒಂದು ಗಂಟೆ ಅವಧಿಯಲ್ಲಿ ಅಂದಾಜು 100 ಮಿಮೀವರೆಗೆ ಮಳೆಯಾಗುತ್ತಿದೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಗಪ್​ಚುಪ್​ ಪಡೀತೀರೋ ಸಂಸದನಾದ ಅಪ್ಪ, ಶಾಸಕನಾದ ಮಗ!

ಲಾಲ್​ಬಾಗ್​ನಲ್ಲಿ ಅಪ್ಪು ಪುತ್ಥಳಿ ಅನಾವರಣ- ಕರ್ನಾಟಕ ರತ್ನ ಪ್ರಶಸ್ತಿ ಡೇಟ್​ ಫಿಕ್ಸ್​: ಸಿಎಂ ಘೋಷಣೆ

ನಕಲಿ ಮದ್ಯ ಸೇವಿಸಿ ಏಳು ಮಂದಿ ಸಾವು: ಕಣ್ಣು ಕಳೆದುಕೊಂಡ 25ಕ್ಕೂ ಅಧಿಕ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
