ಬೆಂಗಳೂರು: ಇದಾಗಲೇ ಅನ್‌ಲಾಕ್‌ 2.0 ಸಂದರ್ಭದಲ್ಲಿ ಕೆಲವು ವಿನಾಯಿತಿಗಳನ್ನು ನೀಡಿರುವ ಬೆನ್ನಲ್ಲೇ ಇದೀಗ ಅನ್‌ಲಾಕ್‌ 3.0ಗೆ ಕ್ಷಣಗಣನೆ ಶುರುವಾಗಿದೆ.ನಾಳೆ ಅಂದರೆ ಜುಲೈ 3ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಮೀಟಿಂಗ್ ನಡೆಯಲಿದ್ದು, ಈ ಸಭೆಯಲ್ಲಿ ಯಾವೆಲ್ಲಾ ಸೌಕರ್ಯಗಳು ಇರಬೇಕು, ಯಾವುದಕ್ಕೆ ನಿರ್ಬಂಧ ಮುಂದುವರೆಸಬೇಕು ಎಂಬ ಬಗ್ಗೆ ನಿರ್ಧಾರ ಆಗಲಿದೆ.ಮುಖ್ಯಮಂತ್ರಿಗಳು ಹಿರಿಯ ಸಚಿವರ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದು, ಈ ಸಭೆಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಯಾವುದಕ್ಕೆಲ್ಲಾ‌ ವಿನಾಯಿತಿ ಸಿಗಬಹುದು?– ವ್ಯಾಪಾರದ ಅವಧಿ ಇನ್ನಷ್ಟು ವಿಸ್ತರಣೆ ಸಾಧ್ಯತೆ– ಮಾಲ್ ಗಳಲ್ಲಿ ಶೇಕಡಾ 50ರಷ್ಟು ಆಧಾರದಲ್ಲಿ ಅನುಮತಿ ಸಾಧ್ಯತೆ– ಒಳಾಂಗಣ ಶೂಟಿಂಗ್ ಗೆ ಅನುಮತಿ ಸಾಧ್ಯತೆ– ಬಾರ್, ರೆಸ್ಟೋರೆಂಟ್‌ಗಳಿಗೆ ಅನುಮತಿ ( ಶೇಕಡಾ 50 ರಷ್ಟು ಗ್ರಾಹಕರಿಗೆ ಅವಕಾಶ)– ಪ್ರವಾಸಿ ತಾಣಗಳಿಗೆ ಅನುಮತಿ ಸಾಧ್ಯತೆ( ಕೋವಿಡ್ ನಿಯಮ ಪಾಲನೆ ಆಧಾರದ ಮೇಲೆ)– ಉದ್ಯಾನವನ ಪೂರ್ಣ ಪ್ರಮಾಣದಲ್ಲಿ ಓಪನ್ ಸಾಧ್ಯತೆ( ಜಿಮ್ ಸಲಕರಣೆ ಉಪಯೋಗಿಸೋದಕ್ಕೆ ನಿಷೇಧ)– ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಗೆ ಅವಕಾಶ– ಕ್ಯಾಬ್, ಆಟೋಗಳಿಗೆ ವಿಧಿಸಿರೋ ನಿರ್ಬಂಧ ತೆಗೆಯುವ ಸಾಧ್ಯತೆ( ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು)– ದೇವಸ್ಥಾನಗಳಲ್ಲಿ ಕನಿಷ್ಠ ಭಕ್ತಾಧಿಗಳಿಗೆ ಅವಕಾಶ ಸಾಧ್ಯತೆ– ಹೊಟೇಲ್‌ಗಳಲ್ಲಿ ಈಗಿನ ನಿಯಮ ಮುಂದುವರಿಕೆ (ಶೇಕಡಾ 50ರಷ್ಟು ಗ್ರಾಹಕರಿಗೆ ಅವಕಾಶ)ಮದುವೆ ಅಂತ್ಯ ಸಂಸ್ಕಾರಕ್ಕೆ ಈಗಿನ ನಿಯಮವೇ ಮುಂದುವರಿಕೆ– ವೀಕೆಂಡ್ ಕರ್ಫ್ಯೂವಿನಲ್ಲಿ ಇನ್ನಷ್ಟು ಸಡಿಲಿಕೆ– ಕಾಲೇಜುಗಳ ಆರಂಭಕ್ಕೆ ಅನುಮತಿ (ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಯಾವುದಕ್ಕಿಲ್ಲ ವಿನಾಯಿತಿ?– ಚಿತ್ರ ಮಂದಿರ ಓಪನ್ ಆಗೋದು ಅನುಮಾನ– ಶಾಪಿಂಗ್ ಮಾಲ್ ಒಳಗಡೆ ಇರೋ ಫುಡ್ ಕೋರ್ಟ್– ಶಾಲೆಗಳು ಒಪನ್ ಆಗೋದು ಅನುಮಾನ
ಅನ್ ಲಾಕ್ ನಲ್ಲಿ ಸರ್ಕಾರ ಏನು ಮಾಡುತ್ತೆ..?
– ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ– ಡೆಲ್ಟಾ + ವೈರಸ್ ಹೆಚ್ಚಿರೋ ರಾಜ್ಯಗಳ ಗಡಿಯಲ್ಲಿ ಚೆಕಿಂಗ್– ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಹೊರ ರಾಜ್ಯದಿಂದ ಎಂಟ್ರಿ– ನೈಟ್ ಕರ್ಫ್ಯೂ ಮುಂದುವರೆಸುವ ಸಾಧ್ಯತೆ– ಕೋವಿಡ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು
ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
