ಬೆಂಗಳೂರು:ಪತಿ ಹೆಸರಿಗೆ ಮಾತ್ರ ಪತಿಯಾಗಿದ್ದು, ಹಣಕ್ಕಾಗಿ ಪತ್ನಿಯನ್ನು ಪೀಡಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ. ದಂಪತಿ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಇಲ್ಲದಿದ್ದರೂ, ಪತ್ನಿಯನ್ನು ಗಂಡನಾದವ ಹಣದ ಹಸುವಿನಂತೆ ಅಥವಾ ಆಕೆಯನ್ನು ಎಟಿಎಂನಂತೆ ನಡೆಸಿಕೊಳ್ಳುವುದು ಆಕೆಗೆ ನೀಡುವ ಮಾನಸಿಕ ಕಿರುಕುಳಕ್ಕೆ ಸಮ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.
ತನ್ನಿಂದ ಪದೇ ಪದೇ ಹಣ ಕೇಳುತ್ತಿದ್ದ ಪತಿಯ ವಿರುದ್ಧ ಮಹಿಳೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
1991 ರಲ್ಲಿ ಈ ದಂಪತಿಯ ಮದುವೆಯಾಗಿತ್ತು. ಪತಿಗೆ ಮೈತುಂಬಾ ಸಾಲ ಇತ್ತು. ಇದೇ ಕಾರಣಕ್ಕೆ ದಿನವೂ ಮನೆಯಲ್ಲಿ ಜಗಳವಾಗುತ್ತಿತ್ತು. ಜೀವನ ನಿರ್ವಹಣೆಗೆಂದು ಪತ್ನಿ ಬ್ಯಾಂಕ್​ ಉದ್ಯೋಗಕ್ಕೆ ಸೇರಿದರು. 2008ರಲ್ಲಿ ದುಬೈಗೆ ಹೋದ ಪತಿ, ಅಲ್ಲಿ ಸಲೂನ್​ ತೆರೆಯಲು ಪತ್ನಿಯಿಂದ 60 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆದರೆ ವಿಪರೀತ ನಷ್ಟ ಅನುಭವಿಸಿ ಭಾರತಕ್ಕೆ ವಾಪಸ್​ ಆಗಿದ್ದರು. ಆದರೆ ಪುನಃ ಹಣಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ವ್ಯಾಪಾರ ನಡೆಸುವ ನೆಪದಲ್ಲಿ ಪತ್ನಿಯಿಂದ 60 ಲಕ್ಷ ರೂಪಾಯಿ ಹಣವನ್ನು ಪತಿ ಪಡೆದುಕೊಂಡಿದ್ದಾರೆ. ಹೀಗೆ ಪದೇ ಪದೇ ತಮ್ಮಿಂದ ಹಣ ಕೇಳುತ್ತಿದ್ದು, ಇದರಿಂದ ಬೇಸತ್ತಿರುವುದಾಗಿ ಪತ್ನಿ ಕೋರ್ಟ್​ಗೆ ಹೇಳಿದ್ದರು. ಹೀಗೆ ಪದೇ ಪದೇ ಹಣ ಕೇಳಿದ ಮಾತ್ರಕ್ಕೆ ವಿಚ್ಛೇದನ ನೀಡಲಾಗದು ಎಂದು ಕೌಟುಂಬಿಕ ಕೋರ್ಟ್​ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮಹಿಳೆ ಹೈಕೋರ್ಟ್​ ಮೊರೆ ಹೋಗಿದ್ದರು. ಪತಿ ಮಹಿಳೆಯೊಂದಿಗೆ ಯಾವುದೇ ಭಾವನಾತ್ಮಕ ಬಾಂಧವ್ಯವನ್ನು ಹೊಂದಿಲ್ಲ. ಕೇವಲ ಯಾಂತ್ರಿಕವಾಗಿ ಪತಿಯ ಪಾತ್ರವನ್ನು ಪೋಷಿಸಿದ್ದಾರೆ. ಪತಿಯಿಂದ ಪತ್ನಿಗೆ ಆಗಿರುವ ನೋವು, ಮಾನಸಿಕ ಕಿರುಕುಳ ಎಂದು ಪರಿಗಣಿಸಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ ನಡೆಸುವ ನೆಪದಲ್ಲಿ ಪತ್ನಿಯಿಂದ 60 ಲಕ್ಷ ರೂಪಾಯಿ ಹಣವನ್ನು ಪತಿ ಪಡೆದುಕೊಂಡಿದ್ದಾರೆ. ಆಕೆಯನ್ನು ಆತ ಕೇವಲ ಹಣ ನೀಡುವ ಎಟಿಎಂ ಆಗಿ ಬಳಸಿಕೊಂಡಿದ್ದಾರೆ. ಗಂಡನ ಈ ವರ್ತನೆ ಮಾನಸಿಕ ಕಿರುಕುಳಕ್ಕೆ ಸಮ ಎಂದ ಕೋರ್ಟ್​, ವಿಚ್ಛೇದನಕ್ಕೆ ಆದೇಶಿಸಿದೆ.(ಏಜೆನ್ಸೀಸ್​)
ನೀವು ಧೈರ್ಯಶಾಲಿ ಇರಬಹುದು, ಆದ್ರೆ ಅಗ್ನಿವೀರರಲ್ಲ, ಮುಂದೆಯೂ ಆಗಲ್ಲ, ​ಸುಮ್ನೆ ಅಡ್ಡಿಪಡಿಸಬೇಡಿ: ಸುಪ್ರೀಂ ತರಾಟೆ

ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

VIDEO: ಭೂತ, ಪಿಶಾಚಿ, ಪ್ರೇತಾತ್ಮ ಇದೆ ಎಂದು ನಂಬದವರನ್ನೂ ಬೆಚ್ಚಿಬೀಳಿಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಭಾರತಕ್ಕೂ ಮತ್ತೊಂದು ಗಂಡಾಂತರ? ಮುನ್ನೆಲೆಗೆ ಬಂದ ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ ವಾಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 10 =
Remember me
