ಬೆಂಗಳೂರು:ನಟ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ. ಅದರಲ್ಲಿಯೂ ಸುದೀಪ್​ ಅಭಿಮಾನಿಗಳು ಕಳೆದ ಕೆಲ ತಿಂಗಳುಗಳಿಂದ ಚಾತಕ ಪಕ್ಷಿಯಂತೆ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಇದೇ 28ರಂದು ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ, ಅಭಿಮಾನಿಗಳು ಕೌಂಟ್​ಡೌನ್​ ಶುರು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಚಲನಚಿತ್ರವಾಗಿರುವ ವಿಕ್ರಾಂತ್​ ರೋಣ್​ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಒಂದು ಮಾಹಿತಿ ಪ್ರಕಾರ ಚಿತ್ರವು ಈವರೆಗಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 3500 ಸ್ಕ್ರೀನ್​ಗಳಲ್ಲಿ ತೆರೆಕಾಣಲಿದೆ.
ಸಿನಿಮಾದ ಟ್ರೈಲರ್​ ಇತ್ತೀಚೆಗೆ ಬಿಡುಗಡೆಯಾದಾಗಲೇ ಭಾರಿ ಹವಾ ಸೃಷ್ಟಿಸಿತ್ತು ಈ ಚಿತ್ರ. ಇದರ ರಾ ರಾ ರಕ್ಕಮ್ಮ ಹಾಡಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರೂ ಸ್ಟೆಪ್​ ಹಾಕಿ ಖುಷಿಪಟ್ಟಿದ್ದಾರೆ.
ADVANCE BOOKING for#VikrantRona(Kannada) ,OPENS TODAY 12noon 🥂❤️#VRonJuly28@anupsbhandari@JackManjunath@Asli_Jacqueline#VRin3D#VikrantRonapic.twitter.com/EuGS2TuBIc— Kichcha Sudeepa (@KicchaSudeep)July 24, 2022
ADVANCE BOOKING for#VikrantRona(Kannada) ,OPENS TODAY 12noon 🥂❤️#VRonJuly28@anupsbhandari@JackManjunath@Asli_Jacqueline#VRin3D#VikrantRonapic.twitter.com/EuGS2TuBIc
ಇದೀಗ ಎಲ್ಲರಿಗೂ ಖುಷಿ ತರುವ ಸುದ್ದಿಯೊಂದನ್ನು ಖುದ್ದು ಸುದೀಪ್​ ನೀಡಿದ್ದು, ಈ ಕುರಿತು ಟ್ವೀಟ್​ ಮಾಡಿದ್ದಾರೆ. ಅದೇನೆಂದರೆ ಇವತ್ತಿನಿಂದ (ಜುಲೈ 24) ಈ ಚಿತ್ರದ ಟಿಕೆಟ್​ ಬುಕಿಂಗ್​ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಯಿಂದಲೇ ಬುಕಿಂಗ್​ ಶುರುವಾಗಿರುವುದಾಗಿ ಸುದೀಪ್​ ಹೇಳಿದ್ದಾರೆ.
ಚಿತ್ರವು ಜುಲೈ 28ರಂದು 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಬೆಂಗಳೂರು, ಮೈಸೂರು, ಹೈದರಾಬಾದ್​ ಸೇರಿದಂತೆ ಹಲವು ಕಡೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಲ್ಲಿ ಇನ್ನೂ ಬುಕಿಂಗ್​ ಶುರುವಾಗಲಿಲ್ಲ. ಉಳಿದವರು ‘ಬುಕ್​ ಮೈ ಷೋ’ ಆ್ಯಪ್ ಮೂಲಕ ಟಿಕೆಟ್​ ಬುಕ್ ಮಾಡಬಹುದಾಗಿದೆ.
ಈ ಚಿತ್ರ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 450 ಸ್ಕ್ರೀನ್‌, ತಮಿಳುನಾಡಿನಲ್ಲಿ 200 ಸ್ಕ್ರೀನ್‌ ಮತ್ತು ಕೇರಳದಲ್ಲಿ 150 ಸ್ಕ್ರೀನ್‌ ಗಳಲ್ಲಿ ಆರಂಭವಾಗಲಿದ್ದು, ಉತ್ತರ ಭಾರತ ಭಾಗದಲ್ಲಿ 1000 ಸ್ಕ್ರೀನ್‌ ಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಸದ್ಯ ಲಭ್ಯವಿದೆ.
ಪುಷ್ಪಾ ಸಿನಿಮಾ ನೋಡಿ ಪ್ರೇರೇಪಣೆ: ರಾಜ್ಯದ ಯುವಕರು ಬಾಯಿಬಿಟ್ಟ ಸತ್ಯ ಕೇಳಿ ಪೊಲೀಸರೂ ಶಾಕ್​!
ಅಬುಧಾಬಿಯಲ್ಲಿ ನಟಿ ರಶ್ಮಿಕಾ: ಅಕ್ಟೋಬರ್​ನಲ್ಲಿ ‘ಗುಡ್​ಬೈ’- ಮಾಹಿತಿ ಹಂಚಿಕೊಂಡ ಕೊಡಗಿನ ಬೆಡಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 18 =
Remember me
