ಬೆಂಗಳೂರು:ಶಾಲಾ-ಕಾಲೇಜು ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ಡ್ರೀಮ್ ಮಿತ್ರ ಪ್ರೈ.ಲಿ.ರೂಪಿಸಿರುವ ವಿಸ್ತಾಸ್ ಲರ್ನಿಂಗ್ ಆ್ಯಪ್ ಅನ್ನು ನಟಿ ಭಾರತಿ ವಿಷ್ಣುವರ್ಧನ್ ಮಂಗಳವಾರ ಬಿಡುಗಡೆ ಮಾಡಿದರು.
ಖಾಸಗಿ ಹೊಟೇಲ್ ನಲ್ಲಿ ಆ್ಯಪ್ ಬಿಡುಗಡೆ ಮಾಡಿದರು. ಈ ವೇಳೆ ಉದ್ಯಮಿ ಭಾರ್ಗವಿ ಗೋಪಿನಾಥ್, ಗಣಿತಶಾಸಜ್ಞ ಸಿ.ಎಸ್.ಅರವಿಂದ, ಮಹೇಶ್ ಗ್ರೂಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜೈನ್ ಭಾಗವಹಿಸಿದ್ದರು.
ಈ ವೇಳೆ ಮಾತಾಡಿದ ಭಾರತಿ ವಿಷ್ಣುವರ್ಧನ್, ಹಿಂದೆ ನಾವು ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಇಂದು ಕಾಲ ಬದಲಾಗಿದೆ. ಇಂದಿನ ಕಾಲದಲ್ಲಿ ಹಲವು ಮಾಧ್ಯಮಗಳ ಮೂಲಕ ಸುಲಭವಾಗಿ ಗುಣಮಟ್ಟ ಶಿಕ್ಷಣವನ್ನು ಪಡೆಯಬಹುದಾಗಿದೆ. ತಂತ್ರಜ್ಞಾನದ ಮೂಲಕ ಸುಲಭವಾಗಿ ಮತ್ತು ಸರಳ ರೀತಿಯಲ್ಲಿ ಶಿಕ್ಷಣವನ್ನು ಕಲಿಯಲು ಇದು ಸಹಕಾರಿಯಾಗಲಿದೆ ಎಂದರು.ಡೀಮ್ ಮಿತ್ರ ಕಂಪನಿಯ ಸಂಸ್ಥಾಪಕ ಅರ್ಜುನ್ ಸಾಮ್ರಾಟ್ ಮಾತನಾಡಿ, ಇದೊಂದು ಆನ್ ಲೈನ್ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ತರಗತಿಗಳಿಗೆ ಅನುಗುಣವಾಗಿ ಅಪ್ ರೂಪಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ಲೈವ್ ತರಗತಿಗಳಲ್ಲಿ ಭಾಗವಹಿಸಬಹುದು. ಅಲ್ಲದೆ, ರೆಕಾರ್ಡ್ ವಿಡಿಯೋ ಗಳನ್ನು ಯಾವಾಗ ಬೇಕಾದರೂ ನೋಡಿ ಕಲಿಯಹುದು. ನಾವು ಒಂದು ವರ್ಷಕ್ಕೆ ಕೇವಲ 999 ರೂ. ಪಡೆಯುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಶುಲ್ಕ ಪಡೆಯುವ ಯಾವುದೇ ಲರ್ನಿಂಗ್ ಅಪ್ ಇಲ್ಲ ಎಂಬುದು ಗಮನಿಸಬೇಕು ಎಂದರು.
ವಿಸ್ತಾಸ್ ಅಪ್ ಕುರಿತು:ಅರ್ಜುನ್ ಸಾಮ್ರಾಟ್ ಮತ್ತು ಕುಮಾರಿ ವಿಷ್ಣುಪ್ರಿಯಾ ಅವರು 2018ರಲ್ಲಿ ಡೀಮ್ ಮಿತ್ರ ಪೈ.ಲಿ.ಸ್ಥಾಪಿಸಿದರು. ಇದೀಗ ಆ ಕಂಪನಿಯಿಂದಲೇ ಈ ಆ್ಯಪ್ ಅಭಿವೃದ್ಧಿ ಪಡಿಸಿದೆ.
ಈ ಲರ್ನಿಂಗ್ ಆ್ಯಪ್‌ನ ಮುಖ್ಯ ಉದ್ದೇಶ ಪ್ರತಿಯೊಬ್ಬರಿಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಶಿಕ್ಷಣ ದೊರಕಿಸಿಕೊಡುವುದಾಗಿದೆ. ಇದಕ್ಕಾಗಿಯೇ ಈ ಲರ್ನಿಂಗ್ ಆ್ಯಪ್ ವಾರ್ಷಿಕ ಚಂದಾದಾರರ ಬೆಲೆಯನ್ನು 999 ರೂ.ಗೆ ನಿಗದಿ ಮಾಡಿದೆ. ಇಂದಿನ ದಿನಗಳಲ್ಲಿ ಮಾಸಿಕ ಮನೆಪಾಠದ ಶುಲ್ಕವೇ ಒಂದು ಸಾವಿರ ರೂ.ಗಿಂತ ಹೆಚ್ಚಾಗಿರುವುದರಿಂದ ಮಧ್ಯಮ ವರ್ಗದವರು ಮಾತ್ರವಲ್ಲ, ಬಡವರು ಸಹ ಈ ಆ್ಯಪ್ ಬಳಕೆ ಮಾಡುವಂತಾಗಿದೆ.
5ಜಿ ನಿರೀಕ್ಷೆಯಲ್ಲಿರುವವರಿಗೆ ಗುಡ್‌ನ್ಯೂಸ್: ವರ್ಷದೊಳಗೆ ಸಿಗಲಿದೆ ಸೇವೆ- ಬಜೆಟ್‌ನಲ್ಲಿ ಘೋಷಣೆ

ಎಸ್‌ಬಿಐ ಸೇರಿದಂತೆ ಕೆಲವು ಬ್ಯಾಂಕ್‌ಗಳ ವಹಿವಾಟು ಬದಲಾವಣೆ: ಆನ್‌ಲೈನ್‌ ಹಣ ವರ್ಗಾವಣೆಗೆ ಶುಲ್ಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twenty =
Remember me
