ರಾಯಚೂರು:ರಾಜ್ಯದ ಹಲವೆಡೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ನಿನ್ನೆ ರಾಯಚೂರು ಜಿಲ್ಲೆಯ ಗಜೇಂದ್ರಗಡ, ಕುಷ್ಟಗಿ ಭಾಗದಲ್ಲಿಯೂ ಭಾರಿ ಮಳೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ, ಮಸ್ಕಿ ಆಣೆಕಟ್ಟಿನಿಂದ ನೀರು ಬಿಡಲಾಗುತ್ತಿದೆ. ಮಸ್ಕಿ ನಾಲಾ ಯೋಜನೆಯಿಂದ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.
ಮುಂಜಾನೆ ಮಸ್ಕಿ ಪಟ್ಟಣದ ಬಳಿ ಹಳ್ಳದ ನೀರು ಕಡಿಮೆ ಇತ್ತು, ನೀರು ಹರಿದು ಬರುವುದರ ಮುನ್ಸೂಚನೆ ಇಲ್ಲದ ಕೆಲವರು ಮಾಮೂಲಿನಂತೆ ಇಂದು ನಸುಕಿನಲ್ಲಿ ಬಹಿರ್ದೆಸೆಗೆ ಹೋಗಿದ್ದಾರೆ. ಆದರೆ ಏಕಾಎಕಿ ನೀರು ಹರಿದುಬಿಡಲಾಗಿದೆ.
ಇದನ್ನೂ ಓದಿ:ನಿದ್ದೆಯಲ್ಲಿರುವ ಅಧಿಕಾರಿಗಳ ಎಬ್ಬಿಸಲು ಕೂಡಲಸಂಗಮದ ಜನರಿಂದ ಹೀಗೊಂದು ಅಭಿಯಾನ…
ಇದರಿಂದ ನೀರು ಭರ್ತಿಯಾಗಿಹೋಗಿದೆ. ಬಹಿರ್ದೆಸೆಗೆ ಹೋಗಿದ್ದ ಚನ್ನಬಸಪ್ಪ ಹಾಗೂ ಜಲೀಲ ಎಂಬಿಬ್ಬರು ಹಳ್ಳದ ಮಧ್ಯೆ ಸಿಲುಕಿಕೊಂಡು ಪರದಾಡುವ ಪರಿಸ್ಥಿತಿ ತಲೆದೋರಿತು.
ನಂತರ ವಿಷಯ ತಿಳಿದ ಅಗ್ನಿ ಶಾಮಕದಳ, ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ.
ಹುಟ್ಟುಹಬ್ಬಕ್ಕೆ ಹೋದವಳ ಮೇಲೆ ಗ್ಯಾಂಗ್​ರೇಪ್​! ಮನೆಗೆ ಸೇರಿಸದ ಕುಟುಂಬಸ್ಥರು!

ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ​ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್​, ಕೆಲವೇ ಗಂಟೆ ಬಾಕಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
