ರಾಯಚೂರು:ಪೆಟ್ರೋಲ್​, ಡೀಸೆಲ್​ ಬದಲು ನೀರಿನ ಮೂಲಕ ವಾಹನಗಳನ್ನು ಚಲಾಯಿಸುವಂಥ ಪ್ರಯೋಗಗಳನ್ನು ಕೆಲವರು ಮಾಡುತ್ತಿದ್ದಾರೆ. ಇದು ಬೇರೆಯ ಮಾತು. ಆದರೆ ರಾಯಚೂರಿನ ಪೆಟ್ರೋಲ್​ ಬಂಕ್​ ಒಂದರಲ್ಲಿ ಡೀಸೆಲ್​ ಬದಲು ನೀರನ್ನೇ ಹಾಕಿರುವ ಘಟನೆ ಬೆಳಕಿಗೆ ಬಂದಿದೆ!
ರಾಯಚೂರಿನ ಮಸ್ಕಿಯ ಕನಕವೃತ್ತದಲ್ಲಿನ ಸೂಪರ್ ಫಿಲ್ಲಿಂಗ್​ ಸ್ಟೇಷನ್​ ವಿರುದ್ಧ ಈ ಆರೋಪ ಕೇಳಿಬಂದಿದೆ. ಇಲ್ಲಿ ಡೀಸೆಲ್​ ತುಂಬಿಸಿಕೊಂಡಿದ್ದ ಲಾರಿ, ಟ್ರಕ್​ಗಳು ಹಾಗೂ ಕೆಲ ವಾಹನಗಳು ರಸ್ತೆಯ ಮಧ್ಯೆಯೇ ಕೆಟ್ಟುನಿಂತ ನಂತರ ವಿಷಯ ತಿಳಿದುಬಂದಿದೆ.
ಎರಡು ಕಾರುಗಳು, ಮೂರು ಟ್ರ್ಯಾಕ್ಟರ್​ ಮತ್ತು ಮೂರು ಲಾರಿಗಳು ಕೆಟ್ಟು ನಿಂತು ಹೋಗಿವೆ. ನಂತರ ಪರಿಶೀಲನೆ ಮಾಡಿದಾಗ ಪೆಟ್ರೋಲ್​ ಬಂಕ್​ನಲ್ಲಿ ಹಾಕಿರುವುದು ಡೀಸೆಲ್​ ಅಲ್ಲ, ಬದಲಿಗೆ ನೀರು ಎಂದು ತಿಳಿದುಬಂದಿದೆ.
ವಾಹನಗಳ ಮಾಲೀಕರು ತಮ್ಮ ವಾಹನ ಪರೀಕ್ಷೆ ಮಾಡಿಸಿದ ಸಮಯದಲ್ಲಿ ಪೆಟ್ರೋಲ್​ ಟ್ಯಾಂಕ್​ನಲ್ಲಿ ನೀರು ತುಂಬಿರುವುದು ತಿಳಿದಿದೆ. ಕೂಡಲೇ ಪೆಟ್ರೋಲ್​ ಬಂಕ್​ಗೆ ಧಾವಿಸಿರುವ ವಾಹನಗಳ ಮಾಲೀಕರು ಅಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾತಿನ ಚಕಮಕಿ ನಡೆದಿದೆ. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿದ್ದು, ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಪೆಟ್ರೋಲ್​ ಬಂಕ್​ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಾಹನಗಳ ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರೇಯಸಿಯ ಬೆಡ್​ರೂಮ್​ವರೆಗೆ ಗುಟ್ಟಾಗಿ ಸುರಂಗ ತೋಡಿದ ಪತಿಮಹಾಶಯ- ಮುಂದೆ..?

ಹೀಗೂ ಆಗತ್ತಾ? ತನ್ನ ವೋಟನ್ನು ತಾನೇ ಹಾಕದ ಅಭ್ಯರ್ಥಿ!

ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?

ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
