ಬೆಂಗಳೂರು:ಕರೊನಾ ಕೇಸ್​ ಹೆಚ್ಚು ಇರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯಕ್ಕೆ ಕಠಿಣ ನಿಯಮ ಅಳವಡಿಸಲಾಗಿದ್ದು, ಸಂಪೂರ್ಣವಾಗಿ ಬಂದ್​ ಮಾಡಲಾಗುತ್ತಿದೆ.
ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಕೈಗಾರಿಕೆ, ಅಗತ್ಯ ಸೇವೆ ಬಿಟ್ಟು ಎಲ್ಲವೂ ಸ್ಥಗಿತಗೊಳ್ಳಲಿದೆ. ಬೆಂಗಳೂರಿನಲ್ಲಿ ದಿನನಿತ್ಯವೂ ಇರುವ ರಾತ್ರಿ ಕರ್ಫ್ಯೂ ಅವಧಿಯನ್ನು 10 ಗಂಟೆಯ ಬದಲು 9 ಗಂಟೆಗೆ ಮಾಡಲಾಗಿದೆ.
ವೀಕೆಂಡ್​ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಜಿಲ್ಲೆಗಳು ಎಂದರೆ: ಚಾಮರಾಜನಗರ, ಮೈಸೂರು, ಮಂಗಳೂರು, ಮಡಿಕೇರಿ, ದಕ್ಷಿಣ ಕನ್ನಡ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಬೀದರ್​. ಈ ಕುರಿತು ಇಂದು ರಾತ್ರಿಯ ಒಳಗೆ ಅಧಿಕೃತ ಆದೇಶ ಹೊರಬೀಳಲಿದೆ. ಇದರಲ್ಲಿ ಸಂಪೂರ್ಣ ಮಾರ್ಗಸೂಚಿಯ ಕುರಿತು ವಿವರಿಸಲಾಗುವುದು.
ಶಾಲೆ, ಪಿಯು ಆರಂಭಕ್ಕೆ ಸಿಕ್ತು ಗ್ರೀನ್​ ಸಿಗ್ನಲ್​- ನೈಟ್​ ಕರ್ಫ್ಯೂ ಸಮಯದಲ್ಲೂ ವ್ಯತ್ಯಾಸ: ಇಲ್ಲಿದೆ ಡಿಟೇಲ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
