ಮೈಸೂರು:ಮೊದಲು ಯುವತಿಯೊಬ್ಬಳನ್ನು ಪ್ರೀತಿಸಿ ನಂತರ ಬೇರೊಬ್ಬಳನ್ನು ವಿವಾಹವಾದ ಕಾರಣಕ್ಕೆ ಮೈಸೂರಿನಲ್ಲಿ ಎರಡು ಸಾವು ನಡೆದಿರುವ ದುರದೃಷ್ಟಕರ ಘಟನೆ ಸಂಭವಿಸಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಂಬಾಳೆ ಕೊಪ್ಪಲು ಗ್ರಾಮದ 39 ವರ್ಷದ ಎಚ್.ಎಂ.ಲೋಕೇಶ್ ಹಾಗೂ ಅಮೂಲ್ಯ ಎಂಬ ಯುವತಿಯ ಪ್ರೇಮ ಪ್ರಕರಣ ಸಾವಿನಲ್ಲಿ ಕೊನೆಯಾಗಿದೆ. ಮೈಸೂರಿನ ಕಾಲೇಜಿನಲ್ಲಿ ಎಂಎಸ್‍ಸಿ ಕಲಿಯುತ್ತಿದ್ದ ಯುವತಿಯನ್ನು ಕೊಲೆ ಮಾಡಿ ಲೋಕೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಗಿದ್ದೇನೆಂದರೆ ಪ್ರಥಮ ದರ್ಜೆ ಗುತ್ತಿಗೆದಾರಾಗಿದ್ದ ಲೋಕೇಶ್​ ಮತ್ತು ಅಮೂಲ್ಯ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಅವರು ಬೇರೆ ಮದುವೆಯಾಗಿದ್ದಾರೆ. ಅವರಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಆದರೆ ತಾನು ಪ್ರೀತಿಸಿದ ಹುಡುಗ ಬೇರೊಬ್ಬಳನ್ನು ಮದುವೆಯಾಗಿದ್ದು ಅಮೂಲ್ಯಳಿಗೆ ಸಹಿಸದಾಗಿದೆ. ಆದ್ದರಿಂದ ಆಕೆ ಪದೇ ಪದೇ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಇದೇ ಕಾರಣಕ್ಕೆ ಅತ್ತ ಪತ್ನಿಯನ್ನು ಬಿಟ್ಟುಬರಲಾರದೇ, ಇತ್ತ ಈಕೆಯ ಕಾಟ ತಾಳಲಾರದೇ ರೋಸಿಹೋದ ಲೋಕೇಶ್​, ಮೈಸೂರಿನ ಹೊರವಲಯದ ಹೋಟೆಲ್​ಗೆ ಬರುವಂತೆ ಅಮೂಲ್ಯಳಿಗೆ ಹೇಳಿದ್ದಾರೆ. ಆಕೆ ಅಲ್ಲಿಗೆ ಬಂದಾಗ ಅವರಿಬ್ಬರ ನಡುವೆ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ.
ಆಕೆಯ ಶವ ಸಾಗಿಸಲು ತನ್ನ ಸ್ನೇಹಿತನ ನೆರವು ಕೋರಿದ್ದಾರೆ ಲೋಕೇಶ್​. ಆದರೆ ಸ್ನೇಹಿತ ಒಪ್ಪಲಿಲ್ಲ. ಆದರೆ ಆ ಸ್ನೇಹಿತ ಇನ್ನೊಬ್ಬನ ಜತೆಗೂಡಿ ಹೋಟೆಲ್​ಗೆ ಬಂದಾಗ ರೂಮ್​ನ ಬಾಗಿಲು ಹಾಕಲಾಗಿದ್ದು, ಅನುಮಾನಗೊಂಡು ಬೀಗ ತೆಗೆಸಿದಾಗ ಲೋಕೇಶ್​ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೃಷಿ ಕಾಯ್ದೆಗೆ ಅಮೆರಿಕದ ನಿಲುವೇನು? ಮೊದಲ ಬಾರಿ ಹೇಳಿಕೆ ನೀಡಿದ ಅಧ್ಯಕ್ಷ ಬೈಡೆನ್​

ಪ್ರಿಯಾಂಕಾ ಗಾಂಧಿ ಪ್ರಯಾಣದ ವೇಳೆ ವಾಹನಗಳ ಢಿಕ್ಕಿ- ಎಲ್ಲೆಡೆ ಆತಂಕದ ಛಾಯೆ

ಪತ್ನಿ, ಪ್ರೇಮಿ ಹಾಗೂ ಶವ…! ಪತಿಯ ಮೃತದೇಹದೊಂದಿಗೆ ಆ ಹತ್ತು ದಿನಗಳು…

ಸೆಕ್ಸ್‌ಗೆ ಒಪ್ಪಿಲ್ಲ ಎಂದು ಮೂರು ಮಕ್ಕಳ ತಾಯಿಗೆ ಆ್ಯಸಿಡ್‌ ಹಾಕಿ ಚಾಕುವಿನಿಂದ ಇರಿದ ಕಿರಾತಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
