ಬೆಂಗಳೂರು:ಪತ್ನಿಯ ಐಷಾರಾಮಿ ಜೀವನದ ಆಸೆಯನ್ನು ಪೂರೈಸಲಾಗದೇ ಮನನೊಂದುಕೊಂಡ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಸವೇಶ್ವರ ನಗರದ ನಿವಾಸಿ ಚಾಂದ್ ಪಾಷಾ (31) ನೇಣಿಗೆ ಶರಣಾಗಿದ್ದಾರೆ. ಇವರು ನಾಲ್ಕು ತಿಂಗಳ ಹಿಂದೆ ಉಸ್ಮಾ ಎಂಬುವವರನ್ನು ಮದುವೆಯಾಗಿದ್ದರು. ಇದು ಪಾಷಾ ಮತ್ತು ಉಸ್ನಾ (26) ಇಬ್ಬರಿಗೂ ಎರಡನೆಯ ಮದುವೆ. ಇದೀಗ ಉಸ್ನಾ ಮೂರು ತಿಂಗಳ ಗರ್ಭಿಣಿ. ಮದುವೆಯಾದ ದಿನದಿಂದಲೂ ಚಿನ್ನಾಭರಣ, ಒಳ್ಳೊಳ್ಳೆ ಬಟ್ಟೆ, ಹೊರಗಡೆ ಸುತ್ತಾಟದ ಆಸೆ ಹೊತ್ತಿದ್ದರು ಉಸ್ನಾ, ಪಾಷಾ ಮೆಕ್ಯಾನಿಕಲ್‌ ಆಗಿ ಕೆಲಸ ಮಾಡುತ್ತಿದ್ದಾರೆ.
ದಿನವೂ ಪತ್ನಿ ಐಷಾರಾಮಿ ವಸ್ತುಗಳನ್ನು ಕೇಳುತ್ತಿದ್ದರಿಂದ ಪಾಷಾಗೆ ರೋಸಿಹೋಗಿದೆ. ತನಗೆ ಬರುವ ದುಡಿಮೆಯಲ್ಲಿ ಇವೆಲ್ಲಾ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ಆದರೆ ಇದೇ ವಿಷಯವಾಗಿ ದಂಪತಿ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಲೇ ಇತ್ತು. ನಿನ್ನೆ ಕೂಡ ಇದೇ ವಿಷಯವಾಗಿ ಜಗಳವಾಗಿದೆ.
ದಂಪತಿ ಇಬ್ಬರೂ ಜಗಳವಾಡಿಕೊಂಡು ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ಪತ್ನಿಯ ಆಸೆ ಈಡೇರಿಸಲು ಆಗದೇ, ಆಕೆಯಿಂದ ನಿತ್ಯವೂ ಈ ಎಲ್ಲಾ ಬೇಡಿಕೆಗಳ ಬಗ್ಗೆ ಕೇಳಿಕೇಳಿ ಮನನೊಂದುಕೊಂಡ ಪಾಷಾ ತಾವು ಮಲಗಿರುವ ಕೊಠಡಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
https://www.vijayavani.net/s-sister-children-what-about-fathers-property-nd/
VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven − four =
Remember me
