ಬೆಂಗಳೂರು:ಪತ್ನಿಯನ್ನು ಕೊಂದ ಪತಿಯೊಬ್ಬ ರಾತ್ರೋರಾತ್ರಿ ಪರಾರಿಯಾಗಿದ್ದು, ಅವರ ಇಬ್ಬರು ಪುಟ್ಟ ಮಕ್ಕಳು ಅಮ್ಮನ ಶವದ ಜತೆಯೇ ರಾತ್ರಿಯಿಡೀ ಕಳೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾರತಹಳ್ಳಿಯ ಮುನೇಕೊಳಲು ಸಮೀಪ ಈ ಘಟನೆ ಸಂಭವಿಸಿದೆ. 26 ವರ್ಷದ ಸಂಧ್ಯಾ ಎನ್ನುವವರು ಕೊಲೆಯಾಗಿದ್ದಾರೆ. ನಿನ್ನೆ ರಾತ್ರಿ ಕೊಲೆ ಮಾಡಿ ಓಡಿಹೋಗಿದ್ದ ಪತಿ ನಾಗೇಶನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಂಪತಿ ನಡುವೆ ಉಂಟಾಗಿದ್ದ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ.
ರಾತ್ರಿ 12 ಗಂಟೆ ಸುಮಾರಿಗೆ ಸಂಧ್ಯಾ ಅವರು ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ನಾಗೇಶ್‌ ಅವರನ್ನು ಕೊಲೆ ಮಾಡಿದ್ದ. ತಮ್ಮ ತಾಯಿ ಸತ್ತಿದ್ದಾಳೆ ಎಂಬ ಅರಿವೂ ಇಲ್ಲದ ಇಬ್ಬರು ಮಕ್ಕಳು ಅಲ್ಲಿಯೇ ರಾತ್ರಿಯಿಡೀ ಕಳೆದಿದ್ದಾರೆ. ಬೆಳಗ್ಗೆ ಮೂರು ವರ್ಷದ ಮಗು ಎದ್ದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದದ್ದು ನೋಡಿದೆ. ಕೂಡಲೇ ಅಮ್ಮನಿಗೆ ಏನೋ ಆಗಿದೆ ಎಂದು ಸೋದರ ಮಾವನಿಗೆ ಕರೆ ಮಾಡಿದೆ. ಸೋದರ ಮಾವ ಮನೆಗೆ ಬಂದಾಗಲೇ ವಿಷಯ ತಿಳಿದುಬಂದಿದೆ.
ಇದನ್ನೂ ಓದಿ:ನಸುಕಿನ ಕಾರ್ಯಾಚರಣೆ: ಗುಂಡು ಹಾರಿಸಿ ಕುಖ್ಯಾತ ರೌಡಿ ಅನೀಸ್‌ ಅರೆಸ್ಟ್‌
ಐದು ವರ್ಷಗಳ ಹಿಂದೆ ನಾಗೇಶ್‌ ಮತ್ತು ಸಂಧ್ಯಾ ವಿವಾಹವಾಗಿದೆ. ನಾಗೇಶ್‌ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೂಲದವನು. ಈ ದಂಪತಿಗೆ ಮೂರು ಮತ್ತು ಒಂದೂವರೆ ವರ್ಷದ ಮಕ್ಕಳಿದ್ದಾರೆ. ದಂಪತಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಜಗಳವಾಗಿದೆ. ಪತಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಶಂಕಿಸಿದ್ದ ಸಂಧ್ಯಾ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ತನ್ನ ಗುಟ್ಟು ಬಯಲಾಗುತ್ತಿದ್ದಂತೆಯೇ ನಾಗೇಶ್‌ ಪತ್ನಿಯನ್ನು ಕೊಲೆ ಮಾಡಲು ಸಂಚುರೂಪಿಸಿದ್ದ. ಅದರಂತೆ ರಾತ್ರಿ ಹೆಂಡತಿ ಮಲಗಿರುವ ವೇಳೆ ಈ ಕೃತ್ಯ ಎಸಗಿದ್ದಾನೆ.
ಬೆಳಗ್ಗೆ ಮಗು ಸೋದರ ಮಾವನಿಗೆ ಕರೆ ಮಾಡಿ ತೊದಲು ನುಡಿಯಿಂದ ಅಳುತ್ತಿದೆ. ಇದರಿಂದ ಆತಂಕಗೊಂಡ ಮಾವ ಮನೆಗೆ ಬಂದಿದ್ದಾರೆ. ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮಾಹಿತಿ ಆಧರಿಸಿ ಆರೋಪಿಯನ್ನು ಮಂಗಳವಾರ ಸಂಜೆ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಸಂದರ್ಶನದಲ್ಲಿ ಗರ್ಲ್‌ಫ್ರೆಂಡೇ ಇಲ್ಲ ಎಂದಿದ್ದ: ಲೈವ್‌ ಷೋನಲ್ಲಿ ಅರೆಬೆತ್ತಲೆ ಹುಡುಗಿಯಿಂದ ಸಿಕ್ಕಿಬಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
