ಬೆಂಗಳೂರು:ಆನ್‌ಲೈನ್‌ ಮೋಸದ ಬಗ್ಗೆ ದಿನನಿತ್ಯವೂ ಸುದ್ದಿ ಬರುತ್ತಲೇ ಇದ್ದರೂ, ಅದ್ಯಾಕೋ ಬಹಳಷ್ಟು ಮಂದಿ ಇದರತ್ತ ಗಮನವೇ ಕೊಡುತ್ತಿಲ್ಲ, ಸುದ್ದಿಗಳನ್ನು ನೋಡಿದರೆ ನಮಗೇನೂ ಆಗಲ್ಲ ಬಿಡಿ, ನಾವು ಜಾಣರು ಎಂದುಕೊಳ್ಳುವವರೇ ಹೆಚ್ಚು.
ಇದೀಗ ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಭರ್ಜರಿ ಊಟದ ಪಾರ್ಸೆಲ್‌ಗೆ ಆರ್ಡರ್‌ ಕೊಟ್ಟ 58 ವರ್ಷದ ಮಹಿಳೆಯೊಬ್ಬರು 50 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಲಚೇನಹಳ್ಳಿ ನಿವಾಸಿ ಸವಿತಾ ಎನ್ನುವವರು ಈ ಮೋಸಕ್ಕೆ ಒಳಗಾಗಿದ್ದಾರೆ. ಸವಿತಾ ಅವರು ಫೇಸ್‌ಬುಕ್‌ ನೋಡುತ್ತಿರುವಾಗ ನಡುವೆ ಜಾಹೀರಾತು ಗಮನ ಸೆಳೆದಿದೆ. ಅದರಲ್ಲಿ 250 ರೂಪಾಯಿ ಕೊಟ್ಟು ಒಂದು ಥಾಲಿ (ಪ್ಲೇಟ್‌) ಊಟ ಆರ್ಡರ್‌ ಮಾಡಿದರೆ ಇನ್ನೊಂದು ಊಟ ಫ್ರೀ ಎಂದು ಬರೆಯಲಾಗಿತ್ತು. ಅಲ್ಲಿ ಕೊಟ್ಟಿರುವ ಚಿತ್ರದಲ್ಲಿನ ಬಗೆಬಗೆ ಭಕ್ಷ್ಯಗಳನ್ನು ಕಂಡಿರುವ ಸವಿತಾ ಅವರು, ತಾವ್ಯಾಕೆ ಆರ್ಡರ್‌ ಮಾಡಬಾರದು ಎಂದುಕೊಂಡರು. ಅದೂ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸದಾಶಿವನಗರ ವ್ಯಾಪ್ತಿಯ ಹೋಟೆಲ್‌ ವಿಳಾಸ ನೀಡಲಾಗಿತ್ತು.
ಸರಿ. ಸವಿತಾ ಅಲ್ಲಿ ಕೊಟ್ಟಿರುವ ನಂಬರ್‌ಗೆ ಕರೆ ಮಾಡಿದ್ದಾರೆ. ನಂತರ ಅವರು ಮೊದಲು 10 ರೂಪಾಯಿಯನ್ನು ಪಾವತಿಸಿ ಮುಂಗಡ ಬುಕ್‌ ಮಾಡಬೇಕು. 250 ರೂಪಾಯಿಗಳನ್ನು ಈಗಲೇ ಕೊಡಬೇಕೆಂದು ಇಲ್ಲ. ಊಟ ಬಂದ ಮೇಲೆ ಕೊಟ್ಟರೂ ಸಾಕು ಎಂದೆಲ್ಲಾ ತುಂಬಾ ಮೃದುವಾಗಿ ಮಾತನಾಡಿದ್ದಾರೆ.
ನಂತರ ಸವಿತಾ ಅವರು ತಮ್ಮ ಮೊಬೈಲ್‌ ನಂಬರ್‌ ಕೊಟ್ಟಿದ್ದಾರೆ. ಅದಕ್ಕೊಂದು ಲಿಂಕ್‌ ಕಳಹಿಸಲಾಗಿದೆ. ಆ ಲಿಂಕ್‌ ಕ್ಲಿಕ್‌ ಮಾಡಿ ಫಾರ್ಮ್‌ ಭರ್ತಿ ಮಾಡಿ ಎಂದು ಅಲ್ಲಿಂದ ಕರೆ ಮಾಡಿದವರು ಹೇಳಿದ್ದಾರೆ. ಅದರಂತೆ ಒಂದು ಲಿಂಕ್‌ ಬಂದಿದೆ.
ಅವರು ಹೇಳಿದಂತೆ ಡೆಬಿಟ್ ಕಾರ್ಡ್ ವಿವರಗಳು ಮತ್ತು ಪಿನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ! ಅಷ್ಟೇ… ಮುಂದಿನ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಲ್ಲಿದ್ದ 49,996 ರೂ ಮಂಗಮಾಯ!
ಊಟದ ಆರ್ಡರ್‌ ಬರುತ್ತದೆ ಎಂಬ ಮೆಸೇಜ್ ಬರುತ್ತದೆ ಎಂದು ಕಾಯುತ್ತಿದ್ದ ಸವಿತಾಗೆ ಬಂದದ್ದು ಬ್ಯಾಂಕ್‌ನಲ್ಲಿರುವ ಹಣ ವಿತ್‌ಡ್ರಾ ಆಗಿದ್ದು! ಆಗಲೇ ತಿಳಿದದ್ದು ಅವರಿಗೆ ತಾವು ಮೋಸ ಹೋಗಿದ್ದು! ಪೊಲೀಸರಲ್ಲಿ ದೂರು ದಾಖಲಿಸಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಕೃಷಿ ಕಾಯ್ದೆಗೆ ಗರಂ- ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ತೊರೆದ ಮಾಜಿ ಸಂಸದ

‘ಮನ್‌ ಕೀ ಬಾತ್’‌ನಲ್ಲಿ ಕರ್ನಾಟಕದ ಯುವಾ ಬ್ರಿಗೇಡ್‌ ತಂಡವನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
