ಬೆಂಗಳೂರು:ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ನಿರ್ದೇಶಕರಾಗಿ ಕನ್ನಡಿಗ ಡಾ.ಎಂ.ಶ್ರೀನಿವಾಸ್ ಅವರ ಹೆಸರನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಈ ಆದೇಶ ಹೊರಡಿಸಿದೆ. ಇದಕ್ಕೂ ಮುಂಚೆ ಇದ್ದ ಡಾ. ರಣದೀಪ್ ಗುಲೇರಿಯಾ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಮುಂದಿನ 5 ವರ್ಷದವರೆಗೆ ಇವರು ಮುಂದುವರೆಯಲಿದ್ದಾರೆ.
ಡಾ.ಎಂ.ಶ್ರೀನಿವಾಸ್ ಅವರು ಯಾದಗಿರಿ ಮೂಲದವರು. ಯಾದಗಿರಿಯ ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಕಲಿತ ಇವರು, ಬಳ್ಳಾರಿಯ ಏಮ್ಸ್‌ನಲ್ಲಿ 1984ರ ಬ್ಯಾಚ್‍ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಡಾ.ಶ್ರೀನಿವಾಸ್​ ಅವರು ದೆಹಲಿಯ ಏಮ್ಸ್‌ನಲ್ಲಿಯೇ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕಾರ್ಯನಿರ್ವಹಿಸಿದ್ದರು. ಸದ್ಯ ಹೈದರಾಬಾದ್‍ನ ಸನತ್‍ನಗರದ ಇಎಸ್‍ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿದ್ದಾರೆ.
ಇವರ ತಮ್ಮ ಡಾ. ನಾಗರಾಜ್ ಖ್ಯಾತ ದಂತವೈದ್ಯರಾಗಿದ್ದಾರೆ. ಕಲಬುರಗಿ ಇಎಸ್‌ಐಸಿ ಆಸ್ಪತ್ರೆಯಲ್ಲಿ ದಂತ ವೈದ್ಯದ ಡೀನ್ ಆಗಿದ್ದ ಇವರನ್ನು ಈಗ ದೆಹಲಿ ಇಎಸ್‌ಐಸಿಗೆ ವರ್ಗಾವಣೆ ಮಾಡಲಾಗಿದೆ.(ಏಜೆನ್ಸೀಸ್​)
ಸಮುದ್ರದ ಒಳಗಿನಿಂದಲೂ ಹೋಗಲಿದೆ ಹೈಸ್ಪೀಡ್​ ರೈಲು! ಭಾರತದ ಮೊದಲ ಸುರಂಗ ಮಾರ್ಗ ಇನ್ನೇನು ಶುರು….
ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಿಗಲ್ಲ ನಿರೀಕ್ಷಣಾ ಜಾಮೀನು: ಮಸೂದೆ ಅಂಗೀಕರಿಸಿದ ಯುಪಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × three =
Remember me
