ಬೆಂಗಳೂರು:ಈ ಹಿಂದೆ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ಅವರು‌ ವೀರಶೈವ ಲಿಂಗಾಯತ ಧರ್ಮ ಒಡೆಯಲು ಹೋಗಿ ಅಧಿಕಾರ ಕಳೆದುಕೊಂಡರು. ಈಗ ಸಚಿವ ಮುರುಗೇಶ್ ನಿರಾಣಿಯವರು ಪಂಚಮಸಾಲಿ ಮಠಗಳನ್ನು ವಿಭಜಿಸಿ ಮೂರನೇ ಮಠ ಮಾಡಲು ಹೊರಟಿದ್ದು, ಅವರಿಗೆ ರಾಜಕೀಯವಾಗಿ ಉಳಿಗಾಲವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಧರ್ಮ ಹಾಗೂ ಮಠದೊಳಗೆ ರಾಜಕೀಯ ಪ್ರವೇಶ ಮಾಡಬಾರದು. ಅಂತಹವರು ರಾಜಕೀಯವಾಗಿ‌ ವಿನಾಶವಾಗುತ್ತಾರೆ. ಕೈಗಾರಿಕೆಗಳಿಗೆ ಭೂಸ್ವಾಧೀನದಲ್ಲಿ‌ ಭ್ರಷ್ಟಾಚಾರದ ಆರೋಪ ಮಾಡುವವರು ಅಂತಹ ದಾಖಲೆಗಳನ್ನು ಮುಖ್ಯಮಂತ್ರಿಗೆ ನೀಡಲಿ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳುವರು ಎಂದು ಉತ್ತರಿಸಿದರು.
ಅಸಮಾಧಾನವಿಲ್ಲ: ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆ ಉಸ್ತುವಾರಿ ಕೊಟ್ಟಿರುವುದಕ್ಕೆ ಯಾವೊಬ್ಬ ಸಚಿವರಿಗೆ ಅಸಮಾಧಾನವಿಲ್ಲ. ವಲಸಿಗರು ಪಕ್ಷಕ್ಕೆ ಕೈಕೊಡಲಿದ್ದಾರೆ ಎಂದು ಹೇಳಿದ ಬಳಿಕ ಒಬ್ಬೊಬ್ಬ‌ರೇ ವಲಸಿಗ ಸಚಿವರು ಸ್ಪಷ್ಟನೆ ನೀಡುತ್ತಿದ್ದು, ಇದರಿಂದಾಗಿ ಪಕ್ಷ ಇನ್ನಷ್ಟು ಗಟ್ಟಿಯಾಗಲಿದೆ. ಮುಖ್ಯಮಂತ್ರಿಯಾಗುವುದು ನನ್ನ ಹಣೆಬರೆಹದಲ್ಲಿದ್ದರೆ ಯಾರೂ ತಪ್ಪಿಸಲಿಕ್ಕಾಗದು‌ ಎಂದು ಯತ್ನಾಳ್ ಹೇಳಿದರು.
ಪುರುಷನ ಮಾತಿಗೆ ಮರುಳಾಗಿ ಆತ ಗಂಡನಾಗುತ್ತಾನೆಂದು ನಂಬಿ ದೇಹ ಒಪ್ಪಿಸೋ ನಿಮ್ಮಂಥವ್ರಿಗೆ ಏನ್‌ ಹೇಳೋದಮ್ಮಾ?

ಹಿಂದೂ ಹೆಸರಿಟ್ಟುಕೊಂಡು ಭಾರತದ ಪೌರತ್ವ! ಬೆಂಗಳೂರಿನಲ್ಲಿ ತಣ್ಣಗೆ ನೆಲೆಸಿದ್ದ ಬಾಂಗ್ಲಾ ಯುವತಿ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
