ಮೈಸೂರು:ಅತ್ತೆ ಮಗಳ ಮೇಲೆ ಕಣ್ಣುಹಾಕುತ್ತಿದ್ದಾನೆಂದು ಆರೋಪಿಸಿ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿಯ ನಿವಾಸಿ ರಾಜು(25) ಎಂಬ ಯುವಕನನ್ನು ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ರಾಜು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಪಂಚವಳ್ಳಿ ಸರ್ಕಲ್ ಬಳಿ ಇರುವ ಪೆಟ್ರೋಲ್ ಬಂಕ್ ಮುಂದೆ ಯುವತಿ ಮನೆ ಇದೆ. ಇದರ ಮುಂಭಾಗದಲ್ಲೇ ಇರುವ ಕಟ್ಟಡದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಕಿರಣ್ ಮಳಿಗೆ ಬಾಡಿಗೆ ಪಡೆದುಕೊಂಡಿದ್ದ. ಮೆಣಸಿನಕಾಯಿ ತುಂಬಲು ರಾಜು ಆಗಾಗ್ಗೆ ಮಳಿಗೆಗೆ ಬರುತ್ತಿದ್ದ. ಈ ವೇಳೆ ಕಿರಣ್ ನ ಅತ್ತೆ ಮಗಳ ಮೇಲೆ ರಾಜು ಕಣ್ಣು ಹಾಕಿದ್ದ ಎಂದು ಆರೋಪಿಸಲಾಗಿದೆ.

ಆಗಾಗ್ಗೆ ಬರುತ್ತಿದ್ದ ರಾಜು ಯುವತಿಗೆ ಲೈನ್ ಹೊಡೆಯುತ್ತಿದ್ದಾನೆಂದು ಆರೋಪ ಹೊರೆಸಿ ಆತನಿಗೆ ಒಂದೆರಡು ಬಾರಿ ವಾರ್ನಿಂಗ್ ಸಹ ಕೊಟ್ಟಿದ್ದರು. ಆದರೆ ಮೆಣಸಿನಕಾಯಿ ಅಂಗಡಿಗೆ ಬಂದಾಗೆಲ್ಲಾ ರಾಜು ಮೇಲೆ ಅನುಮಾನ ಹೆಚ್ಚಾಗುತ್ತಿತ್ತು.
ಈ ಹಿನ್ನಲೆ ನಿನ್ನೆ ಸಂಜೆ ಪೆಟ್ರೋಲ್ ಹಾಕಿಸಲು ಬಂದ ರಾಜು ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಾಲಿನ ಕ್ಯಾನ್​ನಿಂದ ಹಿಗ್ಗಾಮುಗ್ಗ ಥಳಿಸಿರುವುದನ್ನು ಇದರಲ್ಲಿ ಕಾಣಬುದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್, ಪುನೀತ್, ಪ್ರಕಾಶ್ ಹಾಗೂ ನವೀನ್ ಎಂಬುವವರನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮುಖಕ್ಕೆ ಧರಿಸಬೇಕಿದ್ದ ಮಾಸ್ಕನ್ನು ಸಚಿವರು ಎಲ್ಲಿ ಹಾಕಿಕೊಂಡಿದ್ದಾರೆ ನೋಡಿ- ಜಾಲತಾಣದಲ್ಲಿ ಟ್ರೋಲ್​

ಬೆಂಗಳೂರಲ್ಲೊಂದು ದುರಂತ! ಬಡಾವಣೆಗಾಗಿ ಬ್ಲಾಸ್ಟ್​: ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
