ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….
| ವೈಶಾಲಿ ಲಕ್ಷ್ಮಿನಾರಾಯಣ, ಬೆಂಗಳೂರು2019ರಲ್ಲಿ ಮನೆ ಕಟ್ಟಿಸಬೇಕು ಎಂದು ತೀರ್ಮಾನ ಮಾಡಿ ಪ್ಲ್ಯಾನ್‌ ರೆಡಿ ಮಾಡಿಸಿದೆವು. ಒಬ್ಬ ಕಾಂಟ್ರ್ಯಾಕ್ಟರ್‌ ಬೇಕಲ್ಲ. ಅವ್ರು, ಇವ್ರು ಸಜೆಸ್ಟ್​ ಮಾಡಿದ ಕಾಂಟ್ರ್ಯಾಕ್ಟರ್‌​ ಒಬ್ಬ ಸಿಕ್ಕ. ಸರಿ, ಅವನ ಬಳಿ ಎಲ್ಲಾ ವಿಷಯ ಹೇಳಾಯ್ತು. ನಾವು ಹೇಳಿದ್ದಕ್ಕೆಲ್ಲಾ ಹೂಂಗುಟ್ಟುತ್ತಾ, ನಾವು ಹೇಳಿದ್ದಕ್ಕೆಲ್ಲಾ ಸರಿ ಸರಿ ಎನ್ನುತ್ತಾ, “ನಮ್ದೇ ಸ್ವಂತ ಇಟ್ಟಿಗೆ ಫ್ಯಾಕ್ಟರಿ ಇದೆ, ನೀವೇನೂ ಚಿಂತೆ ಮಾಡ್ಬೇಡಿ’ ಎಂದ.
ಕೆಲವು ಕಾಂಟ್ರ್ಯಾಕ್ಟರ್‌ಗಳು ಕಟ್ಟಡ ನಿರ್ಮಾಣದ ಮಧ್ಯೆ ಕೈ ಕೊಟ್ಟು, ಮನೆ ಕಟ್ಟಿಸುವವರನ್ನು ಸಾಕಪ್ಪಸಾಕು ಎನಿಸುವಂತೆ ಮಾಡುತ್ತಾರೆ ಎಂದು ತುಂಬಾ ಮಂದಿ ಹೇಳಿದ್ದರು. ಆದರೆ ನಮಗೆ ಸಿಕ್ಕ ಕಾಂಟ್ರ್ಯಾಕ್ಟರ್‌​ ಆಡಿದ ಮಾತು ಕೇಳಿ ನಾವು “ಅಬ್ಬಾ ಎಷ್ಟು ಒಳ್ಳೆ ಕಾಂಟ್ರ್ಯಾಕ್ಟರ್‌ ಸಿಕ್ಕನಪ್ಪಾ’ ಎಂದು ಖುಷಿಪಟ್ಟೆವು. ಈ ಕಾಂಟ್ರ್ಯಾಕ್ಟರ್‌ ದಯೆಯಿಂದ ಮೂರು ಫ್ಲೋರ್​ಗಳು ಪಟಪಟ ಮುಗಿದು ಮನೆಗೆ ಒಂದು ಸ್ಟ್ರಕ್ಚರ್​ ಕೂಡ ಬಂತು. ಇನ್ನೇನು ಫಿನಿಷಿಂಗ್​ ಕೆಲಸ ಶುರು ಆಗಬೇಕಿತ್ತು. ಟೈಲ್ಸ್​ ತರಿಸಬೇಕಿತ್ತು. ಆಗ ಶುರುವಾಯ್ತು ನೋಡಿ ಗೋಳು…ಸಂಪೂರ್ಣ ದುಡ್ಡು ಕಾಂಟ್ರಾಕ್ಟರ್​ಗೆ ಕೊಟ್ಟುಬಿಟ್ಟಿದ್ದೆವು. ಆದ್ರೂ ಆತ ಟೈಲ್ಸ್​, ಅದು ಇದು ಎಂದು ಎಕ್ಸ್​ಟ್ರಾ ದುಡ್ಡು ಕೇಳೋಕೆ ಶುರು ಮಾಡಿದ. “ಎಲ್ಲಾ ದುಡ್ಡು ಮೊದ್ಲೇ ಕೊಟ್ಟಾಯ್ತಲ್ಲ, ಟೈಲ್ಸ್​ ತರಿಸಿ’ ಎಂದಾಗ ಓಕೆ ಓಕೆ ಎಂದ. ಇನ್ನೇನು ಟೈಲ್ಸ್​ ಬರುತ್ತೆ, ಮನೆ ಪೂರ್ತಿ ಮುಗಿಯುತ್ತೆ ಎಂದುಕೊಂಡರೆ ಕಾಂಟ್ರ್ಯಾಕ್ಟರ್‌ ನಾಪತ್ತೆ!
ಇದೊಳ್ಳೆ ಕಥೆ ಆಯ್ತಲ್ಲ ಎಂದುಕೊಂಡು ವಿಚಾರಿಸಿದರೆ ಅವನು ಶಬರಿಮಲೆ ಯಾತ್ರೆಗೆ ಹೋಗಿದ್ದ! ಪದೇಪದೆ ಫೋನ್​ ಮಾಡಿದರೂ ಪ್ರಯೋಜನವಾಗಲಿಲ್ಲ. ಕಾಂಟ್ರ್ಯಾಕ್ಟರ್‌ ಮೊದಲೇ ಸಜೆಸ್ಟ್​ ಮಾಡಿದ್ದ ಟೈಲ್ಸ್​ ಅಂಗಡಿಯವನನ್ನು ಭೇಟಿ ಮಾಡಿದೆವು. ಕಾಂಟ್ರ್ಯಾಕ್ಟರ್‌ನ ಬೆನ್ನು ಬಿಡದೇ ಆನ್​ಲೈನ್​ ಮೂಲಕ ಅವನಿಂದಲೇ ಟೈಲ್ಸ್​ ಅಂಗಡಿಯವನಿಗೆ ದುಡ್ಡು ಹಾಕಿಸಿದೆವು. ಇಷ್ಟು ಮಾಡುವ ಹೊತ್ತಿಗೆ ಉಸ್ಸಪ್ಪ ಎನ್ನುವಂತಾಗಿತ್ತು. ಅಷ್ಟೊತ್ತಿಗೆ ಕರೊನಾ ಲಾಕ್​ಡೌನ್​ ಶುರುವಾಯಿತು. ಗೃಹಪ್ರವೇಶ ಮುಂದೂಡಬೇಕಾಯಿತು. ಇತಿ ್ತಚೆಗಷ್ಟೆ ಎಲ್ಲ ಕೆಲಸ ಮುಗಿಸಿ “ಮುಕ್ತ’ರಾಗಿದ್ದೇವೆ.

ಆಡುವ ಕೈಯಲ್ಲಿ ಪ್ಯಾಡು! ಚಿಕ್ಕ ವಯಸ್ಸಿನಲ್ಲೇ ದೊಡ್ಡವರಾಗ್ತಿರೋ ಮಕ್ಕಳ ಪಾಡು…
ಇದು ಮಹಿಳೆಯ ಆಸ್ತಿ ಕೇಸ್ ಹಾಕಿದ್ರೆ ನಡೆಯಲ್ಲ!; ಹಲವರ ಕಣ್ತೆರೆಸುವ ಸುಪ್ರೀಂಕೋರ್ಟ್ ತೀರ್ಪು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
