ಮೈಸೂರು:‘ಸಾ.ರಾ. ಮಹೇಶ್​ ನನ್ನ ಸಮನಲ್ಲ. ನನ್ನ ಪ್ರತಿಸ್ಪರ್ಧಿಯೂ ಅಲ್ಲ. ಹೀಗಾಗಿ, ನಾನಂತೂ ಅವನ ಬಗ್ಗೆ ಮಾತನಾಡಲ್ಲ’ ಎಂದು ವಿಧಾನ ಪರಿಷತ್​ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಎಚ್​.ವಿಶ್ವನಾಥ್​ ಏಕವಚನದಲ್ಲೇ ಹರಿಹಾಯ್ದರು.
‘ನನ್ನ ನಾಮನಿರ್ದೇಶನದ ಬಗ್ಗೆ ಕಾನೂನಿನ ತೊಡಕಿದ್ದರೆ ಅದಕ್ಕೆ ರಾಜ್ಯಪಾಲರು ಉತ್ತರ ಕೊಡುತ್ತಾರೆ. ಈ ಕುರಿತು ರಾಜ್ಯಪಾಲರಿಗೆ ಸಾ.ರಾ.ಮಹೇಶ್​ ಪತ್ರ ಬರೆದಿರುವುದರಿಂದ ನನಗೆ ಏನೂ ಸಮಸ್ಯೆ ಆಗಲ್ಲ’ ಎಂದು ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿರಿತಾರಕಕ್ಕೇರಿದೆ ‘ಕುದುರೆ’ ವಿಷ್ಯ; ಜನರಿಂದ ತಿರಸ್ಕರಿಸಲ್ಪಟ್ಟ ಸಿ.ಪಿ.ಯೋಗೇಶ್ವರ್ ‘ಸತ್ತ ಕುದುರೆ’!
ಬಿ.ಎಸ್​.ಯಡಿಯೂರಪ್ಪ ಉತ್ತಮ ತಂಡ ಕಟ್ಟಿಕೊಂಡು ಒಂದು ವರ್ಷದಿಂದ ಕೆಲಸ ಮಾಡಿದ್ದಾರೆ. ಆದರೆ, ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಕೋವಿಡ್​-19 ನುಂಗಿಹಾಕಿದೆ. ಆದರೂ, ಕಷ್ಟದ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಂತಹ ಸರ್ಕಾರ ಬರುವುದಕ್ಕೆ ನಾವು ಕಾರಣರಾಗಿದ್ದೇವೆ ಎಂಬುದು ನನಗೆ ಹೆಮ್ಮೆಯ ಸಂಗತಿ. ನಮ್ಮ ನಡೆಯಿಂದ ಸಂವಿಧಾನದ ಅಡಿಯಲ್ಲಿ ಇಂತಹದ್ದೊಂದು ಬದಲಾವಣೆ ಆಗಿದೆ ಎಂಬುದು ಸಮಾಧಾನ. ಒಂದು ವರ್ಷದ ಈ ಸಾಧನೆ ಸಾರ್ಥಕತೆಯ ಅನುಭವ ತಂದಿದೆ ಎಂದು ಸಾ.ರಾ. ಮಹೇಶ್​ ಹೇಳಿದರು.
ಪ್ರತಿಪಕ್ಷಗಳಿಗೆ ವಿರೋಧ ಮಾಡೋದು ಮಾತ್ರ ಗೊತ್ತು. ಅವರು ಅಧಿಕಾರದಲ್ಲಿ ಇದ್ದಾಗ ರಾತ್ರಿ ವೇಳೆಯೂ ಸೂರ್ಯ-ಚಂದ್ರ ಕಾಣ್ತಾರೆ. ಆದರೆ, ಅವರು ಅಧಿಕಾರದಲ್ಲಿ ಇಲ್ಲವೆಂದರೆ ಅದ್ಯಾಕೋ ರಾತ್ರಿ ವೇಳೆ ಸೂರ್ಯ ಕಾಣ್ತಿಲ್ಲ ಅಂತಾರೆ. ಅವರಿಗೆ ಸರ್ಕಾರದ ಸಾಧನೆ ಅಥವಾ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡೋದು ಗೊತ್ತಿಲ್ಲ’ ಎಂದು ಮಾಮಿರ್ಕವಾಗಿ ನುಡಿದರು.
‘ಬಿಜೆಪಿ ಸರ್ಕಾರ ಒಂದು ವರ್ಷದಲ್ಲಿ ಒಂದಾದರೂ ಒಳ್ಳೆಯ ಕೆಲಸ ಮಾಡಿಲ್ಲವೇ? ಆ ಒಂದು ಕೆಲಸವನ್ನಾದರೂ ಒಳ್ಳೆಯದು ಅಂತ ಹೇಳಲಿ. ಅದನ್ನು ಬಿಟ್ಟು ಎಲ್ಲವನ್ನೂ ಟೀಕೆ ಮಾಡೋದು ಸರಿಯಲ್ಲ. ವಿರೋಧ ಪಕ್ಷದ ನಾಯಕರ ನಿಲುವುಗಳು ದ್ವಂದ್ವದಿಂದ ಕೂಡಿವೆ’ ಎಂದರು.
ಕಾರು ಅಡ್ಡಗಟ್ಟಿ 45.5 ಲಕ್ಷ ರೂ. ದರೋಡೆ, ಕದ್ದ ಹಣವನ್ನು ಟೈರ್​ನಲ್ಲಿ ಬಚ್ಚಿಟ್ಟಿದ್ದ…

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:seventeen − 4 =
Remember me
