ಕಾಸರಗೋಡು:ಕೋವಿಡ್ ಹಿನ್ನೆಲೆಯಲ್ಲಿ ಶ್ರೀ ಶಬರಿಮಲೆ ದೇವಸ್ಥಾನ ದರ್ಶನ ಸಾಧ್ಯವಾಗದ ಭಕ್ತರಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಪ್ರಸಾದವನ್ನು ಅಂಚೆ ಮೂಲಕ ಮನೆಗೇ ಕಳುಹಿಸಿಕೊಡುವ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 20 ಸಾವಿರಕ್ಕೂ ಹೆಚ್ಚು ಆರ್ಡರ್ ಲಭಿಸಿದೆ.
ದೇಶದ ಯಾವುದೇ ಸ್ಥಳದಿಂದಲೂ ಅಂಚೆ ಮೂಲಕ ದೇವರ ಪ್ರಸಾದಕ್ಕೆ ಆರ್ಡರ್ ಮಾಡಬಹುದು. ಇದಕ್ಕೆ ಸಂಬಂಧಪಟ್ಟ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಿದಲ್ಲಿ ಸ್ಪೀಡ್‌ಪೋಸ್ಟ್ ಮೂಲಕ ಪ್ರಸಾದವನ್ನು ರವಾನಿಸಲಾಗುತ್ತದೆ ಎಂದು ಕೇರಳ ಪೋಸ್ಟಲ್ ಸರ್ಕಲ್‌ನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ವಿ. ರಾಜರಾಜನ್ ತಿಳಿಸಿದ್ದಾರೆ.ಇದನ್ನೂ ಓದಿರಿಜೆಡಿಎಸ್​ ಮನೆಗೆ ಬಂದ ಸಿ.ಎಂ.ಇಬ್ರಾಹಿಂ! ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ…
ತುಪ್ಪ, ಭಸ್ಮ, ಅರಿಶಿಣ, ಕುಂಕುಮ, ಅರವಣ ಒಳಗೊಂಡಂತೆ ವಿವಿಧ ಪದಾರ್ಥಗಳು ಪೊಟ್ಟಣದಲ್ಲಿ ಇರುತ್ತವೆ. ಪ್ರಸಾದ ಪೊಟ್ಟಣದ ಬೆಲೆ 450 ರೂ. ಆಗಿದ್ದು, ಒಂದು ಆರ್ಡರ್‌ನಲ್ಲಿ ಗರಿಷ್ಠ ಹತ್ತು ಪೊಟ್ಟಣಗಳನ್ನು ಸ್ಪೀಡ್‌ಪೋಸ್ಟ್‌ನಲ್ಲಿ ತರಿಸಿಕೊಳ್ಳಬಹುದು. ವಿವರಗಳಿಗೆ[email protected]ಅಥವಾ ದೂರವಾಣಿ ಸಂಖ್ಯೆ 8592859322, 04692601394 ಸಂಪರ್ಕಿಸಬಹುದು.
ಹೊಸಕೋಟೆ ಟಿಎಚ್​ಒ ನಾಪತ್ತೆ ಪ್ರಕರಣದ ಹಿಂದೆ ಎಂಟಿಬಿ ಆಪ್ತನ ಕೈವಾಡ?

ಸಿಎಂ ತವರಲ್ಲಿ ಮಾಟ-ಮಂತ್ರದ ಸದ್ದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
