ಬೆಂಗಳೂರು:ಇತ್ತೀಚೆಗೆ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಿ ಚುನಾವಣೆ ಗೆಲ್ಲಲಿ ಎಂಬ ಸಿಟಿ ರವಿ ಹೇಳಿಕೆ ನೀಡಿ ಕಿಡಿ ಹಚ್ಚಿದ್ದರು. ಈ ಬಗ್ಗೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಕಿಡಿ ಕಾರಿದ್ದಾರೆ.
ಸಿದ್ಧರಾಮಯ್ಯ ಪರವಾಗಿ ಬ್ಯಾಟಿಂಗ್​ ನಡೆಸಿದ ಸಚಿನ್​ ಮೀಗಾ, ‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿ.ಟಿ.ರವಿ ಪಾಕಿಸ್ತಾನ ಹೆಸರು ಬಳಸಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಯಾಕೆ? ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಚಿಕ್ಕಮಗಳೂರಿನಲ್ಲೇ ಸ್ಪರ್ಧಿಸಲಿ. ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ಬಹುಮತದಿಂದ ಗೆಲ್ಲುತ್ತಾರೆ. ಸಿ ಟಿ.ರವಿಗೆ ತಾಕತ್ ಇದ್ದರೆ ಸಿದ್ದರಾಮಯ್ಯರವರಿಗೆ ಆಹ್ವಾನ ನೀಡಲಿ’ ಎಂದು ಸವಾಲೆಸೆದಿದ್ದಾರೆ.
‘ಸಿ.ಟಿ ರವಿ ಒಂದು ಕೆಜಿ ಕುಂಕುಮ ಒಂದು ಮೀಟರ್ ಕೇಸರಿ ಬಟ್ಟೆಯಲ್ಲಿ ರಾಜಕೀಯ ಮಾಡಿ ಶಾಸಕ ಆಗಿದ್ದು. ಈಗ ಅವರು ಸಾವಿರಾರು ಕೋಟಿ ಒಡೆಯ. ಜಿಲ್ಲೆಯಲ್ಲಿ ರೈತರು ಎದಿರುಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಿಲ್ಲ. ಈಗ ಪಾಕಿಸ್ತಾನ ನೆನಪಾಗುತ್ತದೆ’ ಎಂದು ಮೀಗಾ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fourteen =
Remember me
