ಬೆಳಗಾವಿ:ಸಿಆರ್​ಪಿಎಫ್​ ಕೋಬ್ರಾ ಕಮಾಂಡೋ ಸಚಿನ್​ ಸಾವಂತ್​ ಅವರ ಮೇಲೆ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ ವಿಡಿಯೋ ಮತ್ತು ಕೈಗೆ ಕೋಳ ಹಾಕಿ ಸ್ಟೇಶನ್​​ನಲ್ಲಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಹಾಗೇ ಪೊಲೀಸರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜಕೀಯ ಮುಖಂಡರು ಸೇರಿ, ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಚಿನ್​ ಸಾವಂತ್​ ಅವರು ಮಾಸ್ಕ್​ ಹಾಕದೆ ತಮ್ಮ ವಾಹನ ತೊಳೆಯುತ್ತಿದ್ದರು. ಆದರೆ ಪೊಲೀಸರು ಮಾಸ್ಕ್ ಹಾಕಿಲ್ಲ ಎಂಬುದನ್ನೇ ದೊಡ್ಡ ವಿಷಯನ್ನವಾಗಿ ಮಾಡಿ, ಸಾರ್ವಜನಿಕ ಸ್ಥಳದಲ್ಲಿಯೇ ಹೊಡೆದಿದ್ದಾರೆ. ಕಳ್ಳರ ಕೈಗೆ ಬೇಡಿ ತೊಡಿಸುವಂತೆ ಯೋಧ ಸಚಿನ್​ ಕೈಯಿಗೂ ಕೋಳ ಹಾಕಿ ಸ್ಟೇಶನ್​​ನಲ್ಲಿ ಕೂಡಿ ಹಾಕಿದ್ದರು.
ಅವರು ಸಿಆರ್​ಪಿಎಫ್​ ಯೋಧ ಎಂದು ಗೊತ್ತಾದ ಮೇಲೆ ಕೂಡ ಪೊಲೀಸರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಯತ್ನ ಮಾಡಲಿಲ್ಲ. ಈ ಘಟನೆಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರೂ ಕೂಡ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಏಪ್ರಿಲ್​ 23ರಂದು ವೈರಲ್ ಆಗಿತ್ತು.
ಅಂದು ಸಚಿನ್​ ಅವರೇ ಮೊದಲು ಪೊಲೀಸ್ ಪೇದೆಗಳ ಬಟ್ಟೆ ಹಿಡಿದು ಎಳೆದಾಡಿದರು. ಹಾಗಾಗಿ ಕೋಪಗೊಂಡ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಟ್ವಿಸ್ಟ್​ ಸಿಕ್ಕಿದ್ದು, ಪೊಲೀಸರು ವೃಥಾ ಯೋಧನ ಮೇಲೆ ಲಾಠಿ ಎತ್ತಿದ್ದಾರೆ ಎನ್ನಲಾಗಿದೆ.
https://www.facebook.com/VVani4U/videos/1449407835258947/?t=0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 13 =
Remember me
