ಬೆಳಗಾವಿ:ಸಾಮಾನ್ಯವಾಗಿ ಪ್ರಖ್ಯಾತ ಸೆಲೆಬ್ರಿಟಿಗಳು, ಕ್ರಿಕೆಟ್​​ ಆಟಗಾರರು ತಮ್ಮ ಸರಳತೆಯ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಇದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹೊರತಲ್ಲ. ಇದೀಗ ಬೆಳಗಾವಿಯ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದು ಸಚಿನ್​​ ಸರಳತೆ ಮೆರೆದಿದ್ದಾರೆ.
ಮುಂಬೈ ಬೆಳಗಾವಿ ಮಾರ್ಗವಾಗಿ ಕುಟುಂಬ ಸಮೇತ ಗೋವಾಕ್ಕೆ ತೆರಳುತ್ತಿದ್ದ ಸಚಿನ್​​ ಮಾರ್ಗಮಧ್ಯೆ ಟೀ ಕುಡಿಯಲು ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ನಂತರ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕು(ಎ) ಬಳಿಯಿರುವ ವೈಜು ನಿತೂರ್ಕರ್ ಎಂಬುವವರಿಗೆ ಸೇರಿದ ಫೌಜಿ ಟೀ ಸ್ಟಾಲ್​​ನಲ್ಲಿ ಚಹಾ ಸವಿದಿದ್ದಾರೆ. ಈ ವೇಳೆ ಸಚಿನ್​ ಅವರನ್ನು ನೋಡಿ, ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗಳ ಜತೆಯಲ್ಲಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ.
ಸದ್ಯ ಸಚಿನ್​​ ಅವರ ಈ ಸರಳತೆಯ ವಿಡಿಯೋವನ್ನು ವೈಜು ನಿತೂರ್ಕರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + 5 =
Remember me
