ಬೆಂಗಳೂರು:ಇತ್ತೀಚೆಗೆ ಮೊಮ್ಮಗಳನ್ನು ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಾಂತ್ವನ ಹೇಳಲು ತಮಿಳುನಾಡು ಈಶ ಫೌಂಡೇಶನ್​ನ ಸದ್ಗುರು ಜಗ್ಗಿ ವಾಸುದೇವ್ ಅವರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು.
ಈಸ ಸಂದರ್ಭದಲ್ಲಿ ಯಡಿಯೂರಪ್ಪ ಸಹಿತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮೃತಪಟ್ಟ ಡಾ.ಸೌಂದರ್ಯ ಅವರ ಮಗುವನ್ನು ಎತ್ತಿಕೊಂಡು ಕೆಲ ಸಮಯ ಕಳೆದರು.
ಸದ್ಗುರು ಭೇಟಿ ಕುರಿತು ಕೂ ಮಾಡಿರುವ ಯಡಿಯೂರಪ್ಪ ಅವರು, ‘ಇಂದು ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಭಕ್ತಿಪೂರ್ವಕ ವಂದನೆಗಳು. ಅಕಾಲಿಕವಾಗಿ ನಮ್ಮನ್ನು ಅಗಲಿದ ಮೊಮ್ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬದ ಸದಸ್ಯರನ್ನು, ಸದ್ಗುರುಗಳು ಸಾಂತ್ವನದ ಮಾತುಗಳಿಂದ ಸಂತೈಸಿದ್ದು ಮನಸ್ಸಿಗೆ ಅತ್ಯಂತ ಸಮಾಧಾನವುಂಟುಮಾಡಿದೆ’ ಎಂದು ಹೇಳಿದ್ದಾರೆ.
–BS Yediyurappa (@bsybjp)13 Feb 2022

ಐಪಿಎಲ್​ ಮೆಗಾ ಹರಾಜು 2022: ಎರಡನೇ ದಿನದ ಹರಾಜಿನಲ್ಲಿ ಸೇಲಾದ ಮೊದಲ ಆಟಗಾರ ಈತ

ಮೈಮಾಟ ಪ್ರದರ್ಶಿಸಿದ ಮಾತ್ರಕ್ಕೆ ಕೆಟ್ಟ ಸಿನಿಮಾ ಉಳಿಯುವುದಿಲ್ಲ: ದೀಪಿಕಾ ಚಿತ್ರದ ವಿರುದ್ಧ ಕಂಗನಾ ಕೆಂಗಣ್ಣು

ಅಂಗಡಿಯ ಬಾಗಿಲು ಮುಚ್ಚದೇ ಟೀ ಕುಡಿಯಲು ಹೋಗಿದ್ದ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
