ಬೆಂಗಳೂರು:ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿರುವ ಸ್ಯಾಂಡಲ್​ವುಡ್​ ನಟ ದರ್ಶನ್ ಮತ್ತು ಆತನ ಸಹಚರರು ಕಳೆದ ಒಂದು ತಿಂಗಳಿನಿಂದ ಪರಪ್ಪನ ಜೈಲಿನಲ್ಲಿದ್ದಾರೆ. ನಟನನ್ನು ನೋಡಲು ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕರು ಪರಪ್ಪನ ಅಗ್ರಹಾರಕ್ಕೆ ಧಾವಿಸುತ್ತಿದ್ದಾರೆ. ಆದರೆ, ಜೈಲಿನ ನಿಯಮದ ಪ್ರಕಾರ, ವಾರದಲ್ಲಿ ಎರಡು ಬಾರಿ ಮಾತ್ರ ದರ್ಶನ್​ರನ್ನು ನೋಡಲು ಸಾಧ್ಯ. ಹೀಗಾಗಿ ದರ್ಶನ್​ರ ಕುಟುಂಬಸ್ಥರಿಗೆ ಮೊದಲ ಆದ್ಯತೆ ಇದ್ದು, ಉಳಿದವರು ತಮಗೆ ಸಿಕ್ಕ ಸಮಯದಲ್ಲಿ ಬರಬಹುದು ಇಲ್ಲವಾದಲ್ಲಿ ಅವರ ಕುಟುಂಬಸ್ಥರೊಡನೆ ಬರಬಹದು. ಇದೀಗ ಇದೇ ರೀತಿ ಹಾಸ್ಯ ಕಲಾವಿದ ಸಾಧು ಕೋಕಿಲ ಅವರಿಗೂ ಎದುರಾಗಿದೆ.
ಇದನ್ಣೂ ಓದಿ:ಕೇಂದ್ರ ಬಜೆಟ್ 2024: ಸ್ವಂತ ವ್ಯಾಪಾರ ಮಾಡೋ ಕನಸು ಕಂಡಿದ್ದವರಿಗೆ ಸಿಕ್ತು ಬಂಪರ್ ಗಿಫ್ಟ್​!
ಇಂದು ಬೆಳಗ್ಗೆಯೇ ಆರೋಪಿ ದರ್ಶನ್​ರನ್ನು ಭೇಟಿಯಾಗಲು ಬಂದ ಸಾಧು ಕೋಕಿಲ ಅವರ ಪ್ರವೇಶಕ್ಕೆ ನಿರಾಕರಣೆ ಕೇಳಿಬಂದಿದೆ. ವಾರಕ್ಕೆ ಕೇವಲ ಎರಡು ಭೇಟಿ ಹಿನ್ನೆಲೆ ಗುರುವಾರ ತಮ್ಮ ಕುಟುಂಬದವರ ಜತೆ ಭೇಟಿಗೆ ಬರುವಂತೆ ದರ್ಶನ್​ ಸಾಧು ಅವರಲ್ಲಿ ಮನವಿ ಮಾಡಿದ್ದಾರೆ. ದರ್ಶನ್ ಮನವಿಯ ಮೇರೆಗೆ ಸಾಧು ಕೋಕಿಲ ಅಲ್ಲಿಂದ ವಾಪಾಸ್ ಆಗಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ನಟ, ನಾನು ಇಂದು ಭೇಟಿ ಮಾಡಿದರೆ ದರ್ಶನ್ ಅವರ ಕುಟುಂಬದವರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡ್ತೇನೆ. ಮೀಡಿಯಾದವರು ವಿಡಿಯೋ ‌ಮಾಡಿದ್ದರಿಂದ ನನ್ನನ್ನು ಹೊರಗೆ ಕಳುಹಿಸಿಬಿಟ್ಟರು ಎಂದು ನಗು ನಗುತ್ತಲೇ ಹೇಳಿದರು.
ಕೇಂದ್ರ ಬಜೆಟ್ 2024: ಸ್ವಂತ ವ್ಯಾಪಾರ ಮಾಡೋ ಕನಸು ಕಂಡಿದ್ದವರಿಗೆ ಸಿಕ್ತು ಬಂಪರ್ ಗಿಫ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
