ಗುಜರಾತ್​ನ ರಾಜಕೋಟ್ ನಗರದ ಗೇಮ್ ಜೋನ್​ವೊಂದರಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿ ಅವಘಡ ಸರ್ಕಾರಕ್ಕೂ ಸಾರ್ವಜನಿಕರಿಗೂ ಎಚ್ಚರಿಕೆಯ ಗಂಟೆಯಾಗಿದೆ. 12 ಮಕ್ಕಳ ಸಹಿತ 35 ಮಂದಿ ಮೃತಪಟ್ಟ ಈ ದುರ್ಘಟನೆಗೆ ಗೇಮ್ೋನ್​ನಲ್ಲಿ ಒಂದೇ ನಿರ್ಗಮನ ದ್ವಾರ ಇರುವುದೂ ಪ್ರಮುಖ ಕಾರಣ ಎನ್ನುವುದು ವಿಷಾದನೀಯ.
ಈ ಘಟನೆಯನ್ನೇ ಹೋಲುವ ದುರಂತಗಳು ಬೇರೆ ಬೇರೆ ಕಡೆ ಸಂಭವಿಸುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿರುವಾಗ ಅಂಥ ಸ್ಥಳಗಳಲ್ಲಿ ಅಗತ್ಯಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಸರ್ಕಾರಗಳು, ಸಂಬಂಧಪಟ್ಟವರು ಗಂಭೀರವಾಗಿ ಯೋಚಿಸದೇ ನಿರ್ಲಕ್ಷ್ಯ ತಾಳಿರುವುದು ಅಕ್ಷಮ್ಯ ಎಂದೇ ಹೇಳಬೇಕಾಗುತ್ತದೆ. ನಮ್ಮ ರಾಜ್ಯದಲ್ಲೂ ಇಂಥ ನಿರ್ಲಕ್ಷ್ಯದ ಉದಾಹರಣೆಗಳು ಸಾಕಷ್ಟಿವೆ. ಕೆಲ ದಿನಗಳ ಹಿಂದಷ್ಟೇ ರಾಮನಗರದ ರೆಸಾರ್ಟ್ ಒಂದರಲ್ಲಿ ಜಿಪ್ ಲೈನ್ ಮೇಲೆ ನಡೆಯುವಾಗ ಕೇಬಲ್ ತುಂಡಾಗಿ 35 ವರ್ಷದ ಮಹಿಳೆ ಸಾವಿಗೀಡಾಗ ಬೇಕಾಯಿತು. ಆ ರೆಸಾರ್ಟ್ ನಲ್ಲಿ ಸುರಕ್ಷತಾ ಕ್ರಮಗಳು ಹಾಗೂ ಹೆಲ್ಮೆಟ್​ನಂತಹ ಮೂಲ ಉಪಕರಣಗಳ ಕೊರತೆಯೂ ಇತ್ತು ಎಂಬ ಆರೋಪವಿದೆ. ಇದೊಂದು ಉದಾಹರಣೆಯಷ್ಟೇ.
ಚಾರಣಕ್ಕೆ ಹೋದವರು ಸಾವಿಗೀಡಾಗುವುದು, ನಾಪತ್ತೆ ಯಾಗುವುದು, ಜಲಪಾತ ವೀಕ್ಷಣೆಗೆಂದು ಹೋಗಿ ನದಿಗೆ ಇಳಿದು ನೀರಿನ ಸುಳಿಗೆ ಸಿಲುಕಿ ಅಸುನೀಗುವುದು ಇತ್ಯಾದಿ ದುರ್ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಆದರೂ ಸರ್ಕಾರ ಎಚ್ಚರಗೊಳ್ಳದಿದ್ದರೆ ಹೇಗೆ ಎಂದು ಪ್ರಶ್ನಿಸಲೇಬೇಕಾಗುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೆಸಾರ್ಟ್, ಹೋಂ ಸ್ಟೇ, ಗೇಮ್ೋನ್, ಚಾರಣ, ಐತಿಹಾಸಿಕ ಸ್ಥಳ, ದೇವಾಲಯ, ಗಿರಿಧಾಮ ಮೊದಲಾದವುಗಳ ವೀಕ್ಷಣೆಗೆ ಹಾಗೂ ಆ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡುವುದು ಆಗಲೇಬೇಕಾದ ಕೆಲಸ. ರಾಜ್ಯದ ಪ್ರಮುಖ ಆದಾಯದ ಮೂಲವಾಗಿಯೂ ಎಲ್ಲ ಮಾದರಿಯ ಪ್ರವಾಸೋದ್ಯಮವನ್ನು ಬೆಳೆಸಲು ಇಲ್ಲಿ ಸಾಕಷ್ಟು ಅವಕಾಶವಿದೆ. ಆ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳೂ ಆಶಾದಾಯಕವಾಗಿವೆ. ದುರ್ಘಟನೆಗಳ ನಿಯಂತ್ರಣ ಸಂಪೂರ್ಣ ಸಾಧ್ಯವಿಲ್ಲ ಎಂಬುದು ಕೆಲಮಟ್ಟಿಗೆ ನಿಜ. ಆದರೆ ಯಾವುದೇ ಕಾರಣಕ್ಕೂ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದು ಸಲ್ಲದು.
ನಿಯಮಗಳು, ಸುರಕ್ಷತಾ ಕ್ರಮಗಳ ಪರಿಶೀಲನೆ ತುರ್ತು ಅಗತ್ಯವಾಗಿದೆ. ಸಾಹಸ ಕ್ರೀಡೆಗಳ ಸಲುವಾಗಿಯೇ. ಜನರು ರೆಸಾರ್ಟ್​ಗಳನ್ನು ಇಷ್ಟಪಡುತ್ತಾರೆ. ಇಂಥ ಸಾಹಸ ಕ್ರೀಡೆಗಳನ್ನು ನಡೆಸಲು ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿಯಿಂದ ಅನುಮತಿ ಪಡೆದು ನೋಂದಾಯಿಸಿಕೊಳ್ಳಬೇಕು. ಕ್ರೀಡೆ ನಡೆಯುವಾಗ ನುರಿತ ತರಬೇತುದಾರರು ಹಾಜರಿರಬೇಕು ಎಂಬೆಲ್ಲ ನಿಯಮವಿದೆ. ಆದರೆ ಅನಧಿಕೃತವಾಗಿಯೇ ಅನೇಕ ರೆಸಾರ್ಟ್​ಗಳು ಕಾರ್ಯನಿರ್ವಹಿಸುತ್ತಿವೆ. ನೋಂದಾಯಿಸಿಕೊಂಡ ರೆಸಾರ್ಟ್ ಗಳಲ್ಲೂ ಸಂಪೂರ್ಣವಾಗಿ ನಿಯಮ ಪಾಲನೆ ಯಾಗುತ್ತಿರುವ ಬಗ್ಗೆ ಸಂಶಯವಿದೆ. ಸಾರ್ವಜನಿಕರೂ ಕೂಡ ಇಂಥ ತಾಣಗಳಿಗೆ ತೆರಳುವಾಗ ಅಲ್ಲಿನ ಸುರಕ್ಷತಾ ವ್ಯವಸ್ಥೆಗಳ ಕುರಿತು ಖಾತರಿ ಪಡಿಸಿಕೊಳ್ಳುವುದು ಅಗತ್ಯ. ಜತೆಗೆ ಸರ್ಕಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಅಗತ್ಯವಿದೆ. ರೆಸಾರ್ಟ್​ಗಳಲ್ಲಿ ಮಾತ್ರವಲ್ಲ, ಎಲ್ಲ ಪ್ರವಾಸಿ ತಾಣಗಳಲ್ಲಿಯೂ ಅಗತ್ಯ ಮೂಲಸೌಕರ್ಯ, ಪ್ರಥಮ ಚಿಕಿತ್ಸೆ ವ್ಯವಸ್ಥೆ, ಅವಘಡ ಸಂಭವಿಸಿದಾಗ ಜೀವ ಉಳಿಸಲು ಅಗತ್ಯವಾದ ಸೌಕರ್ಯ ಲಭ್ಯವಿರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.
IPL 2024 Final: ಸುಲಭ ತುತ್ತಾದ ಸನ್​ರೈಸರ್ಸ್​: 3ನೇ ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕೆಕೆಆರ್

ರೀಮಲ್‌ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ 1 ಲಕ್ಷ ಜನರ ಸ್ಥಳಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
