ಉತ್ತರಾಖಂಡದ ಉತ್ತರಕಾಶಿಯಲ್ಲಿನ ಸಹಸ್ತ್ರತಾಲ್ ಎಂಬಲ್ಲಿ ಚಾರಣಕ್ಕೆ ಹೋಗಿದ್ದ ಕರ್ನಾಟಕದ 22 ಚಾರಣಿಗರ ಪೈಕಿ ಒಂಬತ್ತು ಜನರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಚಾರಣ ಆರಂಭಿಸಿ, ಚಾರಣದ ಗಮ್ಯ ಸ್ಥಳವನ್ನು ತಲುಪಿದ ತಂಡವು ಮಧ್ಯಾಹ್ನದ ಹೊತ್ತಿಗೆ ಶಿಬಿರಕ್ಕೆ ಹಿಂತಿರುಗುವ ವೇಳೆ ಹಿಮಗಾಳಿಯಿಂದ ಹವಾಮಾನ ಪೂರ್ಣ ಹದಗೆಟ್ಟು ಇಡೀ ತಂಡ ಅಪಾಯಕ್ಕೆ ಸಿಲುಕಿತ್ತು. ಪರ್ವತಾರೋಹಿ ತಂಡ ಮತ್ತು ಎನ್​ಡಿಆರ್​ಎಫ್​ನ ಕ್ಷಿಪ್ರ ಕಾರ್ಯಾಚರಣೆ ಪಡೆ ಚಾರಣಿಗರನ್ನು ಪತ್ತೆ ಹಚ್ಚಿ 13 ಜನರನ್ನು ರಕ್ಷಿಸಿದೆ. ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಚಿವ ಕೃಷ್ಣ ಬೈರೇಗೌಡ ಡೆಹ್ರಾಡೂನ್ ತಲುಪಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ರಕ್ಷಿಸಲ್ಪಟ್ಟ ಚಾರಣಿಗನ ಜತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಫೋನ್​ನಲ್ಲಿ ಮಾತನಾಡಿದ್ದು, ಘಟನೆಯ ವಿವರ ಪಡೆದುಕೊಂಡಿದ್ದಾರೆ.
ನಿಜಕ್ಕೂ ಇದು ದುರದೃಷ್ಟಕರ ಘಟನೆ. ಪ್ರಕೃತಿಯ ಸೊಬಗನ್ನು ಸವಿಯಲು ಹೋದವರು ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ದುಃಖದಾಯಕ. ದೈನಂದಿನ ಜೀವನದ ಏಕತಾನತೆಯಿಂದ ಹೊರಬರಲು, ಪ್ರಕೃತಿಯೊಂದಿಗೆ ಒಂದಿಷ್ಟು ಹೊತ್ತು ಕಾಲ ಕಳೆದು ನಿರಾಳರಾಗಲು ಪ್ರವಾಸ ಮತ್ತು ಚಾರಣ ಕೈಗೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಅತಿಯಾದ ಉತ್ಸಾಹ ಮತ್ತು ಗೊತ್ತಿಲ್ಲದ ಹವಾಮಾನ, ಭೌಗೋಳಿಕ ಪರಿಸ್ಥಿತಿಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.
ಈ ಘಟನೆಯ ಹಿನ್ನೆಲೆಯಲ್ಲಿ ಚಾರಣದ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸುವ ಅನಿವಾರ್ಯತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜನಪ್ರಿಯ ಚಾರಣದ ಸ್ಥಳಗಳೆಂದು ಪ್ರಸಿದ್ಧವಾಗಿರುವ ಜಾಗಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಅವಶ್ಯಕತೆ ಇದೆ. ಮತ್ತು ವರ್ಷದ ಯಾವ ಸಮಯದಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತ, ಹವಾಮಾನ ಹೇಗಿರುತ್ತದೆ, ಪ್ರವಾಸಿಗರು ವಹಿಸಬೇಕಾದ ಎಚ್ಚರಿಕೆ, ತುರ್ತು ಸಂದರ್ಭದಲ್ಲಿ ಸ್ಥಳೀಯವಾಗಿ ಯಾರನ್ನು ಸಂಪರ್ಕ ಮಾಡಬೇಕು ಹೀಗೆ ಹಲವು ಮುಖ್ಯಸಂಗತಿಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು.
ಈ ವರ್ಷದ ಚಾರ್​ಧಾಮ್ ಯಾತ್ರೆಯ ವೇಳೆ ಮೇ ತಿಂಗಳೊಂದರಲ್ಲೇ ದೇಶದ ವಿವಿಧ ಭಾಗಗಳ 50ಕ್ಕೂ ಹೆಚ್ಚು ಯಾತ್ರಿಕರು ಮೃತಪಟ್ಟಿರುವುದು ಕಳವಳಕಾರಿ. ಈ ಪೈಕಿ ಹೆಚ್ಚಿನ ಸಾವುಗಳು ಹವಾಮಾನ ವೈಪರೀತ್ಯ ಮತ್ತು ಹೃದಯಾಘಾತದಿಂದ ಸಂಭವಿಸಿವೆ ಎಂದು ಅಧಿಕಾರಿಗಳೇ ಅಧಿಕೃತ ಮಾಹಿತಿ ನೀಡಿದ್ದಾರೆ. ಪ್ರವಾಸ, ಚಾರಣ ಇದೆಲ್ಲವೂ ಅವಶ್ಯ. ಆದರೆ, ಅಪಾಯಕಾರಿ ತಾಣಗಳಿಗೆ, ಅಪಾಯಕಾರಿ ಹವಾಮಾನವಿರುವ ಸಮಯದಲ್ಲಿ ಚಾರಣ ಸಾಹಸಿಗಳು ಹೋಗುವುದನ್ನು ತಡೆಯಲು ನಿಯಮಗಳನ್ನು ರೂಪಿಸಿ, ಸಮರ್ಪಕವಾಗಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಈ ನಿಯಮಗಳನ್ನು ಪ್ರವಾಸ ಆರಂಭಿಸುವ ಮುನ್ನವೇ ಯಾತ್ರಿಕರಿಗೆ ಮನದಟ್ಟು ಮಾಡಿಕೊಡಬೇಕು. ಅಲ್ಲದೆ, ಕೆಲವೆಡೆ ಯುವಕರು ಅತಿ ಉತ್ಸಾಹದಲ್ಲಿ ನಿಯಮಗಳನ್ನು ಮೀರಿ, ಬೇರೆ ದಾರಿಗಳನ್ನು ಬಳಸಿ ಸಾಹಸಯಾತ್ರೆ ಮಾಡುವುದೂ ಇದೆ. ಆದ್ದರಿಂದ ಜನರು ಕೂಡ ನಿಯಮ ಪಾಲನೆಯನ್ನು ತಪ್ಪದೇ ಮಾಡಿದ್ದಲ್ಲಿ ಅಪಾಯದಿಂದ ದೂರವುಳಿಯಬಹುದು.
ಐರ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ರೋಚಕ ಜಯ: ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
