ಬೆಂಗಳೂರು:ಸಾಹಿತ್ಯ ಎಂಬುದು ಜೀವನದ ಅವಿಭಾಜ್ಯ ಅಂಗ ಎಂದು ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಹಾಗೂ ಲೇಖಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘2019ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಮಾತನಾಡಿ, ಸಾಹಿತ್ಯ ಹಾಗೂ ಜೀವನವನ್ನು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಕರ್ನಾಟಕದ ಅನೇಕ ಮಹನೀಯರು ಸಾಹಿತ್ಯವನ್ನು ಜೀವನವಾಗಿಸಿಕೊಂಡು ಅತ್ಯುತ್ತಮ ಕೃತಿಗಳನ್ನು ನೀಡಿದ್ದಾರೆ. ಎಲ್ಲ ಪ್ರಕಾರಗಳಲ್ಲೂ ಕನ್ನಡ ಸಾಹಿತ್ಯ ವ್ಯಾಪಿಸಿದೆ. ಪ್ರಾಚೀನತೆಯ ಜತೆಗೆ ಆಧುನಿಕ ಸಾಹಿತ್ಯವೂ ವ್ಯಾಪಕವಾಗಿ ಬೆಳೆದಿದೆ. ಸಾಹಿತ್ಯ ಪರಂಪರೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದರು.
ಪ್ರೊ. ಕೆ. ಜಿ. ನಾಗರಾಜಪ್ಪ, ಉಷಾ ಪಿ. ರೈ, ಬಾಬು ಕೃಷ್ಣಮೂರ್ತಿ, ಡಾ. ವೀರಣ್ಣ ರಾಜೂರ, ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ 2019ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್, ರಿಜಿಸ್ಟ್ರಾರ್ ಎನ್. ಕರಿಯಪ್ಪ ಉಪಸ್ಥಿತರಿದ್ದರು.
ನನ್ನ ಬದುಕು ಹಾಗೂ ಬರಹ ಹೋರಾಟದ್ದು. ಅಪ್ರಿಯವಾದದ್ದನ್ನು ಪ್ರಿಯವಾಗಿ ಹೇಳಬೇಕು ಎಂಬ ವಾಕ್ಯವಿದೆ. ಆದರೆ ನಾನು ಅಪ್ರಿಯವಾದದ್ದನ್ನು ಅಪ್ರಿಯವಾಗಿಯೇ, ಪ್ರಿಯವಾದದ್ದನ್ನು ಪ್ರಿಯವಾಗಿಯೇ ಹೇಳಿದೆ. ಇದರಿಂದ ಸಾಹಿತ್ಯ ವಲಯದಲ್ಲಿ ಒಂಟಿಯಾಗಿ ಉಳಿಯಬೇಕಾಯಿತು. ಆದರೆ ನನ್ನ ಸಾಹಿತ್ಯ ಜೀವನದಲ್ಲಿ ನಡೆಸಿದ ಪ್ರಯೋಗಗಳಿಂದಾಗಿ ಇಂದು ತೃಪ್ತ ಜೀವನ ನಡೆಸುತ್ತಿದ್ದೇನೆ.
|ಪ್ರೊ. ಕೆ.ಜಿ. ನಾಗರಾಜಪ್ಪ
ಕನ್ನಡದಲ್ಲಿ ಯಾವ ಸಾಹಿತ್ಯ ಹೆಚ್ಚಾಗಿ ಮೂಡಿಬಂದಿಲ್ಲವೋ ಆ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಬೇಕು ಎಂಬ ಯೋಚನೆ ಬಂತು. ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದ, ಮಡಿದವರ ಕುರಿತು ಬರೆಯಬೇಕೆಂದು ಬರವಣಿಗೆಯಲ್ಲಿ ತೊಡಗಿದ್ದೇನೆ.
|ಬಾಬು ಕೃಷ್ಣಮೂರ್ತಿ
ನನ್ನ ನೆಚ್ಚಿನ ಲೇಖಕಿ ಹಾಗೂ ಪ್ರೀತಿಯ ಗೆಳತಿ ಅನುಪಮಾ ನಿರಂಜನ ಅವರಿಗೆ ನನ್ನನ್ನು ಹೋಲಿಕೆ ಮಾಡಿದ ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಧನ್ಯವಾದ. ನನಗೆ ತುಂಬಾ ಸಂತೋಷವಾಯಿತು.
|ಉಷಾ ಪಿ. ರೈ
ಚನ್ನಬಸವಣ್ಣನವರು ಹೇಳಿದಂತೆ, ಈ ಗೌರವ ನನಗೆ ಬಯಸದೇ ಬಂದ ಭಾಗ್ಯ. ಹಳ್ಳಿಯ ಹುಡುಗನಾಗಿ ಅಲ್ಲಿ ನಡೆಯುವ ನಾಟಕ ನೋಡುವುದು, ಬರೆಯುವುದು, ಆಡುವುದನ್ನು ಮಾಡುತ್ತಿದ್ದರಿಂದ ರಂಗಭೂಮಿ ಎಂಬುದು ನನ್ನ ಮೊದಲ ಆಸಕ್ತಿಯ ಕ್ಷೇತ್ರ. ವಿಶ್ವವಿದ್ಯಾಲಯಕ್ಕೆ ಹೋದ ನಂತರ ಭೂಸ ನೂರು ಮಠ, ಕಲಬುರ್ಗಿಯವರಂಥವರ ಸಹವಾಸದಿಂದ ಸಾಹಿತ್ಯದಲ್ಲಿ ತೊಡಗಿಸಿಕೊಂಡೆ.
|ಡಾ. ವೀರಣ್ಣ ರಾಜೂರ
ನನ್ನ ಮಟ್ಟಿಗೆ, ಸಾಧನೆ ಯಾವುದು, ಸಿದ್ಧಿ ಯಾವುದು ಗೊತ್ತಿಲ್ಲ. ಕೆಲಸ ಮಾಡುವುದಷ್ಟೆ ನನಗೆ ಗೊತ್ತಿರುವುದು. ಸ್ಥಳೀಯ ಚರಿತ್ರೆ ಅಧ್ಯಯನದಲ್ಲಿ ಆಯ್ಕೆಯ ಸ್ವಾತಂತ್ರ್ಯವಿಲ್ಲ. ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗಿದೆ, ನಾನು ನಿಮಿತ್ತ ಮಾತ್ರ.
|ಪ್ರೊ. ಲಕ್ಷ್ಮಣ ತೆಲಗಾವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
