ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಮತ್ತು ಯುವ ಪುರಸ್ಕಾರಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡದ ಇಬ್ಬರು ಲೇಖಕರು ಈ ಪಟ್ಟಿಯಲ್ಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಲೇಖಕಿ ವಿಜಯಶ್ರೀ ಹಾಲಾಡಿ ಅವರ ‘ಸೂರಕ್ಕಿ ಗೇಟ್’ ಕಾದಂಬರಿ ಆಯ್ಕೆ ಆಗಿದೆ. ಡಾ.ಜಯಶ್ರೀ ಸಿ. ಕಂಬಾರ್, ಡಾ.ಆನಂದ ವಿ. ಪಾಟೀಲ್, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬಾಲ ಸಾಹಿತ್ಯ ಪುರಸ್ಕಾರ ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.
ಇದನ್ನೂ ಓದಿ:ಮುಂಗಾರು ಮತ್ತಷ್ಟು ಚುರುಕು: ರಾಜ್ಯದ ಎಲ್ಲೆಲ್ಲಿ ಎಷ್ಟು ದಿನ ಆರೆಂಜ್ ಅಲರ್ಟ್?
ಹಾಗೆಯೇ ಯುವ ಪುರಸ್ಕಾರಕ್ಕೆ ಮಂಜು ನಾಯಕ್ ಚಳ್ಳೂರು ಅವರ ‘ಫೂ ಮತ್ತು ಇತರ ಕಥೆಗಳು’ ಆಯ್ಕೆ ಆಗಿವೆ. ಡಾ.ಎಚ್​.ಎಸ್​. ರಾಘವೇಂದ್ರ ರಾವ್, ಡಾ.ಕೆ.ಮರುಳಸಿದ್ದಪ್ಪ, ಎಂ.ಆರ್.ಕಮಲಾ ಅವರು ಯುವ ಪುರಸ್ಕಾರದ ಕನ್ನಡ ವಿಭಾಗಕ್ಕೆ ತೀರ್ಪುಗಾರರಾಗಿದ್ದರು.
ಇದನ್ನೂ ಓದಿ:70ಕ್ಕೂ ಅಧಿಕ ಚಿನ್ನದ ಪದಕ ಗಳಿಸಿರುವ ‘ಯೋಗಸಂಧ್ಯಾ’; ಹೆಗ್ಗಡೆ-ಬಿಎಸ್​ವೈ ಅವರಿಂದ ಯೋಗರತ್ನ ಪ್ರಶಸ್ತಿ ಪ್ರದಾನ
ಎರಡೂ ಪುರಸ್ಕಾರಕ್ಕೆ ಸ್ಮರಣಿಕೆ ಮತ್ತು ತಲಾ 50 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಸದ್ಯದಲ್ಲೇ ಪುರಸ್ಕಾರ ಪ್ರದಾನವಾಗಲಿದ್ದು, ಆ ಕುರಿತ ವಿವರ ಶೀಘ್ರದಲ್ಲೇ ತಿಳಿಸುವುದಾಗಿ ಅಕಾಡೆಮಿ ತಿಳಿಸಿದೆ.
ಕಾಡಲ್ಲಿ ಯುವತಿಯ ಶವ ಪತ್ತೆ; ಆಕೆಯ ಮೂವರು ಚಿಕ್ಕಮ್ಮಂದಿರ ಬಂಧನ: ಆಗಿದ್ದೇನು?

ಇಬ್ಬರು ಮಕ್ಕಳ ತಾಯಿಯ ಕುತ್ತಿಗೆಗೆ ಇರಿದು, ತನ್ನ ಕುತ್ತಿಗೆಗೂ ಚುಚ್ಚಿಕೊಂಡ!; ಸಾಯಲೆತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದವನ ಕೃತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twelve =
Remember me
