ಬೆಂಗಳೂರು: ರಾಷ್ಟ್ರೀಯ ಸಾಹಿತ್ಯ ಪ್ರಚಾರದ ಅಗ್ರಗಣ್ಯ ಸಂಸ್ಥೆಯಾಗಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್​ನ ಕರ್ನಾಟಕ ಘಟಕವು ಲಾಕ್​ಡೌನ್ ಅವಧಿಯಲ್ಲಿ ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮೂಲಕ ಆನ್​ಲೈನ್​ನಲ್ಲೇ 50 ಹೊಸ ಘಟಕಗಳನ್ನು ಆರಂಭಿಸಿದ್ದು, ಇದೀಗ 51ನೇ ಘಟಕದ ಉದ್ಘಾಟನೆಗೆ ಸಜ್ಜಾಗಿದೆ.
5 ವರ್ಷಗಳ ಹಿಂದೆ ಆರಂಭಗೊಂಡ ಸಾಹಿತ್ಯ ಪರಿಷದ್​ನ ಕರ್ನಾಟಕ ಘಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 50 ಘಟಕಗಳೊಂದಿಗೆ ಕಾರ್ಯಾಚರಿಸುತ್ತಿತ್ತು. ಲಾಕ್​ಡೌನ್ ಅವಧಿಯಲ್ಲಿ 50 ಘಟಕಗಳ ಆರಂಭದೊಂದಿಗೆ ಇದೀಗ ಒಟ್ಟು ಘಟಕಗಳ ಸಂಖ್ಯೆ 100ಕ್ಕೇರಿದೆ. ಜೂ.20ರಂದು ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ಉದ್ಘಾಟನೆ ಆಗಲಿರುವುದು 101ನೇ ಘಟಕ.
ಲಾಕ್​ಡೌನ್ ಕಾಲದಲ್ಲೂ ಸಕ್ರಿಯವಾಗಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಷ್ಟ್ರೀಯ ಸಾಹಿತ್ಯ ಪ್ರಚಾರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವ್ಯಾಪಕವಾಗಲಿದೆ.| ರಘುನಂದನ ಭಟ್ಪ್ರಧಾನ ಕಾರ್ಯದರ್ಶಿ, ಅಭಾಸಾಪ ಕರ್ನಾಟಕ
ಅಭ್ಯಾಸ ವರ್ಗ:ವಿಭಾಗ ಸಂಚಾಲಕರು ಮತ್ತು ಘಟಕ ಸಂಚಾಲಕರ ಮುಂದಾಳತ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವೆಬಿನಾರ್ ಮೂಲಕ ಪರಿಷದ್ ಅಭ್ಯಾಸ ವರ್ಗ ನಡೆಯುತ್ತಿದೆ. ರಾಷ್ಟ್ರೀಯ ಸಾಹಿತ್ಯದ ಸೃಷ್ಟಿ ಮತ್ತು ಪ್ರಚಾರ, ಸಾಹಿತ್ಯದ ಕಾರ್ಯಕರ್ತರು ಹೇಗಿರಬೇಕು, ಕಾರ್ಯಕರ್ತರನ್ನು ಮಾನಸಿಕವಾಗಿ ಸಿದ್ಧಗೊಳಿಸುವುದನ್ನು ಅಭ್ಯಾಸ ವರ್ಗದಲ್ಲಿ ತಿಳಿಸಲಾಗುತ್ತದೆ. ರಾಮನಗರದಲ್ಲಿ ಯುವ ಬರಹಗಾರರಿಗೆ ಒಂದು ವಾರದ ಅಭ್ಯಾಸ ವರ್ಗ ಈಗ ನಡೆಯುತ್ತಿದೆ. ಕಥಾ ಕಮ್ಮಟದಲ್ಲಿ 60 ಉತ್ಸಾಹಿಗಳು ಭಾಗವಹಿಸಿದ್ದಾರೆ. ಸಮಾಜಕ್ಕೆ ಎಂಥ ಕತೆಗಳು ಬೇಕು ಎನ್ನುವುದರ ವಿಮರ್ಶೆಯೂ ಇಲ್ಲಿ ನಡೆಯುತ್ತಿದೆ. ಜತೆಗೆ ಮೈಸೂರಿನಲ್ಲಿ ನಾಟಕ ಕಮ್ಮಟ ಮತ್ತು ದಾವಣಗೆರೆಯಲ್ಲಿ ಕಾವ್ಯ ಕಮ್ಮಟಕ್ಕೆ ಸಿದ್ಧತೆ ನಡೆಯುತ್ತಿವೆ.
ಹಲ್ಮಿಡಿಯಲ್ಲಿ ಸಾಹಿತ್ಯ ಸಂಧಾನ:ಕನ್ನಡದ ಮೊದಲ ಶಾಸನ ಪತ್ತೆಯಾದ ಹಾಸನ ಜಿಲ್ಲೆ ಹಲ್ಮಿಡಿ ಗ್ರಾಮದಲ್ಲಿ 51ನೇ ಘಟಕ ಶನಿವಾರ ಉದ್ಘಾಟನೆಗೊಳ್ಳಲಿದೆ. ಅ.ಭಾ.ಸಾ.ಪ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಗ್ವಾಲಿಯರ್​ನ ಶ್ರೀಧರ ಪರಾಡಕರ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋುಷಿಕುಮಾರ್ ಮಿಶ್ರ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಪ್ರೊ. ಪ್ರೇಮಶೇಖರ ಉಪಸ್ಥಿತರಿರುತ್ತಾರೆ.
ಡ್ರ್ಯಾಗನ್ ಬೆನ್ನಲುಬು ಮುರಿಯೋದಕ್ಕೆ ಜಾಗೃತಿ ಅಭಿಯಾನ: ಮನೆಮನೆಗೆ ತೆರಳಲಿದ್ದಾರೆ ವಿಹಿಂಪ ಕಾರ್ಯಕರ್ತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
