ಕಲಬುರಗಿ:ಇದನ್ನು ಹುಚ್ಚು ಅಭಿಮಾನ ಅಂತೀರಾ? ಅಥವಾ ಅತಿರೇಖದ ಪರಮಾವಧಿ ಅಂತೀರಾ ನಿಮಗೆ ಬಿಟ್ಟದ್ದು. ದೇಶದಲ್ಲಿ ಕೋಟ್ಯಂತರ ಜನ ತುತ್ತು ಅನ್ನಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ, ಸಾವಿರಾರು ಮಂದಿ ಹಸಿವಿನಿಂದಲೇ ಸಾಯುತ್ತಿದ್ದಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ನಾಯಕ ಬರ್ತ್​ ಡೇ ಪಾರ್ಟಿಯಲ್ಲಿ ನೋಟಿನ ಮಳೆಯನ್ನೇ ಸುರಿಸಿದ್ದಾನೆ! ಈ ದೃಶ್ಯ ವೈರಲ್​ ಆಗಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.
ಅಂದಹಾಗೆ ಇಂತಹ ಘಟನೆ ಕಲಬುರಗಿ ನಗರದ ಪಿಲ್ಟರ್ ಬೆಡ್ ಏರಿಯಾದಲ್ಲಿ ಫೆ.10ರಂದು ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಯುವ ಮುಖಂಡ ಸೈನಿಕ್ ರಾಠೋಡ್ ಅವರ ಹುಟ್ಟುಹಬ್ಬ ಇತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸೈನಿಕ್ ರಾಠೋಡ್ ಬರ್ತ್​ಡೇ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.ಇದನ್ನೂ ಓದಿರಿಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು
ಬರ್ತ್​ ಡೇ ಕಾರ್ಯಕ್ರಮದಲ್ಲಿ ಕೆಲ ಅಭಿಮಾನಿಗಳು ಸೈನಿಕ್ ರಾಠೋಡ್ ಅವರಿಗೆ ಹೂವಿನ ಮಾಲೆ ಹಾಕಿ ಹಾಲಿನ ಅಭಿಷೇಕವನ್ನೂ ಮಾಡಿದ್ದಾರೆ. ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಸೈನಿಕ್ ರಾಠೋಡ್​ರ ಬೆಂಬಲಿಗನೊಬ್ಬ ವೇದಿಕೆ ಮೇಲೆ ನಿಂತು ಜನರತ್ತ ಕಂತೆಕಂತೆ ನೋಟುಗಳನ್ನು ಎಸೆದಿದ್ದಾರೆ.
ಈ ಎಲ್ಲ ದೃಶ್ಯವೂ ವೈರಲ್​ ಆಗಿದ್ದು, ಬಿಜೆಪಿ ಮುಖಂಡನಿಗೆ ದುಡ್ಡಿನ ಬೇಲೆನೆ ಗೊತ್ತಿಲ್ವಾ? ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಇಂತಹ ವರ್ತನೆ ಮುಖಂಡರಿಗೆ ಶೋಭೆ ತರುವುದಿಲ್ಲ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದವರೇ ಕೋತಿಗೆ ಹೆಂಡ ಕುಡಿಸಿದಂತೆ ಆಡಿದ್ರೆ ಹೇಗೆ? ಎಂದೆಲ್ಲ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಬರ್ತ್​ ಡೇ ಪಾರ್ಟಿಯಲ್ಲಿ ಹಣ ಚೆಲ್ಲಿದ ದೃಶ್ಯಕ್ಕಾಗಿ ಕೆಳಗೆ ಇರುವ ವಿಜಯವಾಣಿ ಫೇಸ್​ಬುಕ್​ ಲಿಂಕ್​ ಮೇಲೆ ಕ್ಲಿಕ್​ ಮಾಡಿ.

ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
