ಭಾರತ ತನ್ನ ವೈವಿಧ್ಯಕ್ಕೆ ಹೆಸರಾದ ದೇಶ. ಹಲವಾರು ಶತಮಾನಗಳಿಂದಲೂ ಇಲ್ಲಿ ಅಸಂಖ್ಯಾತ ಸಮುದಾಯಗಳು ಸಹಬಾಳ್ವೆ ನಡೆಸಿವೆ. ಅಂತಹ ಸಮುದಾಯಗಳಲ್ಲಿ ಭಾರತದಾದ್ಯಂತ ಹರಡಿರುವ, ವಿಭಿನ್ನ, ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಬಂಜಾರ ಸಮುದಾಯವೂ ಒಂದಾಗಿದೆ. ಬಂಜಾರ ಸಮುದಾಯದ ಸಾಮರ್ಥ್ಯವನ್ನು ಅರಿತ ಔರಂಗಜೇಬ್ ಬಂಜಾರರನ್ನು ಮೊಘಲ್ ಸೈನ್ಯಕ್ಕೆ ಸೇರುವಂತೆ ಆಮಿಷವೊಡ್ಡಿ, ಅದಕ್ಕೆ ಒಪ್ಪದವರನ್ನು ಸಂಹರಿಸಿದ್ದ. ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದ ಬಂಜಾರರು, ಅತಿವೃಷ್ಟಿ, ಅನಾವೃಷ್ಟಿ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅವಶ್ಯಕ ವಸ್ತುಗಳನ್ನು ದೇಶಾದ್ಯಂತ ಪೂರೈಸುತ್ತಿದ್ದರು.
ಕಾಲಕಾಲಕ್ಕೆ ವಿವಿಧ ಸಂತರು, ದಾರ್ಶನಿಕರು, ಸಮಾಜ ಸುಧಾರಕರು ಈ ನೆಲದಲ್ಲಿ ಜನಿಸಿ, ಜೀವನಮಾರ್ಗ ಬೋಧಿಸಿ ದ್ದಾರೆ. ಅದೇ ರೀತಿಯಲ್ಲಿ, ಹಿಂದುಳಿದಿದ್ದ ಬಂಜಾರ ಸಮುದಾಯ ವನ್ನು ಜ್ಞಾನದ ಬೆಳಕಿನೆಡೆಗೆ ತಂದವರು ಸಂತ ಸೇವಾಲಾಲ್. ಶ್ರೀ ಸಂತ ಸೇವಾಲಾಲರು 1739ರ ಫೆ. 15ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುರಗೊಂಡನಕೊಪ್ಪ ಗ್ರಾಮದಲ್ಲಿ
ಭೀಮ ನಾಯ್ಕ ಹಾಗೂ ಧರ್ಮಣಿ ಬಾಯಿ ಅವರ ಜ್ಯೇಷ್ಠಪುತ್ರನಾಗಿ ಜನಿಸಿದರು. ಸೇವಾಲಾಲ್ ಅವರು ಜಗದಾಂಬೆ ದೇವಿಯ ವರಪ್ರಸಾದವಾಗಿ ಜನಿಸಿದವರು. ಸಂಪೂರ್ಣ ಬಂಜಾರ ಸಮುದಾಯವನ್ನು ಒಗ್ಗೂಡಿಸಿ, ಅವರಿಗೆ ಸುಸಜ್ಜಿತ ಸಮಾಜದ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು, ಸಂಪೂರ್ಣ ಅಹಿಂಸಾ ಮಾರ್ಗವನ್ನು ಸಾರಿದರು.
ಬಂಜಾರ ಸಮುದಾಯ ಮಾಂಸಾಹಾರ ಸೇವಿಸುವ ಸಮುದಾಯವೇ ಆಗಿದ್ದರೂ, ಸಂತ ಸೇವಾಲಾಲರು ಜೀವನಪರ್ಯಂತ ಸಸ್ಯಾಹಾರಿ ಯಾಗಿದ್ದರು. ಅವರು ಸದಾ ಬ್ರಹ್ಮಚರ್ಯವನ್ನು ಪಾಲಿಸಿ, ಜಗದಂಬೆಯನ್ನು ಆರಾಧಿಸುತ್ತ, ಬಹಳಷ್ಟು ಪವಾಡಗಳನ್ನು ನಡೆಸಿದರು. 18ನೇ ಶತಮಾನದಲ್ಲಿ ಲಂಬಾಣಿ ಜನಾಂಗದ ಹಕ್ಕಿಗಾಗಿ ಆಗಿನ ನಿಜಾಮರು ಹಾಗೂ ಮೈಸೂರು ಅರಸರೊಂದಿಗೆ ಹೋರಾಟವನ್ನೂ ಮಾಡಿದ್ದರು. ಮುಂಬೈಯ ಸ್ಮಿತ್ ಭಾವುಚಾ ಎಂಬಲ್ಲಿ ಪೋರ್ಚುಗೀಸರ ಹಡಗು ಸಿಕ್ಕಿಹಾಕಿಕೊಂಡಾಗ ಅದನ್ನು ಜಾಣತನದಿಂದ ದಡ ಸೇರಿಸಿದ ಸೇವಾಲಾಲರಿಗೆ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಆದ್ದರಿಂದಲೇ ಸೇವಾಲಾಲರನ್ನು ‘ಮೋತಿವಾಳೋ’ ಎಂದು ಕರೆಯುತ್ತಿದ್ದರು.
ಸೇವಾಲಾಲ್ ಒಬ್ಬ ದನಗಾಹಿಯಾಗಿದ್ದರೂ, ಜೀವನದ ಅನುಭವವನ್ನು ತತ್ವದ ಮೂಲಕ ಬೋಧಿಸಿ, ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ವತೀತರಾಗಿ ಎಂದು ಸಾರಿದರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ (ದಾರು, ಗಾಂಜಾ ಮತ್ ಪೀವೋ) ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ (ಕಾಮ ಕ್ರೋಧೇರಿ ಧೂಣಿ ಬಾಳೋ), ಪ್ರಾಮಾಣಿಕ ರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ ಎಂದು ತಿಳಿಸಿದರು. ಇಂದಿಗೂ ಅವರ ಬೋಧನೆ
ಗಳು ಬಂಜಾರ ಸಮಾಜಕ್ಕೆ ದಾರಿದೀಪವಾಗಿದೆ. ಗೋರಕ್ಷಣೆಗೆ ಅಪಾರ ಮಹತ್ವ ನೀಡಿದ್ದ ಸೇವಾಲಾಲರು, ಗೋವುಗಳನ್ನು ದೇವರಂತೆ ಕಾಣುವಂತೆ ಕರೆ ನೀಡಿದ್ದರು. ಅಂದಿನ ಪುರುಷ ಪ್ರಧಾನ ವ್ಯವಸ್ಥೆಯಯಲ್ಲಿಯೂ ಸೇವಾಲಾಲರು ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಹಿಂದಲ್ಲ ಎಂದು ಪರಿಗಣಿಸಿ ದ್ದರು. ಮಹಿಳೆಯರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಕರೆ ನೀಡಿ, ಸಮಾಜದಲ್ಲಿ ಪರಿವರ್ತನೆಗೆ ಪ್ರಯತ್ನಿಸಿದ ಯುಗಪುರುಷರಾಗಿದ್ದರು.
ದೇಶಾದ್ಯಂತ ಏಕಭಾಷೆ, ಒಂದೇ ಸಂಸ್ಕೃತಿ, ಮದುವೆ, ಗೋತ್ರ, ಆಚಾರ-ವಿಚಾರ, ಉಡುಗೆ ತೊಡುಗೆ ಅನುಸರಿಸುವ ಬಂಜಾರ ಜನಾಂಗವನ್ನು ಭಾರತೀಯ ಹಿಂದು ಸಂಸ್ಕೃತಿಯಲ್ಲಿ ಒಂದಾಗಿ, ಭ್ರಾತೃತ್ವದಿಂದ ಬಾಳುವಂತೆ ಸೇವಾಲಾಲರು ಪ್ರೇರಣೆ ನೀಡಿದರು. ಬಂಜಾರ ಸಮಾಜದಲ್ಲಿ ಬಡತನವಿದ್ದರೂ ಕಷ್ಟಪಟ್ಟು ದುಡಿದು ಎಲ್ಲರೊಂದಿಗೆ ಶಾಂತಿ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಸೇವಾಲಾಲರ ಮಾರ್ಗದರ್ಶನ.
ಬುದ್ಧ, ಬಸವ, ಕಬೀರ, ಗುರುನಾನಕರಂತೆ ಸೇವಾಲಾಲರು ಸತ್ಯ, ಅಹಿಂಸೆ, ಪ್ರಾಮಾಣಿಕತೆಯ ಜೀವನಮೌಲ್ಯಗಳನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಸಮಾಜಕ್ಕೆ ನಿರಂತರವಾಗಿ ಬೋಧನೆ ಮಾಡಿದ ಸಂತ ಸೇವಾಲಾಲರು ಅಂತಿಮವಾಗಿ, ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಹೋರಾಗಡ್ ಎಂಬಲ್ಲಿ 1806 ಡಿಸೆಂಬರ್ 4ರಂದು ದೇಹತ್ಯಾಗ ಮಾಡಿದರು. ಅವರು ಭೌತಿಕವಾಗಿ ಇಲ್ಲವಾಗಿದ್ದರೂ, ಅವರ ಬೋಧನೆಗಳು ಸೂರ್ಯನಂತೆ ಪ್ರಜ್ವಲಿಸುತ್ತ ಸಮುದಾಯಕ್ಕೆ ಸರಿಯಾದ ದಾರಿ ತೋರಿಸುತ್ತಿವೆ. ಪ್ರತಿವರ್ಷವೂ ಸೇವಾಲಾಲ್ ಜಯಂತಿಯ ಪೂರ್ವಭಾವಿಯಾಗಿ ಬಂಜಾರ ಸಮುದಾಯದ ಯುವಕರು ಸೇವಾಲಾಲ್ ಮಾಲಾಧಾರಣೆ ಮಾಡಿ, ಸೇವಾಲಾಲರ ಬೋಧನೆಗಳನ್ನು ಅನುಸರಿಸಿ, ಅವರ ಜನ್ಮಭೂಮಿಗೆ ತೆರಳಿ, ಸಂತ ಸೇವಾಲಾಲರಿಗೆ ನಮಿಸುತ್ತಾರೆ. ಅವರ ಮಾರ್ಗದರ್ಶನ, ಬೋಧನೆಗಳು ಮಾನವ ಜನಾಂಗಕ್ಕೇ ಹಾದಿತೋರುತ್ತಿವೆ.
(ಲೇಖಕರು ಮಧುಮೇಹ ತಜ್ಞರು, ಹವ್ಯಾಸಿ ಬರಹಗಾರರು)
ಹೃದಯದ ಬಗ್ಗೆ ಕಾಳಜಿ ಇದ್ದರೆ ಈ ಆರು ಆರೋಗ್ಯಕರ ತಿಂಡಿಗಳನ್ನು ಸೇವಿಸಿ

ಈತನಿಗಾಗಿ 22ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡೆ; ಸ್ಟಾರ್​ ನಟನೊಂದಿಗಿನ ಸಂಬಂಧದ ಕುರಿತು ಮೌನ ಮುರಿದ ನಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 7 =
Remember me
