ಬೆಂಗಳೂರು:ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ದಾನವಾಗಿ ಕೊಟ್ಟಿರುವ 96 ಎಕರೆ ಜಮೀನನ್ನು ಭೂ ಕಬಳಿಕೆದಾರರು ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ ನೇತೃತ್ವದಲ್ಲಿ ಒಕ್ಕಲಿಗ ಸಮಾಜದ ಮುಖಂಡರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯಕ್ಕಾಗಿ ಹಾಸ್ಟೆಲ್ ನಿರ್ಮಿಸಲು ರಂಗಮ್ಮಕೃಷ್ಣಪ್ಪ ಎಂಬುವರು 1978ರಲ್ಲಿ 96 ಎಕರೆ ಭೂಮಿಯನ್ನು ಸಂಘಕ್ಕೆ ದಾನ ನೀಡಿದ್ದರು. ಈ ಜಾಗವನ್ನು ಕೆಲವು ಪ್ರಭಾವಿಗಳು ಹಂತಹಂತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರನಿಂದ (ಬಿಡಿಎ) ಬಡಾವಣೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಪಡೆದಿದ್ದಾರೆ. ಕೆಲವರು ಲೇಔಟ್ ಮಾಡುವುದಾಗಿ ಫಲಕ ಹಾಕಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದ್ದು, ಪ್ರಕರಣ ಬಾಕಿ ಇದೆ. ಸಜ್ಜೆಪಾಳ್ಯದ ಜಮೀನು ಉಳಿಸಲು ನಮ್ಮ ಸಂಘ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆಯುವಂತೆ ಮಾಜಿ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದರು. ಸಂಘದ ನಿರ್ದೇಶಕ ಅಶೋಕ್, ಸಜ್ಜೆಪಾಳ್ಯದ ಜಮೀನು ಹೋರಾಟಗಾರರಾದ ಕೆನಲಿಗೌಡ, ಗಂಗಾಧರ್, ಪ್ರಸನ್ನ, ಮೋಹನ್‌ಗೌಡ, ಹಲ್ಲೇಗೆರೆ ಕೃಷ್ಣ ಮತ್ತಿತರರಿದ್ದರು.
ಉದ್ಯೋಗ ಕೊಡಿಸುವುದಾಗಿ ಯುವಕರಿಗೆ 89 ಲಕ್ಷ ರೂ. ವಂಚನೆ
ಸಂಘಕ್ಕೆ ಉಸ್ತುವಾರಿ ನೀಡಿದ್ದ ರಂಗಮ್ಮ:ರಂಗಮ್ಮ, ತಮ್ಮ ಪತಿ ಕೃಷ್ಣಪ್ಪ ಹೆಸರಿನಲ್ಲಿ ಟ್ರಸ್ಟ್ ರಚಿಸಿ, ಸಂಘದ ಉಸ್ತುವಾರಿಗಾಗಿ ಜಮೀನನ್ನು ದಾನ ಕೊಟ್ಟಿದ್ದರು. ಟ್ರಸ್ಟ್‌ಗೆ ಸೇರಿದ್ದ ಆಸ್ತಿಯು ಒಕ್ಕಲಿಗರ ಸಂಘದ ಮೇಲುಸ್ತುವಾರಿಯಲ್ಲಿತ್ತು. ಇದೀಗ ಈ ಜಮೀನಿನಲ್ಲಿ 52 ಎಕರೆ ಬೇರೆಯವರಿಗೆ ಭೂ ಮಂಜೂರಾಗಿದ್ದು (ಎಲ್‌ಆರ್‌ಎ್), ಉಳಿದ 44 ಎಕರೆಯಲ್ಲಿ ಈಗ ಲೇಔಟ್ ಮಾಡಲಾಗುತ್ತಿದೆ. ಅಪ್ಪಚ್ಚು ರಂಜನ್ ನೇತೃತ್ವದ 13ನೇ ವಿಧಾನಸಭಾ ಅರ್ಜಿ ಸಮಿತಿ, ನ್ಯಾಯಪೀಠಗಳು ಟ್ರಸ್ಟ್‌ನ ಉದ್ದೇಶಗಳಿಗೆ ಸೇರಬೇಕೆಂದು ಸ್ಪಷ್ಟವಾಗಿ ಹೇಳಿವೆ. ಆದರೂ, ಕೆಲ ಪ್ರಭಾವಿಗಳು, ರಾಜಕೀಯ ಹಾಗೂ ಹಣ ಪ್ರಭಾವ ಬಳಸಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಡಿ. ಹನುಮಂತಯ್ಯ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
