ಹಾಸನ:ನಮ್ಮ ತಾಯಿ ವಿಷ ಕುಡಿದು ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಣ್ಣೀರು ಹಾಕುತ್ತ ಅಂತ್ಯಸಂಸ್ಕಾರ ಮಾಡಲು ಆಕೆಯ ಮಕ್ಕಳಿಬ್ಬರು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಸಾವಿನ ರಹಸ್ಯ ಬೇಧಿಸಿದ್ದು, ಗ್ರಾಮಸ್ಥರೇ ಶಾಕ್​ ಆದ ಘಟನೆ ಸಕಲೇಶಪುರ ತಾಲೂಕಿನ ಕರಡಿಗಾಲ ಗ್ರಾಮದಲ್ಲಿ ಸಂಭವಿಸಿದೆ.
ಮಾ.16ರ ಸಂಜೆ ತಂಗ್ಯಮ್ಮ(65) ತನ್ನ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ತಂಗ್ಯಮ್ಮಗೆ ಮೂವರು ಗಂಡು ಮಕ್ಕಳಿದ್ದಾರೆ. ಆ ಪೈಕಿ ಇಬ್ಬರು ಮಕ್ಕಳು ನಮ್ಮ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೋಳಾಡುತ್ತಿದ್ದರು. ಆಕೆಯ ಕಿರಿಯ ಪುತ್ರನನ್ನು ಅವ್ವ ಸತ್ತಿದ್ದಾಳೆ ಬಾ ಎಂದು ಜಮೀನಿನ ಬಳಿ ಕರೆದೊಯ್ದಿದ್ದರು. ಊರಿನ ಜನರು ಸಾಯುವಂತಹದ್ದು ಏನಾಯ್ತು? ಹೀಗೇಕೆ ಮಾಡಿಕೊಂಡು ಬಿಟ್ಟಳು? ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟಳಲ್ಲ ಎಂದು ಮರುಕವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆಯೂ ನಡೆದಿತ್ತು. ಆದರೆ, ಮೃತಳ ಕಿರಿಯ ಪುತ್ರನಿಗೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಅವ್ವನ ದೇಹದ ಮೇಲಿದ್ದ ಗಾಯದ ಗುರುತು ಸ್ಪಷ್ಟ ಮಾಡಿತ್ತು. ಅಂತ್ಯಕ್ರಿಯೆ ನಡೆಸುವ ಮುನ್ನವೇ ಅವ್ವನ ಸಾವಿನ ಹಿಂದೆ ಯಾರದ್ದೋ ಕೈವಾಡವಿದೆ ಎಂದು ಮೃತಳ ಕಿರಿಯ ಪುತ್ರ ಪೊಲೀಸರಿಗೆ ತಿಳಿಸಿದ್ದೇ ತಡ ರಹಸ್ಯ ಬಯಲಾಗಿದೆ.ಇದನ್ನೂ ಓದಿರಿತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ
ಕರಡಿಗಾಲ ಗ್ರಾಮದ ತಂಗ್ಯಮ್ಮ ತನ್ನ ಮೂವರು ಮಕ್ಕಳಿಗೂ ಐದಾರು ವರ್ಷದ ಹಿಂದೆಯೇ ಏಳು ಎಕರೆ ಜಮೀನನ್ನು ಪಾಲು ಮಾಡಿಕೊಟ್ಟಿದ್ದರು. ಅರ್ಧ ಎಕರೆ ಜಮೀನನ್ನು ಜೀವನಾಧಾರಕ್ಕಾಗಿ ಇಟ್ಟುಕೊಂಡಿದ್ದ ತಂಗ್ಯಮ್ಮ, ಮೂರು ಎಮ್ಮೆ ಸಾಕಿಕೊಂಡು ಮುರುಕಲು ಮನೆಯಲ್ಲಿ ಬದುಕು ಸಾಗಿಸುತ್ತಿದ್ದರು. ಆದರೆ ಕುಡಿತಕ್ಕೆ ದಾಸರಾಗಿದ್ದ ಹಿರಿಯ ಮಗ ರಾಜೇಗೌಡ(48) ಹಾಗೂ ಎರಡನೇ ಮಗ ಸುಬ್ರಹ್ಮಣ್ಯ(45) ಇಬ್ಬರ ಕಣ್ಣು ಅವ್ವನ ಒಡವೆ ಮೇಲೆ ಬಿದ್ದಿತ್ತು. ಪುಸಲಾಯಿಸಿ ಅವ್ವನ ಆಭರಣ ಪಡೆದ ಅವರಿಬ್ಬರು ಗಿರಿವಿ ಇಟ್ಟುಕೊಂಡಿದ್ದರು. ಐದಾರು ತಿಂಗಳಾದರೂ ಒಡವೆ ಬಿಡಿಸಿ ಕೊಟ್ಟಿಲ್ಲ ಏಕೆ? ಎಂದ ತಂಗ್ಯಮ್ಮ ಕೇಳಿದ್ದಕ್ಕೆ ಮಕ್ಕಳಿಬ್ಬರೂ ಗಲಾಟೆ ಮಾಡಿದ್ದರು. ಮಾ.16ರಂದು ಎಮ್ಮೆಗಳಿಗೆ ಹುಲ್ಲು ತರಲೆಂದು ತೋಟಕ್ಕೆ ಹೋದ ಅವ್ವನನ್ನು ಅಲ್ಲೇ ಕೊಂದು ಹಾಕಿ, ಬೆಂಗಳೂರಿನಲ್ಲಿದ್ದ ತಮ್ಮ ಹೇಮಂತ್​ಗೆ ಫೊನ್ ಮಾಡಿ ಅಮ್ಮ ಜಮೀನಿನ ಬಳಿ ಮೃತಪಟ್ಟಿದ್ದಾರೆ ಬಾ ಎಂದು ಹೇಳಿದ್ದರು.ಇದನ್ನೂ ಓದಿರಿಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ
ಅಂದು ರಾತ್ರಿಯೇ ಊರಿಗೆ ಬಂದ ಹೇಮಂತ್​ಗೆ, ಅಮ್ಮನ ಕುತ್ತಿಗೆ ಭಾಗದಲ್ಲಿದ್ದ ಗಾಯ ಅನುಮಾನ ಮೂಡಿಸಿತ್ತು. ಕೂಡಲೇ ಸಕಲೇಶಪುರ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದ. ಸ್ಥಳಕ್ಕೆ ದೌಡಾಯಿಸಿದ ಸಕಲೇಶಪುರ ಸಿಪಿಐ ಮತ್ತು ಸಕಲೇಶಪುರ ಗ್ರಾಮಾಂತರ ಠಾಣೆ ಎಸ್ಐ ನೇತೃತ್ವದ ತಂಡ ಅಂತ್ಯಕ್ರಿಯೆ ಸ್ಥಗಿತಗೊಳಿಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರಕ್ಕೆ ಸಾಗಿಸಿದ್ದರು. ಅಷ್ಟರಲ್ಲಿ ಒಡವೆ ಹಾಗೂ ಹಣಕ್ಕಾಗಿ ಜಗಳ ತೆಗೆದು ತಾಯಿಯನ್ನು ಕೊಂದು ಆತ್ಮಹತ್ಯೆ ನಾಟಕ‌ ಮಾಡಿದ್ದ ದುಷ್ಟರ ಕೃತ್ಯ ಬಯಲಾಗಿದೆ. ಪಾಪಿ ಮಕ್ಕಳಿಬ್ಬರನ್ನೂ ಪೊಲೀಸರು ಜೈಲಿಗಟ್ಟಿದ್ದಾರೆ.
ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಯುವಕನಿಂದ ಹಿಗ್ಗಾಮುಗ್ಗಾ ತರಾಟೆ! ಶಾಸಕಿಯಿಂದ ಮೊಂಡು ಸಮರ್ಥನೆ

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
