ನೆಲಮಂಗಲ:ಕೆಲಸ ಮಾಡಿಸಿಕೊಂಡಾತ ಸಂಬಳ ಕೊಡದೆ ಸತಾಯಿಸಿದ್ದಲ್ಲದೆ, ಕೊನೆಗೆ ಕೊಲೆ ಮಾಡುವ ದುಷ್ಕೃತ್ಯಕ್ಕೂ ಕೈ ಹಾಕಿದ ಸುದ್ದಿ ಎಂತಹವರಿಗೂ ಆತಂಕ ಮೂಡಿಸುತ್ತಿದೆ.
ಇಂತಹ ದುಷ್ಕೃತ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಶ್ರೀಸಾಯಿ ಲೇಔಟ್​ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಯುವಕ ಸತೀಶ್(26) ಕೊಲೆಯಾಗಿದ್ದಾರೆ.ಇದನ್ನೂ ಓದಿರಿಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!
ಏನಿದು ಪ್ರಕರಣ?:ಹರೀಶ್​ ಎಂಬುವರಿಗೆ ಸೇರಿದ ಟ್ಯಾಕ್ಸಿಯಲ್ಲಿ ಪ್ರದೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಐದು ತಿಂಗಳಿಂದ ಬರೀ ಅಡ್ವಾನ್ಸ್ ಹಣ ಕೊಟ್ಟು ದುಡಿಸಿಕೊಳ್ಳುತ್ತಿದ್ದ ಹರೀಶ್, ಸಂಬಳ ಕೊಟ್ಟಿರಲಿಲ್ಲ. ಸಂಬಳ ಬೇಕೆಂದು ಪ್ರದೀಪ್​ ಹಲವು ಬಾರಿ ಕೇಳಿದ್ದರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಶುಕ್ರವಾರ ರಾತ್ರಿ ಸಂಬಳ ಕೊಡುವುದಾಗಿ ಹರೀಶ್​ನನ್ನು ಪ್ರದೀಪ್​ ಕರೆದಿದ್ದ. ಅದರಂತೆ ಹರೀಶ್​ ತನ್ನ ಸ್ನೇಹಿತ ಸತೀಶ್​ನನನೂ ಜತೆಗೆ ಕರೆದೊಯ್ದಿದ್ದ.
ಈ ವೇಳೆ ಬಸ್​ ಮಾಲೀಕ ಹರೀಶ್​ ಮತ್ತವನ ಸಹಚರರಾದ ಮಲ್ಲೇಶ್, ಸಿದ್ದು ಕಂಠಪೂರ್ತಿ ಕುಡಿದಿದ್ದರು. ಸಂಬಳದ ವಿಚಾರವಾಗಿ ವಾಗ್ವಾದ ನಡೆಸಿದ್ದಲ್ಲದೆ ಬಿಯರ್ ಬಾಟಲಿಯಿಂದ ಸತೀಶ್​ನ ಹಣೆ ಮತ್ತು ಮುಖಕ್ಕೆ ಮನಸೋಇಚ್ಛೆ ಚುಚ್ಚಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸತೀಶ್​ಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ಆಂಬುಲೆನ್ಸ್​ ಮುಖಾಂತರ ರವಾನಿಸಲಾಯಿತು. ಅಲ್ಲಿ ಬೆಡ್ ಸಿಗದ ಕಾರಣ ವಾಪಸ್ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸತೀಶ್​ ಕೊನೆಯುಸಿರೆಳೆದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…

ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
