ಬೆಂಗಳೂರು:ರಾಜ್ಯಾದ್ಯಂತ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಕೂಡಲೇ ತಮ್ಮ ಮೂಲಶಾಲೆಗೆ ವರದಿ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಒಂದು ವೇಳೆ ಆದೇಶ ಮೀರಿ ನಿಯೋಜನೆ ಮೇಲೆ ಮುಂದುವರಿದರೆ, ಸಂಬಂಧಪಟ್ಟ ಶಿಕ್ಷಕ, ಬಿಇಒ ಮತ್ತು ಡಿಡಿಪಿಐಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮಕ್ಕಳ ಹಿತಾಸಕ್ತಿ ಗಮನದಲ್ಲಿರಿಸಿಕೊಳ್ಳದ ಕೆಲವು ಡಿಡಿಪಿಐ ಮತ್ತು ಬಿಇಒಗಳು ನಿಯಮಬಾಹಿರವಾಗಿ ಶಿಕ್ಷಕರನ್ನು ನಿಯೋಜನೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ, ರಾಜ್ಯದ ಎಲ್ಲ ಜಿಲ್ಲೆ/ತಾಲ್ಲೂಕುಗಳಲ್ಲಿ ನಿಯೋಜನೆ ಮೇಲೆ ಕಚೇರಿ/ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ನಿಯೋಜನೆಯನ್ನು ಆಯಾ ಶೈಕ್ಷಣಿಕ ವರ್ಷಾಂತ್ಯಕ್ಕೆ ರದ್ದುಪಡಿಸಲು ಸೂಚಿಸಲಾಗಿತ್ತು. ಆದರೂ ಈ ವರೆಗೆ ನಿಯೋಜನೆ ಮೇಲೆ ಸಂಬಂಧಪಟ್ಟ ಶಿಕ್ಷಕರು ಮುಂದುವರಿಸುತ್ತಿರುವುದು ವಿಷಾಧನೀಯ ಸಂಗತಿ. ಈ ವಿಷಯವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ನಿಯೋಜನೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ.
ಇದನ್ನೂ ಓದಿ:ಆ ‘ಜ್ಯೋತಿ’ ಇದೆ ಎಂದು ಗೃಹಜ್ಯೋತಿ ನೋಂದಣಿ ಕಡೆಗಣಿಸಬೇಡಿ!; ಇಲ್ಲಿದೆ ವಿವರ ಗಮನಿಸಿ..
ಅಂತಹ ಶಿಕ್ಷಕರು ಕೂಡಲೇ ತಮ್ಮ ಮೂಲಶಾಲೆಯಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ, ಅಂಥ ಶಿಕ್ಷಕರನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲು ಮತ್ತು ಹಾಜರಾಗದ ಶಿಕ್ಷಕರ ವೇತನವನ್ನು ಕೂಡ ತಡೆಹಿಡಿಯುವಂತೆ ಸೂಚನೆ ನೀಡಲಾಗಿದೆ.
ನಿಯೋಜನೆ ಆದೇಶವಾಗಿರುವ ಶಿಕ್ಷಕರ ಅಗತ್ಯ ಇಲ್ಲವಾದಲ್ಲಿ ಅಥವಾ ಮೂಲ ಶಾಲೆಯಲ್ಲಿ ಶಿಕ್ಷಕರ ಅಗತ್ಯ ಇದ್ದಲ್ಲಿ ಅಂತಹ ಶಿಕ್ಷಕರ ನಿಯೋಜನೆ ರದ್ದುಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಈಗಾಗಲೇ ಶಿಕ್ಷಕರನ್ನು ಬಿಡುಗಡೆಗೊಳಿಸಿರುವ ಹಾಗೂ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ಶಿಕ್ಷಕರ ಜಿಲ್ಲಾವಾರು ಪಟ್ಟಿಯೊಂದಿಗೆ ಜು.5ರೊಳಗೆ ವರದಿ ನೀಡಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್ ಸೂಚಿಸಿದ್ದಾರೆ.
ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!

ಹತ್ತು ದಿನಗಳ ಹಿಂದೆ ಪುತ್ರನೊಂದಿಗೆ ರೀಲ್ಸ್​ನಲ್ಲಿ ರಂಜಿಸಿದ್ದ ಸಿ.ವಿ. ಶಿವಶಂಕರ್; ವಿಡಿಯೋ ವೈರಲ್, ಆ ಖುಷಿ ಇನ್ನು ಬರೀ ನೆನಪು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 8 =
Remember me
