ಬೆಂಗಳೂರು:ದೇಶದ ಆಡಳಿತ ಸೇವೆ ಮಾಡುವವರಿಗೆ ಸಂಬಳದ ಬದಲು ಸಮಾಜ ಮುಖ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಚುಂಚಶ್ರೀ ಬಳಗ ವತಿಯಿಂದ ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ 2024ನೇ ಸಾಲಿನ ಯಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಒಕ್ಕಲಿಗ ಸಮುದಾಯದವರನ್ನು ಸನ್ಮಾನಿಸಿ ಮಾತನಾಡಿದರು. ಸಾಧನೆ ಮಾಡಲು ಪ್ರಯತ್ನ ಮಾಡುವವರಿಗೆ ಸಮಾಜ ಸಹಕಾರ ನೀಡುತ್ತದೆ. ಈ ದೇಶದ ಡೊಡ್ಡ ಶಕ್ತಿ ಎಂದರೆ ರೈತಶಕ್ತಿ. ನಮ್ಮ ಸಮುದಾಯ ಮಕ್ಕಳು ದೇಶದ ಆಡಳಿತ ಸೇವೆಗೆ ಸಜ್ಜಾಗಿದ್ದಾರೆ. ನಮ್ಮ ಸಮುದಾಯದಲ್ಲಿ ಮೊದಲಿಗರಾಗಿ ಉಮಾಶಂಕರ್​ ಐಎಎಸ್​, ಕಿಶೋರ್​ಚಂದ್ರ ಐಪಿಎಸ್​ ಹಾಗೂ ಗಾ.ನಂ. ಶ್ರೀಕಂಠಯ್ಯ ಐಎ​ಎಸ್​ ಅಧಿಕಾರಿಗಳಾಗಿದ್ದರು. ಓರ್ವ ಪ್ರಧಾನಿ, ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಸಮುದಾಯ ನಮ್ಮದು ಎಂದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗದಲ್ಲಿ ನಮ್ಮ ಸಮುದಾಯದವರು ಮುಂದೆ ಬರಬೇಕು. ಮಕ್ಕಳಿಗೆ ಕಷ್ಟದ ಕುರಿತು ಅರಿವು ಮೂಡಿಸಬೇಕು. ಬಾಲಗಂಗಾಧರನಾಥ ಸ್ವಾಮೀಜಿ ಅಪಾರ ಜ್ಷಾನಿಗಳು. ಜ್ಷಾನಪೀಠ ಪ್ರಶಸ್ತಿ ಮೊದಲಿಗೆ ಒಲಿದಿದ್ದು ನಮ್ಮ ಸಮುದಾಯಕ್ಕೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು ಎಂದು ಶ್ರೀಗಳು ವಿವರಿಸಿದರು.
ಸಚಿವ ಡಾ.ಎಂ.ಸಿ. ಸುಧಾಕರ್​ ಮಾತನಾಡಿ, ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದೇವೆ ಎಂದು ಹೇಳುವುದಕ್ಕೆ ಹೆಮ್ಮೆ ಪಡಬೇಕು. ನಮ್ಮ ಜನಾಂಗದಲ್ಲಿ ವ್ಯವಸಾಯ ನಂಬಿ ಜೀವನ ಸಾಗಿಸುವರು ಸಾಕಷ್ಟು ಜನರಿದ್ದಾರೆ. ರೈತ, ಶಿಕರ ಕುಟುಂಬದಿಂದ ಮಕ್ಕಳು ಯುಪಿಎಸ್ಸಿಯಲ್ಲಿ ಆಯ್ಕೆಯಾಗಿದ್ದಾರೆ. ಸತತ ಪರಿಶ್ರಮದ ಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದರು. ಶಾಸಕರಾದ ಡಾ.ಸಿ.ಎನ್​. ಅಶ್ವತ್ಥನಾರಾಯಣ್​, ಎಂ. ಕೃಷ್ಣಪ್ಪ, ಆದಿಚುಂಚನಗಿರಿ ವಿಜಯನಗರದ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು, ಬಿಡಿಎ ಆಯುಕ್ತ ಜಯರಾಮ್​, ಐಎಎಸ್​ ಅಧಿಕಾರಿ ರಂಗಪ್ಪ ಇತರರಿದ್ದರು.
ಎಂಎಸ್​ಎಂಇ ಬಲವರ್ಧನೆಗೆ ಸಹಕಾರ: ಎಫ್​​​ಕೆಸಿಸಿಐ ಅಧ್ಯಕ್ಷ ರಮೇಶ್​ಚಂದ್ರ ಲಹೋಟಿ ಹೇಳಿಕೆ
ಡಿಕೆಶಿ ಸಿಎಂ ಆಗೋದು ಖಚಿತ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಒಕ್ಕಲಿಗರಿಗೆ ಉನ್ನತ ಸ್ಥಾನ ಸಿಕ್ಕಿದೆ. ಸಚಿವ ಸಂಪುಟದಲ್ಲಿ ಜಾತಿಗಣತಿಯ ಸಾಧಕ-ಬಾಧಕ ಕುರಿತು ಚರ್ಚಿಸಲಾಗುವುದು. ಡಿ.ಕೆ. ಶಿವಕುಮಾರ್​ ಮುಂದಿನ ದಿನಗಳಲ್ಲಿ ಸಿಎಂ ಆಗುವುದು ಖಚಿತ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪರಿಶ್ರಮ, ಕೊಡುಗೆಯಿಂದ ಒಕ್ಕಲಿಗರ ಮಠ ಅಭಿವೃದ್ಧಿ ಪಥದತ್ತ ಸಾಗಿತು. ಹಿಂದೆ ಕೋಲಾದವರು ಐಎಎಸ್​ ಆಗುತ್ತಿದ್ದರು. ನಂತರ, ಮಂಡ್ಯ ಜಿಲ್ಲೆ ಸಹ ಉನ್ನತಾಧಿಕಾರಿಗಳ ಸ್ಥಾನ ಪಡೆಯುವಲ್ಲಿ ಯಶ್ವಸಿಯಾಯಿತು. ಒಕ್ಕಲಿಗ ಸಮಾಜದ ಯುವಕ& ಯುವತಿಯರು ನಾಗರಿಕ ಸೇವೆಗಳ ಉನ್ನತ ಸ್ಥಾನಕ್ಕೆ ಹೆಚ್ಚು ಬರಬೇಕು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 16 =
Remember me
