ಆನೇಕಲ್​:ಅವತ್ತು ಡಿಸೆಂಬರ್ 31 ರ ರಾತ್ರಿ 12 ಗಂಟೆ ಸಮಯ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮಾಚರಣೆಯಲ್ಲಿದ್ದದ್ದು ಈಗ ಹಳೆ ಕಥೆ. ಆದರೆ ಅಂದು ಅದೇ ಸಮಯಕ್ಕೆ ಅವಘಡ ನಡೆದು ಹೋಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದುಕೊಂಡಿದ್ದವರು ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಶಾಕ್ ಆಗಿದ್ದಾರೆ.
ಆನೇಕಲ್ ಪಟ್ಟಣದ ನಿವಾಸಿ ಶಿವಕುಮಾರ್, ತಮಿಳುನಾಡು ಮೂಲದ ಉಮೇಶ್, ಹರೀಶ್, ಮಣಿ ಬಂಧಿತ ಆರೋಪಿಗಳು. ಡಿ.31ರಂದು ರಾತ್ರಿ 12 ಗಂಟೆ ಸುಮಾರಿಗೆ ವಿಶ್ ಫ್ಯಾಮಿಲಿ ಸಲೂನಿನಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳು ಬೆಂಕಿಗೆ ಆಹುತಿಯಾಗಿದ್ದವು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸಲೂನ್ ಮಾಲೀಕರು ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಸೂರ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೆಳಿಗ್ಗೆ ಸಲೂನ್ ನಲ್ಲಿನ ಸಿಸಿಟಿವಿ ಕ್ಯಾಮರಾದ ಡಿವಿಆರ್ ಪರಿಶೀಲನೆ ನಡೆಸಿದಾಗ ಶಿವಕುಮಾರ್ ಹಾಗೂ ಆತನ ಸಹಚರರು ಬೆಂಕಿ ಹಚ್ಚಿದ ಘಟನೆ ಬೆಳೆಕಿಗೆ ಬಂದಿದೆ. ಇದರಿಂದಾಗಿ ಸಲೂನ್ ನಡೆಸುತ್ತಿದ್ದ ಮಹಿಳೆ ಬೇಬಿ ರಾಣಿ ಶಾಕ್ ಆಗಿದ್ದಾರೆ.
ಇನ್ನೂ ತನಿಖೆ ಆರಂಭಿಸಿದ ಸೂರ್ಯನಗರ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಪ್ರಕರಣಕ್ಕೆ ಸ್ಪೋಟಕ ಸುಳಿವು ಲಭ್ಯವಾಗುತ್ತದೆ. ನಾಲ್ಕು ಮಂದಿ ಆಸಾಮಿಗಳು ಸುತ್ತಿಗೆಯಿಂದ ಸಲೂನಿನ ಗಾಜು ಒಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ತನಿಖೆಗಿಳಿದ ಪೊಲೀಸರಿಗೆ ಸಲೂನಿಗೆ ಬಿದ್ದ ಬೆಂಕಿಯ ಅಸಲಿ ಕಥೆ ಗೊತ್ತಾಗುತ್ತದೆ.
ಸಲೂನ್ ಮಾಲೀಕರಾದ ಬೇಬಿ ರಾಣಿ ತನ್ನ ಸ್ನೇಹಿತೆ ಪುಷ್ಪಾ ಬಳಿ ತನ್ನ ತಮ್ಮನಿಗೆ ಮೂರು ಲಕ್ಷ ರೂ. ಹಣವನ್ನು ಸಾಲವಾಗಿ ಕೊಡಿಸಿರುತ್ತಾಳೆ. ಆದರೆ ಹಲವು ವರ್ಷಗಳು ಉರುಳಿದರೂ ಸಾಲ ಮರುಪಾವತಿಯಾಗಿಲ್ಲ. ಈ ಬಗ್ಗೆ ರೋಸಿ ಹೋಗಿದ್ದ ಪುಷ್ಪಾ, ಕಳೆದ ಡಿಸೆಂಬರ್​ನಲ್ಲಿ ಬೇಬಿ ರಾಣಿ ತಾಯಿ ಬಳಿ ಹಣ ಕೇಳಿದ್ದು, ಆಗ ಬೇಬಿ ರಾಣಿ ಕೊಡುವುದಿಲ್ಲ ಎಂದು ಆವಾಜ್ ಹಾಕಿದ್ದಾಳೆ.
ಈ ಒಂದು ವಿಚಾರವಾಗಿ ರಾಣಿ ಕುಟುಂಬದ ಹಾಗೂ ಪುಷ್ಪ ನಡುವೆ ಮಾತಿನಚಕಮಕಿ ನಡೆದಿದೆ‌. ಆಗ ಆಕ್ರೋಶಗೊಂಡ ಪುಷ್ಪಾ ಮತ್ತು ಆಕೆಯ ಪ್ರಿಯಕರ ಪ್ಲಾನ್ ಮಾಡಿ ಸಲೂನಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬೇಬಿ ರಾಣಿ ‘ನನಗೂ ಪುಷ್ಪಾಗೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ತಮ್ಮನಿಗೆ ಕೊಡಿಸಿದ್ದೆ. ನನ್ನ ಏಳಿಗೆಯನ್ನು ಸಹಿಸದೇ ಆಕೆ ಹೀಗೆ ಸಲೂನಿಗೆ ಬೆಂಕಿ ಹಚ್ಚಿದ್ದಾರೆ’ ಎನ್ನುತ್ತಿದ್ದಾರೆ.
ಇಂದು ಸಿಸಿಟಿವಿ ಕ್ಯಾಮರಾದ ದೃಶ್ಯದ ಆಧಾರದ ಮೇಲೆ ಸಲೂನ್ ಒಂದರ ಗಾಜು ಪುಡಿಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಪೊಲೀಸರು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಹಣಕಾಸಿನ ವಿಚಾರ ಕೂತು ಬಗೆಹರಿಸಿಕೊಳ್ಳುವುದನ್ನ ಬಿಟ್ಟು ಸಲೂನ್ ಶಾಪ್​ಗೆ ಬೆಂಕಿ ಹಚ್ಚಿದ ತಪ್ಪಿಗೆ ಈಗಾಗಲೇ ಶಿವಕುಮಾರ್ ಸೇರಿ ಮೂರು ಮಂದಿಯನ್ನ ಬಂಧಿಸಿ ಪೋಲೀಸರು ಜೈಲಿಗೆ ಅಟ್ಟಿದ್ದು, ತಲೆಮರೆಸಿಕೊಂಡಿರುವ ಪುಷ್ಪಗಾಗಿ ಪೋಲೀಸರು ಬಲೆಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
