ಕರೊನಾ ಸಂಕಷ್ಟದ ಕಾಲದಲ್ಲಿ ಪ್ರಾಣವನ್ನೂ ಪಣಕ್ಕಿಟ್ಟು ಹಗಲುರಾತ್ರಿಯೆನ್ನದೆ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿ ಪೈಕಿ ನರ್ಸ್​ಗಳ ಪಾತ್ರ ಅನನ್ಯ. ಅನೇಕ ದಿನಗಳ ಕಾಲ ಮನೆ, ಕುಟುಂಬ ಸದಸ್ಯರಿಂದಲೂ ದೂರವಿರುವ ಈ ವಾರಿಯರ್​ಗಳನ್ನು ದಾದಿಯರ ದಿನದ ಸಂದರ್ಭದಲ್ಲಿ ನೆನೆಯುವುದು ಕರ್ತವ್ಯ. ದೇಶಾದ್ಯಂತ ಲಕ್ಷಾಂತರ ನರ್ಸ್​ಗಳು ಆರೋಗ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಯಾವ ಪ್ರಚಾರದ ಅಪೇಕ್ಷೆ ಇಲ್ಲದೆ ದುಡಿಯುತ್ತಿರುವ ಇಂತಹ ಎಲೆಮರೆಕಾಯಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಪ್ರಯತ್ನವಾಗಿ ಈ ವರದಿ ಸಿದ್ಧಪಡಿಸಲಾಗಿದೆ. ಇದು ದಾದಿಯರ ಸಮುದಾಯಕ್ಕೆ ವಿಜಯವಾಣಿ ಸಲ್ಲಿಸುವ ನಮನ.
ಕಿಡ್ನಿ ವಿಫಲ, ಸೇವೆ ಸಫಲ
ಎರಡೂ ಕಿಡ್ನಿ ವಿಫಲವಾಗಿರುವ ಇವರು ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ರೋಗಿಗಳ ಸೇವೆ ನಿಲ್ಲಿಸಿಲ್ಲ. ಇದು ಹಾವೇರಿ ಜಿಲ್ಲಾಸ್ಪತ್ರೆ ನರ್ಸ್ ಸಂಧ್ಯಾ ಸುಭಾಸ ಹಾನಗಲ್ಲ(45) ಅವರ ಜೀವನಗಾಥೆ. ಹಿರೇಕೆರೂರ ಪಟ್ಟಣದವರಾದ ಇವರು ಕಡುಬಡತನದಲ್ಲೇ ಓದಿ ನರ್ಸ್ ಕೆಲಸಕ್ಕೆ ಸೇರಿದವರು. 25 ವರ್ಷಗಳಿಂದ ಹಲವು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ 5 ವರ್ಷಗಳಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿದ್ದಾರೆ. 3 ವರ್ಷದ ಹಿಂದೆ ಇವರ ಎರಡೂ ಕಿಡ್ನಿ ವಿಫಲವಾದವು. ಆದರೆ ಇದಕ್ಕೆ ಅಂಜದ ಸಂಧ್ಯಾ ಶ್ರದ್ಧೆ, ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಪ್ರಾಮಾಣಿಕ ಮಹಿಳೆಗೆ ಕಿಡ್ನಿ ಕೊಡಿಸಲು ಆರೋಗ್ಯ ಸಚಿವರು ಮುಂದಾಗಬೇಕೆಂಬುದು ಜಿಲ್ಲಾಸ್ಪತ್ರೆ ಸಿಬ್ಬಂದಿ ಬೇಡಿಕೆ.
ಇದನ್ನೂ ಓದಿಗೆದ್ದ ಹೃದಯವನ್ನು ಕೋವಿಡ್​ಗೆ ದಾನ ಮಾಡಿದ ಸಾನಿಯಾ ಮಿರ್ಜಾ
ದಂಪತಿ ಶ್ರಮದಾನ
ಕರೊನಾ ಸಂದರ್ಭದಲ್ಲಿ ವಿಜಯಪುರ ನಗರದ ಕೆ.ರಮೇಶ ಹಾಗೂ ಸರಸ್ವತಿ ದಂಪತಿ ಸಲ್ಲಿಸುತ್ತಿರುವ ಸೇವೆ ಆದರ್ಶ ಪ್ರಾಯ. ಇಲ್ಲಿನ ಅಲ್ ಅಮೀನ್ ಆಸ್ಪತ್ರೆಯಲ್ಲಿ ಸರಸ್ವತಿ ಶುಶ್ರೂಷಕಿ ಯಾಗಿದ್ದರೆ ರಮೇಶ ಜಿಲ್ಲಾಸ್ಪತ್ರೆಯ ‘108’ ಸಿಬ್ಬಂದಿ. ಕರೊನಾ ಸೋಂಕಿತರ ಚಿಕಿತ್ಸೆಗಾಗಿ ದುಡಿಯುತ್ತಿರುವ ಇವರು ಸದ್ಯ ಮನೆಯ ಬದಲು ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ. ಪಕ್ಕದ ಮನೆಯ ಸಣ್ಣಜ್ಜಿ ಮನೆಯಲ್ಲಿ ಐದು ವರ್ಷದ ಮಗುವನ್ನು ಬಿಟ್ಟಿರುವ ಇವರು ಅದರ ಮುಖ ನೋಡದೇ ತಿಂಗಳಾಗಿದೆ.
ದುರ್ಗಮ ಹಾದಿಯಲ್ಲಿ ದಿಟ್ಟ ಸೇವೆ:ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಘಟಕದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಪುಷ್ಪಾ ಸೇವೆ ಭಿನ್ನ, ಕಠಿಣ. ಸಮಸ್ಯೆ ಎಂದು ಹೇಳಿದರೆ ರಾತ್ರಿ 12 ಗಂಟೆಯಾಗಿರಲಿ ಅಥವಾ ಬೆಳಗಿನ ಜಾವವಾಗಿರಲಿ ತಮ್ಮ ತಂಡದೊಂದಿಗೆ ಎಂಥ ದುರ್ಗಮ ಹಾದಿಯಾದರೂ ಸರಿ ನೆರವಿಗೆ ಧಾವಿಸುತ್ತಾರೆ. ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಅವರ ನಗುಮೊಗದ ಸೇವೆ ಎಲ್ಲರ ಗಮನ ಸೆಳೆದಿದೆ. ಕೆಲವೊಂದು ಊರಿನಲ್ಲಿ ಒಂದೊಂದೇ ಮನೆ ಇದೆ. 165 ಹಳ್ಳಿ ಇವರ ವ್ಯಾಪ್ತಿಗೆ ಬರುತ್ತವೆ. ಎಲ್ಲ ಗ್ರಾಮಗಳಿಗೂ ಪುಷ್ಪಾ ಸಾರಥ್ಯದ ತಂಡ ಎರಡ್ಮೂರು ಬಾರಿ ಭೇಟಿ ನೀಡಿ ಶುಶ್ರೂಷೆಗೆ ನಿಂತಿದೆ. ಇಲ್ಲಿಯವರೆಗೆ ಮಂಗನ ಕಾಯಿಲೆಗೆ ಸುಮಾರು 2,500 ರೋಗನಿರೋಧಕ ಚುಚ್ಚುಮದ್ದು ನೀಡಿದ್ದಾರೆ. ಬೆಟ್ಟಗುಡ್ಡಗಳ ಮೇಲಿರುವ ಊರುಗಳ ರೋಗಿಗಳಿಗೆ ನೀಡಿದ ಶುಶ್ರೂಷೆಯನ್ನು ಯಾರೂ ಮರೆಯುವಂತಿಲ್ಲ. ಮಂಗನ ಕಾಯಿಲೆ ನಿಯಂತ್ರಣ ಜತೆಗೆ ಕರೊನಾಗೆ ಸಂಬಂಧಿಸಿ ಕ್ವಾರಂಟೈನ್​ನಲ್ಲಿರುವವರ ಆರೈಕೆ ಮಾಡುವ ಹೊಣೆಗಾರಿಕೆ ಹೊತ್ತಿದ್ದಾರೆ. ಆದರೆ, ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಬುಡದಲ್ಲಿರುವ ಇವರ ವಸತಿನಿಲಯ ದುಸ್ಥಿತಿಯಲ್ಲಿದೆ. ಹಾವು, ಇಲಿ ಮುಂತಾದ ಕ್ರಿಮಿಕೀಟಗಳ ಆವಾಸಸ್ಥಾನವಾಗಿದೆ. ಮಳೆ ಬಂದರೆ ಸೋರುತ್ತದೆ.
ಮೇ 17ರ ನಂತರವೂ ಲಾಕ್​ಡೌನ್​ ವಿಸ್ತರಣೆ ಸುಳಿವು ನೀಡಿರುವ ಪ್ರಧಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 6 =
Remember me
