ಕಲಬುರಗಿ:ಬಾಲಕನೊಬ್ಬ ಒಂದೇ ಹಾವಿನಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಹಾವಿನ ಕಡಿತಕ್ಕೆ ಒಳಗಾದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವ ಅಚ್ಚರಿಯ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಬಾಲಕನ ಹೆಸರು ಪ್ರಜ್ವಲ್​. ಹಲಕರ್ಟಿ ಗ್ರಾಮದ ಪ್ರಜ್ವಲ್​ ಕಳೆದ ಎರಡು ತಿಂಗಳಲ್ಲಿ ಒಂದೇ ಹಾವಿನಿಂದ 9 ಬಾರಿ ಕಡಿತಕ್ಕೆ ಒಳಗಾಗಿದ್ದಾನೆ. ಇದು ಒಂದು ರೀತಿಯಲ್ಲಿ ವಿಚಿತ್ರ ಅನ್ನಿಸಿದರೂ ನಂಬಲೇಬೇಕಾದ ಸತ್ಯವೂ ಹೌದು.
ಬಾಲಕ ಪ್ರಜ್ವಲ್​, ಹಲಕರ್ಟಿ ಗ್ರಾಮದ ವಿಜಯಕುಮಾರ್-ಉಷಾ ದಂಪತಿಯ ಪುತ್ರ. ಗ್ರಾಮದ ತನ್ನ ಮನೆಯಲ್ಲಿ ಮೊದಲ ಬಾರಿ ಜುಲೈ 3 ರಂದು ಹಾವು ಕಡಿಯಿತು. ಬಳಿಕ ಎರಡ್ಮೂರು ಬಾರಿ ಹಾವು ಕಚ್ಚಿದ ಹಿನ್ನಲೆಯಲ್ಲಿ ದಂಪತಿ ಹೆದರಿ ಹಲಕರ್ಟಿ ಗ್ರಾಮದ ಮನೆ ಬಿಟ್ಟಿದ್ದರು.
ಇದನ್ನೂ ಓದಿ:ಮದ್ವೆ ಆಗಿ 2 ತಿಂಗಳಾಗಿದೆ, ಡೈವೋರ್ಸ್​ಗೆ ಅರ್ಜಿ ಹಾಕಿದರೆ ಎಷ್ಟು ತಿಂಗಳಲ್ಲಿ ವಿಚ್ಛೇದನ ಸಿಗುತ್ತೆ?
ಹಲಕರ್ಟಿ ಬಳಿಕ ಚಿತ್ತಾಪುರ ತಾಲ್ಲುಕಿನ ವಾಡಿಯಲ್ಲಿ ಮನೆ ಮಾಡಿ ವಾಸ ಮಾಡುತ್ತಿದ್ದರು. ಆದರೆ, ಇಲ್ಲಿಯೂ ಪ್ರಜ್ವಲ್​ಗೆ ಅದೇ ಹಾವು ಕಡಿದಿದೆ. ಬಾಲಕನ ಕೈ-ಕಾಲು ಸೇರಿ ಹಾವು ವಿವಿಧಡೆ ಕಚ್ಚಿದೆ. ಆದರೆ, ಹಾವು ಮಾತ್ರ ಪಾಲಕರಿಗಾಗಲಿ ಅಥವಾ ಕುಟುಂಬಸ್ಥರಿಗಾಗಲಿ ಕಾಣಿಸಿಕೊಳ್ಳುತ್ತಿಲ್ಲ. ಬಾಲಕನ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ. ಇದೊಂದು ರೀತಿಯಲ್ಲಿ ಸಿನಿಮಾದ ಕತೆಯಂತಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
9 ಬಾರಿ ಹಾವು ಕಡಿತಕ್ಕೆ ಒಳಗಾದಾಗ 6 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, 3 ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಆದ ಬಳಿಕ ಎರಡ್ಮೂರು ದಿನದಲ್ಲೆ ಮತ್ತೆ ಹಾವು ಕಡಿಯುತ್ತಿದೆ. ಸದ್ಯ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಪ್ರಜ್ವಲ್​ಗೆ ಚಿಕಿತ್ಸೆ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ಶೋರೂಮ್​ನಿಂದ KTM ಡ್ಯೂಕ್​ ಬೈಕ್​ ಕಳ್ಳತನ: ಪೆಟ್ರೋಲ್​ ಬಂಕ್​ನಲ್ಲಿ ಗೂಗಲ್​ ಪೇ ನಾಟಕವಾಡಿ ಸಿಕ್ಕಬಿದ್ದ ಯುವಕ!

ಸಣ್ಣ ನೀರಾವರಿ ಕೊಡುಗೆ ಏರಿಕೆ, ಸಾಮರ್ಥ್ಯ ಇಳಿಕೆ: ಕರ್ನಾಟಕದ ಸ್ಥಿತಿಗತಿ ಬಹಿರಂಗಪಡಿಸಿದ 6ನೇ ಗಣತಿ ವರದಿ; ಖಾಸಗಿ ಒಡೆತನದ್ದೇ ಪಾರಮ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
