ಸತೀಶ್ ಕೆ.ಬಳ್ಳಾರಿ
ಬೆಂಗಳೂರು:ರಾಜಧಾನಿಯಲ್ಲಿ ಕರೊನಾ ಶಂಕಿತರ ಪರೀಕ್ಷಾ ವರದಿಗಳು ಬರಲು 4 ದಿನ ವಿಳಂಬವಾಗುತ್ತಿದ್ದು, ವರದಿ ಕೈಸೇರುವ ಅವಧಿಯಲ್ಲೇ ಹೆಚ್ಚು ಜನರಿಗೆ ಸೋಂಕು ಹರಡುವ ಆತಂಕ ಸೃಷ್ಟಿಯಾಗಿದೆ. ನಗರದಲ್ಲಿರುವ ಕ್ವಾರಂಟೈನ್ ಕೇಂದ್ರಗಳು, ಸೋಂಕಿತರ ಸಂಪರ್ಕದಲ್ಲಿರುವವರು ಹಾಗೂ ರಾಂಡಂ ಪರೀಕ್ಷೆಯಿಂದ ಸಂಗ್ರಹಿಸಿದ ಗಂಟಲು ದ್ರವದ 2 ಸಾವಿರಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆಗೆ ಕಳಿಸಲಾಗುತ್ತಿದೆ. ಜತೆಗೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಸ್ವಾಬ್ ಮಾದರಿಗಳು ಬೆಂಗಳೂರಿಗೆ ಬರುತ್ತಿವೆ. ಪರಿಣಾಮ, ಕರೊನಾ ಪಾಸಿಟಿವ್ ಅಥವಾ ನೆಗೆಟಿವ್ ವರದಿ ಬರುವುದು ವಿಳಂಬವಾಗುತ್ತಿದೆ.
ಇದನ್ನೂ ಓದಿ:ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!
ಕರೊನಾ ಪರೀಕ್ಷಾ ವರದಿಗಳು ಮೊದಲು 2 ದಿನದೊಳಗೆ ಬರುತ್ತಿದ್ದವು. ಈಗ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಸ್ವಾಬ್​ಗಳೂ ಕೂಡ ನಗರದ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿರುವ ಕಾರಣ ಮೂರ್ನಾಲ್ಕು ವಿಳಂಬವಾಗುತ್ತಿದೆ. ಹೀಗಾಗಿ, ಹೊರ ರಾಜ್ಯದಿಂದ ಬಂದವರಿಗೆ ಖಾಸಗಿ ಲ್ಯಾಬ್​ಗಳಲ್ಲಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗುತ್ತಿದೆ.| ಬಿ.ಎಚ್. ಅನಿಲ್ ಕುಮಾರ್ಬಿಬಿಎಂಪಿ ಆಯುಕ್ತ
ಒಬ್ಬ ವ್ಯಕ್ತಿಯಿಂದ ಸಂಗ್ರಹಿಸಿದ ಸ್ವಾಬ್ ಮಾದರಿ ಪರೀಕ್ಷಾ ವರದಿ ಬರಲು ಕನಿಷ್ಠ 24 ಗಂಟೆ ಅಗತ್ಯ. ಆದರೆ ಸರ್ಕಾರದ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚು ವರದಿಗಳನ್ನು ನೀಡಬೇಕಾದ ಕಾರಣ 2 ದಿನ (48 ಗಂಟೆ) ತೆಗೆದುಕೊಳ್ಳಲಾಗುತ್ತಿತ್ತು. ಪ್ರಸ್ತುತ, ಮುಂಬೈ ಹಾಗೂ ತಮಿಳುನಾಡಿನಿಂದ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಅವರ ಸ್ವಾಬ್ ಪರೀಕ್ಷೆ ಮಾಡಬೇಕಿರುವ ಕಾರಣ ಎಲ್ಲರ ಪರೀಕ್ಷಾ ವರದಿ ಸಹಜವಾಗಿಯೇ ವಿಳಂಬವಾಗುತ್ತಿದೆ.
ಇದನ್ನೂ ಓದಿ:ವೈದ್ಯೆ, ವ್ಯಾಪಾರಿ, ಗರ್ಭಿಣಿಗೆ ಕರೊನಾ | 21 ಸೋಂಕಿತರು ಸೇರ್ಪಡೆ
ವಿಳಂಬದಿಂದ ಸೋಂಕು:ವಿದೇಶ ಹಾಗೂ ಹೊರ ರಾಜ್ಯಗಳಿಂದ ಬಂದ ಪ್ರಯಾಣಿಕರು, ಸೋಂಕಿತರ ಸಂಪರ್ಕದಲ್ಲಿ ಇರುವವರು, ಸೋಂಕಿನ ಲಕ್ಷಣಗಳಿರುವ ಜನರು ಸೇರಿ ಪ್ರತಿನಿತ್ಯ ರಾಜ್ಯದಲ್ಲಿ 15 ಸಾವಿರಕ್ಕೂ ಅಧಿಕ ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಅದರಲ್ಲಿ ನಿತ್ಯ 200ಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗುತ್ತಿದ್ದು, ಅದರಲ್ಲಿ ಬೆಂಗಳೂರಿನ 30ಕ್ಕೂ ಪ್ರಕರಣಗಳಿರುತ್ತವೆ. ಅವರ ವರದಿ ಬರುವುದು ವಿಳಂಬವಾದರೆ, ಒಬ್ಬರಿಂದ ತಲಾ 10 ಜನ ಸಂಪರ್ಕಕ್ಕೆ ಬಂದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತದೆ. ಈ ಹಿನ್ನೆಲೆಯಲ್ಲಿ, ವರದಿ ವಿಳಂಬ ತಡೆಯಲು ಸರ್ಕಾರವೇ ಪರಿಹಾರ ಒದಗಿಸಬೇಕಿದೆ.
ಇದನ್ನೂ ಓದಿ:ಕ್ವಾರಂಟೈನ್ ಅವಧಿಯಲ್ಲಿ ಬಂದೆರಗಿತ್ತು ಆಪತ್ತು: ಆ ಶಾಕ್​ನಿಂದ ಅವರಿನ್ನೂ ಚೇತರಿಸಿಲ್ಲ..
ಸಿಬ್ಬಂದಿ ಕೊರತೆ:ಬೆಂಗಳೂರು ವ್ಯಾಪ್ತಿಯಲ್ಲಿ ಹೊರ ರಾಜ್ಯ ಮತ್ತು ವಿದೇಶಗಳಿಂದ ಬಂದವರಲ್ಲಿ ಗರ್ಭಿಣಿಯರು ಮತ್ತು ಮಕ್ಕಳ ಪರೀಕ್ಷೆಯನ್ನು ಕೂಡಲೇ ಮಾಡಿ ಹೋಂ ಕ್ವಾರಂಟೈನ್​ಗೆ ಕಳಿಸಬೇಕು. ಆದರೆ, ಗರ್ಭಿಣಿಯರು ಮತ್ತು ಮಕ್ಕಳ ಪರೀಕ್ಷೆಗೂ ಅಗತ್ಯ ಸಿಬ್ಬಂದಿ ಸಿಗುತ್ತಿಲ್ಲ. ಇನ್ನು ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಸ್ವಾಬ್ ಸಂಗ್ರಹವೂ ಸರಿಯಾದ ಸಮಯಕ್ಕೆ ಮಾಡಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಖಾಸಗಿ ಕೇಂದ್ರಕ್ಕೆ ಹೋಗುತ್ತಿಲ್ಲ:ಕರೊನಾ ಪರೀಕ್ಷೆಗೆ ಜನರು ಖಾಸಗಿ ಪರೀಕ್ಷಾ ಕೇಂದ್ರಗಳಿಗೆ ಹೋಗದೆ ನೇರವಾಗಿ ಸರ್ಕಾರಿ ಅಸ್ಪತ್ರೆಗಳ ಮೊರೆ ಹೋಗುತ್ತಿ ದ್ದಾರೆ. ಇನ್ನು ಸೋಂಕಿನ ಲಕ್ಷಣಗಳಿದ್ದರೆ, ನಗರದ 21 ಜ್ವರ ತಪಾಸಣಾ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರಿಂದಾಗಿಯೂ ಉಚಿತ ಪರೀಕ್ಷಾ ಕೇಂದ್ರಗಳಿಗೆ ಹೊರೆಯಾ ಗುತ್ತಿದೆ ಎಂದು ಪಾಲಿಕೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 4 =
Remember me
