ಬೆಂಗಳೂರು:ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಆರೋಪಿ ಸಮಿಯುದ್ದೀನ್​ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇತ್ತ ಸಮಿಯುದ್ದೀನ್​ ಪತ್ನಿ, ನನ್ನ ಗಂಡ ನಾಪತ್ತೆ ಆಗಿದ್ದಾನೆ ಎಂದು ಎಂದು ಹೈಡ್ರಾಮ ಶುರು ಮಾಡಿದ್ದಾಳೆ.
ಗುರುವಾರ ಸುದ್ದಿಗೋಷ್ಠಿ ನಡೆಸಿದ ಸೈಯದ್​ ಸಮಿಯುದ್ದೀನ್​ ಪತ್ನಿ ಮತ್ತು ನಾರಿ ಫೌಂಡೇಷನ್​ ಅಧ್ಯಕ್ಷೆ ಪಾತೀಮಾ ತಬಸೂಮ್​, ‘ಎರಡು ವರ್ಷಗಳ ಹಿಂದೆ ಸಮಿಯುದ್ದೀನ್​ ಜತೆ ಮದುವೆ ಆಗಿ ಎಚ್​ಬಿಆರ್​ ಲೇಔಟ್​ನಲ್ಲಿ ನೆಲೆಸಿದ್ದವು. ಗಲಭೆ ನಂತರ ಸಿಸಿಬಿ ಪೊಲೀಸರು ನನ್ನ ಗಂಡನನ್ನು ಕರೆದುಕೊಂಡು ಹೋಗಿದ್ದರು. ವಾಪಸ್​ ಬಂದಿಲ್ಲ. ಬಂಧಿಸಿರುವ ಬಗ್ಗೆಯೂ ಪೊಲೀಸರು ತಿಳಿಸಿಲ್ಲ. ನನ್ನ ಗಂಡನ ಮೊಬೈಲ್​ ಸ್ವಿಚ್ಡ್ ಆಫ್​​ ಆಗಿದೆ. ಅವರನ್ನು ಹುಡುಕಿಕೊಡುವಂತೆ ದೂರು ನೀಡಿದ್ದೇನೆ. ಹೈಕೋರ್ಟ್​ಗೂ ಹೇಬಿಯಸ್​ ಕಾಪರ್ಸ್​​ ಅರ್ಜಿ ಸಲ್ಲಿಸಿದ್ದೇನೆ’ ಎಂದರು.
ಇದನ್ನೂ ಓದಿರಿಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!
ಸಮಿಯುದ್ದೀನ್​ ಪತ್ನಿ ಪಾತೀಮಾ ತಬಸೂಮ್​ರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಸಿಬಿ ಹಿರಿಯ ಅಧಿಕಾರಿಗಳು, ‘ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಸಮಿಯುದ್ದೀನ್​ನನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆಯಲಾಗಿದೆ. ಈತನ ಕುರಿತು ಉಗ್ರ ನಿಗ್ರಹ ಪಡೆ(ಎಟಿಎಸ್​) ಎಸಿಪಿ ವೇಣುಗೋಪಾಲ್​ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.
ಎಚ್​ಬಿಆರ್​ ಲೇಔಟ್​ನಲ್ಲಿ ಇರುವ ನಾರಿ ಫೌಂಡೇಷನ್​ಗೂ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ವಿದೇಶಿ ದೇಣಿಗೆ ಅಥವಾ ಸರ್ಕಾರದ ಅನುದಾನ ಪಡೆಯುತ್ತಿಲ್ಲ ಎಂದು ನಾರಿ ಫೌಂಡೇಷನ್​ ಅಧ್ಯಕ್ಷೆ ಫಾತೀಮಾ ತಬಸೂಮ್​ ಸಮಥಿರ್ಸಿಕೊಂಡಿದ್ದಾರೆ.
ಸಮಿಯುದ್ದೀನ್​ಗೆ ಶಂಕಿತ ಉಗ್ರರ ಜತೆ ಸಂಪರ್ಕವಿದೆ. ಆತನ ಪತ್ನಿ ಎನ್​ಜಿಒ ನಡೆಯುತ್ತಿದ್ದಾರೆ. ಇದಕ್ಕೆ ವಿದೇಶಿ ದೇಣಿಗೆ ಬರುತ್ತಿರುವುದಾಗಿ ಆರೋಪ ಕೇಳಿಬಂದಿತ್ತು.
ಡಿಜೆ ಹಳ್ಳಿ ಗಲಭೆಯ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆ ಲಿಂಕ್?

ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
