ಬಾಗಲಕೋಟೆ:ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಸದ್ಯ ಬಾಗಲಕೋಟೆ ಕ್ಷೇತ್ರದಲ್ಲಿ ಮಾತ್ರ ಭಾರೀ ಕುತೂಹಲ ಮೂಡುತ್ತಿದೆ. ಇಲ್ಲಿನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್​ ಕಡೆಗೂ ಕೈ ಟಿಕೆಟ್​ನಿಂದ ವಂಚಿತರಾಗಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಗ್ರಾಸವಾಗಿದೆ.
ಇದನ್ನೂ ಓದಿ:ಕೊನೆಯವರೆಗೂ ಡೇನಿಯಲ್​ ಬಾಲಾಜಿ ಮದುವೆಯಾಗಲಿಲ್ಲ ಏಕೆ? ಇಲ್ಲಿದೆ ಅಸಲಿ ಕಾರಣ
ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್​ ಅಂತಿಮವಾಗಿ ಟಿಕೆಟ್ ಘೋಷಿಸಿತು. ಈ ವಿಚಾರ ತಿಳಿದ ಬೆನ್ನಲ್ಲೇ ಕಣ್ಣೀರಿಟ್ಟ ವೀಣಾ ಇಂದಿಗೂ ತಮ್ಮ ಅಸಮಾಧಾನದಿಂದ ಹೊರಬಂದಿಲ್ಲ. ಮನಸ್ತಾಪ, ಅಸಮಾಧಾನ ಮಧ್ಯೆಯೂ ಸಂಯುಕ್ತಾ ಮಾತ್ರ ತಮ್ಮ ನಿಲುವನ್ನು ಕಿಂಚಿತ್ತು ಬದಲಾಯಿಸದೇ ಪ್ರಚಾರ ಕಾರ್ಯದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ಒಂದೆಡೆ ವೀಣಾ ನಮ್ಮ ಅಕ್ಕ, ಅವರು ನನ್ನ ಪರ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಬಂದು ಬೆಂಬಲಿಸುವ ಮೂಲಕ ಕ್ಷೇತ್ರಕ್ಕೆ ನಮ್ಮ ಜತೆ ಕೈಜೋಡಿಸುತ್ತಾರೆ ಎಂಬ ಭರವಸೆಯನ್ನು ಸಂಯುಕ್ತಾ ವ್ಯಕ್ತಪಡಿಸಿದರೆ, ಮತ್ತೊಂದೆಡೆ ವೀಣಾ ಕಾಶಪ್ಪನವರ್ ಮಾತ್ರ ನನಗೂ ಇದಕ್ಕೂ ಸಂಬಂಧವಿಲ್ಲ. ಟಿಕೆಟ್ ಕೈತಪ್ಪಿರಬಹುದು. ಆದರೆ, ಚುನಾವಣಾ ಅಖಾಡದಲ್ಲಿರುವುದಂತೂ ಪಕ್ಕಾ ಎಂದು ಹೇಳಿದ್ದಾರೆ. ಸದ್ಯ ಇವರಿಬ್ಬರ ನಡುವಿನ ಬಿರುಕು ಕೈ ನಾಯಕರಲ್ಲಿ ತೀವ್ರ ಗೊಂದಲ ಮೂಡಿಸಿದೆ.
ಇದನ್ನೂ ಓದಿ:ಕಾಂಗ್ರೇಸ್ ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಗೆಲ್ಲಿಸಿಕೊಂಡು ಬರಬೇಕು / ಗುಂಪು ರಾಜಕಾರಣ ಮಾಡಿದರೆ ಸಹಿಸಲು ಸಾಧ್ಯವಿಲ್ಲ / ಸಚಿವ ಬೈರತಿ ಸುರೇಶ್ ಎಚ್ಚರಿಕೆ / ಏ.೪ ರಂದು ಗೌತಮ್‌ರಿಂದ ನಾಮಪತ್ರ ಸಲ್ಲಿಕೆ
ಇನ್ನು ಕಾಂಗ್ರೆಸ್​ ಟಿಕೆಟ್ ಪಡೆದಿರುವ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಹಳೆಯ ಹುಲಿ ಎಂದಾದ್ರೂ ನಿವೃತ್ತಿ ನೋಡಲೇಬೇಕು, ಹೊಸ ಹುಲಿ ಗದ್ದುಗೆ ಏರಲೇಬೇಕು. ಇದು ಬಾಗಲಕೋಟೆಯಲ್ಲಿ ಖಂಡಿತ ಸಾಧ್ಯವಾಗಲಿದೆ. ಅಭಿವೃದ್ಧಿಗೆಂದೇ ನನ್ನ ಕ್ಷೇತ್ರಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ. ಎರಡು ದಶಕದಿಂದ ಇಲ್ಲಿನ ಅಭಿವೃದ್ಧಿ ಕುರಿತು ಸಂಸತ್‌ನಲ್ಲಿ ಧ್ವನಿ ಕೇಳಿಬಂದಿಲ್ಲ. ನನಗೆ ಅವಕಾಶ ಕಲ್ಪಿಸಿಕೊಡಿ, ಬಾಗಲಕೋಟೆಯ ಜನರ ಧ್ವನಿಯಾಗುತ್ತೇನೆ” ಎಂದು ಬಿಜೆಪಿ ಅಭ್ಯರ್ಥಿ ಸಂಸದ ಗದ್ದಿಗೌಡರನ್ನು ಉದ್ದೇಶಿಸಿ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

ಈ ದೇವಸ್ಥಾನದಲ್ಲಿ ದೇವರಿಗೆ ಮದ್ಯ ನೈವೇದ್ಯ! ಇಲ್ಲಿನ ಭಕ್ತರಿಗೆ ಇದೇ ತೀರ್ಥ ಪ್ರಸಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
