ಬಾಗಲಕೋಟೆ:ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಕ್ಷೇತಕ್ಕೆ ‘ಕೈ’ ಅಭ್ಯರ್ಥಿಯಾಗಿ ಯಾರು ಹೊರಹೊಮ್ಮಲ್ಲಿದ್ದಾರೆ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿತ್ತು. ಈ ಮಧ್ಯೆ ಟಿಕೆಟ್​ ಸ್ಪರ್ಧೆಯಲ್ಲಿದ್ದ ಶಾಸಕ ವಿಜಯಾನಂದ ಪತ್ನಿ ವೀಣಾ ಕಾಶಪ್ಪನವರ ಮತ್ತು ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮಧ್ಯೆ ಭಾರೀ ಹಣಾಹಣಿ ಇತ್ತು. ಆದ್ರೆ, ಕಾಂಗ್ರೆಸ್​ ತನ್ನ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಸಂಯುಕ್ತಾಗೆ ಟಿಕೆಟ್​ ಫೈನಲ್ ಆಯಿತು. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಬಲಿಗರೊಂದಿಗೆ ಸಭೆ ಕರೆದ ವೀಣಾ ಕಾಶಪ್ಪನವರ, ಟಿಕೆಟ್​ ಕೈತಪ್ಪಿದ್ದಕ್ಕೆ ಕಣ್ಣೀರಿಟ್ಟರು.
ಇದನ್ನೂ ಓದಿ:ಚಂದ್ರಗ್ರಹಣ 2024: ಹೋಳಿಯಲ್ಲಿ ಚಂದ್ರಗ್ರಹಣದ ನೆರಳು, ಎಲ್ಲಾ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?
ವೀಣಾ ಕಾಶಪ್ಪನವರಿಗೆ ಟಿಕೆಟ್​ ಮಿಸ್​ ಆಗಿದ್ದೇ ತಡ, ತೀವ್ರ ಅಸಮಾಧಾನ ಹೊರಹಾಕಿದ ಬೆಂಬಲಿಗರು, ಕಾಂಗ್ರೆಸ್​ ಹಾಗೂ ಸಚಿವ ಶಿವಾನಂದ ಪಾಟೀಲ ಪುತ್ತಿ ಸಂಯುಕ್ತಾ ಪಾಟೀಲ ವಿರುದ್ಧ ಕಿಡಿಕಾರಿದರು. ಕೈ ಟಿಕೆಟ್​ ತಪ್ಪಿದರೇನು, ಪಕ್ಷೇತರ ಅಭ್ಯರ್ಥಿಯಾಗಿ ನೀವು ಸ್ಪರ್ಧಿಸಿ, ನಾವು ಗೆಲ್ಲಿಸುತ್ತೇವೆ ಎಂದು ವೀಣಾ ಬೆಂಬಲಿಗರು ಧ್ವನಿ ಎತ್ತಿದರು. ಟಿಕೆಟ್ ವಿಚಾರವಾಗಿ ವೀಣಾ ದಂಪತಿ ಭಾರೀ ಬೇಸರ ವ್ಯಕ್ತಪಡಿಸಿದ ಹಿನ್ನೆಲೆ ಇದೀಗ ಸಂಯುಕ್ತಾ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ವೀಣಾ ನಮ್ಮ‌ಅಕ್ಕ ಇದ್ದಹಾಗೆ, ಕಾಂಗ್ರೆಸ್ ಒಂದು ಕುಟುಂಬ, ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಭಿಪ್ರಾಯ ಮೂಡುವುದು ಸಹಜ.ನಮ್ಮ ಹಿರಿಯರು, ಹೈಕಮಾಂಡ್ ಎಲ್ಲರನ್ನು ಒಗ್ಗೂಡಿಸುತ್ತಾರೆ. ವೀಣಾರನ್ನು ಶೀಘ್ರವೇ ಭೇಟಿ ಮಾಡ್ತೀನಿ. ಅಕ್ಕನನ್ನು ಬಿಟ್ಟು ಚುನಾವಣೆ ನಡೆಸೋದು ಹೇಗೆ? ಅವರು ಇರಬೇಕು. ನಾವೆಲ್ಲಾ ಸೇರಿ ಚುನಾವಣೆ ಮಾಡ್ತೇವೆ ಎಂದರು.
ಇದನ್ನೂ ಓದಿ:ಯೂಟ್ಯೂಬರ್, ಬಿಗ್ ಬಾಸ್ ಒಟಿಟಿ 2 ವಿಜೇತ ಎಲ್ವಿಶ್ ಯಾದವ್‌ಗೆ ಬಿಗ್ ರಿಲೀಫ್; ಜಾಮೀನು ನೀಡಿದ ಗುರುಗ್ರಾಮ್ ಕೋರ್ಟ್
ಪಕ್ಷ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಅಭ್ಯರ್ಥಿಯಾಗಿದ್ದಕ್ಕೆ ನನಗೆ ಖುಷಿಯೂ ಇದೆ. ಕ್ಷೇತ್ರದಲ್ಲಿ ನನ್ನದೇ ಪ್ರತ್ಯೇಕ ಪ್ರಣಾಳಿಕೆ ಕೊಡ್ತೇನೆ. ಚುನಾವಣೆ ಗೆಲ್ಲಲು ಅನೇಕ ಯೋಜನೆಗಳನ್ನು ಕೂಡ ಹಾಕಿದ್ದೇವೆ ಎಂದು ಬಾದಾಮಿಯಲ್ಲಿ ಸಂಯುಕ್ತಾ ಪಾಟೀಲ ತಿಳಿಸಿದರು.
ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
